ಬೆಂಗಳೂರು: ಆನ್ಲೈನ್ ಔಷಧ ಮಾರಾಟ, ಅಸಹಜ ರಿಯಾಯಿತಿಗಳ ವಿರುದ್ಧ ಮೇ 20ರಂದು ನಡೆಯುವ ರಾಷ್ಟ್ರ ವ್ಯಾಪಿ ಬಂದ್ಗೆ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಕಪ್ಪುಪಟ್ಟಿ ಧರಿಸಿ ನೈತಿಕ ಬೆಂಬಲ ನೀಡಲಾಗುತ್ತದೆ ಎಂದು ಕರ್ನಾಟಕ ಫಾರ್ಮಾ ರಿಟೈಲರ್ಸ್ ಆ್ಯಂಡ್ ಡಿಸ್ಟ್ರಿಬ್ಯೂಟರ್ಸ್ ಆರ್ಗನೈಸೇಷನ್ ತಿಳಿಸಿದೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ಗನೈಸೇಷನ್ ಅಧ್ಯಕ್ಷ ಸಿ. ಜಯರಾಮ್, ‘ಅನಧಿಕೃತ ಆನ್ಲೈನ್ ಔಷಧ ವ್ಯಾಪಾರ, ಜೀವರಕ್ಷಕ ಔಷಧಿಗಳ ಮೇಲೆ ಅಸಹಜ ಹಾಗೂ ಅತಿಯಾದ ರಿಯಾಯಿತಿ ನೀಡುತ್ತಿರುವುದನ್ನು ನಮ್ಮ ಸಂಘಟನೆಯು ಖಂಡಿಸುತ್ತದೆ. ಕ್ವಿಕ್ ಕಾಮರ್ಸ್ ಔಷಧ ಡೆಲಿವರಿ ಆ್ಯಪ್ಗಳು ಮಾಡುತ್ತಿರುವ ಕಾನೂನು ಉಲ್ಲಂಘನೆಯ ವಿರುದ್ಧ ನಾವು ನಿರಂತರವಾಗಿ ಹೋರಾಟ ಮಾಡುತ್ತಿದ್ದೇವೆ. ಈ ಬೆಳವಣಿಗೆಯು ಸಾಂಪ್ರದಾಯಿಕ ಫಾರ್ಮಸಿ ಕ್ಷೇತ್ರಕ್ಕೆ ಮಾತ್ರವಲ್ಲದೇ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತದೆ’ ಎಂದು ದೂರಿದರು.

‘ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಔಷಧ ಅಂಗಡಿಗಳನ್ನು ಮುಚ್ಚದೇ, ಎಂದಿನಂತೆ ಕಾರ್ಯನಿರ್ವಹಿಸಿ, ರೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಸೇವೆ ನೀಡಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.