ಚಂಡೀಗಢ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ತನ್ನ ವೈಫಲ್ಯಗಳಿಗೆ ಪಶ್ಚಿಮ ಏಷ್ಯಾ ಸಂಘರ್ಷವನ್ನು ಹೊಣೆ ಮಾಡುತ್ತಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸಿಂಗ್ ಹೇಳಿದ್ದಾರೆ.

ಕೇಂದ್ರ ಸರ್ಕಾರವು ಆರ್ಥಿಕ ಸ್ಥಿತಿಗತಿಗಳನ್ನು ಜನರಿಂದ ಮುಚ್ಚಿಡುತ್ತಿದೆ ಹಾಗೂ ದೇಶದಲ್ಲಿ ಅಘೋಷಿತ ಲಾಕ್ಡೌನ್ ಜಾರಿಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ತೈಲ ಬೆಲೆ ಏರಿಕೆ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಮಾನ್, ‘ಕೇಂದ್ರವು ಹಲವು ಬಾರಿ ಇಂಧನ ದರ ಏರಿಕೆ ಮಾಡಿದೆ. ಆದರೆ, ಈಗ ಮೋದಿ ಅವರು ಎಲ್ಲದಕ್ಕೂ ಯುದ್ಧವನ್ನೇ ಹೊಣೆ ಮಾಡುತ್ತಾರೆ. ಪೆಟ್ರೋಲ್ ಬೆಲೆ ಏರಿಕೆ ಕುರಿತು ಕೇಳಿದರೆ, ಯುದ್ಧ ನಡೆಯುತ್ತಿದೆ ಎಂದು ಕಾರಣ ನೀಡುತ್ತಾರೆ’ ಎಂದು ಹೇಳಿದ್ದಾರೆ.

ಹಲವು ಕೇಂದ್ರ ಸಚಿವರು ಇಂಧನ ಬೆಲೆಯಲ್ಲಿ ಏರಿಕೆ ಇಲ್ಲ ಎಂದು ಹೇಳಿದ್ದರು. ಆದರೆ, ಪಂಚರಾಜ್ಯ ಚುನಾವಣೆ ಮುಗಿದ ನಂತರ ಬೆಲೆ ಏರಿಕೆ ಮಾಡಿದೆ. ಚುನಾವಣೆಗೆ ಮುಂಚೆ ದೇಶದಲ್ಲಿ ಎಲ್ಲವೂ ಚೆನ್ನಾಗಿತ್ತು, ಆದರೆ ಈಗ ದೇಶವನ್ನು ಉಳಿಸುವ ಕುರಿತು ಅವರು ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಕಾರು ಬಳಸಬೇಡಿ, ಕಚೇರಿಗೆ ತೆರಳಬೇಡಿ, ಮನೆಯಿಂದಲೇ ಕೆಲಸ ಮಾಡಿ, ಚಿನ್ನ ಖರೀದಿಸಬೇಡಿ, ಕಾರ್ಯಕ್ರಮ ಮಾಡಬೇಡಿ ಎಂದು ಕೇಂದ್ರ ಸರ್ಕಾರವು ಕ್ರಮೇಣ ಎಲ್ಲದರ ಮೇಲೂ ನಿರ್ಬಂಧ ವಿಧಿಸುತ್ತಿದೆ. ತೈಲ ಬೆಲೆ ಏರಿಕೆಗೆ ಆರ್ಥಿಕ ಮತ್ತು ವಿದೇಶಾಂಗ ನೀತಿಯ ವೈಫಲ್ಯವೇ ಕಾರಣವಾಗಿದ್ದು, ದೇಶದಲ್ಲಿರುವ ಇಂಧನ ಮತ್ತು ಎಲ್ಪಿಜಿ ಸಂಗ್ರಹದ ಕುರಿತು ಕೇಂದ್ರವು ದೇಶದ ಜನರಿಗೆ ಮಾಹಿತಿ ನೀಡಬೇಕು ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಅವರು ವಿದೇಶ ಪ್ರವಾಸದ ವೇಳೆ ಏನು ಮಾಡುತ್ತಾರೆ? ಅದರ ಕುರಿತು ಸಾರ್ವಜನಿಕರಿಗೆ ಏನು ಮಾಹಿತಿ ನೀಡಿದ್ದಾರೆ? ಕಳೆದ 14 ವರ್ಷಗಳಲ್ಲಿ ಅವರು ಎಂದಾದರೂ ಪತ್ರಿಕಾಗೋಷ್ಠಿ ನಡೆಸಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.

ಇರಾನ್ ಮತ್ತು ಅಮೆರಿಕದ ನಡುವೆ ಯುದ್ಧವಾಗುತ್ತಿದೆ. ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶದಲ್ಲಿ ವಿಧಿಸದಿರುವ ನಿರ್ಬಂಧಗಳನ್ನು ಭಾರತದಲ್ಲಿ ಮಾತ್ರ ಏಕೆ ವಿಧಿಸಲಾಗಿದೆ ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.