ಇಂದೋರ್(ಪಿಟಿಐ): ‘ಧಾರ್ನಲ್ಲಿರುವ ವಿವಾದಿತ ಭೋಜಶಾಲಾ ಸಂಕೀರ್ಣವು ಸರಸ್ವತಿ ದೇವಾಲಯ’ ಎಂದು ಮಧ್ಯಪ್ರದೇಶ ಹೈಕೋರ್ಟ್ ಘೋಷಿಸಿದೆ.

ಇದೇ ವೇಳೆ ಕಮಾಲ್ ಮೌಲಾ ಮಸೀದಿ ನಿರ್ಮಾಣಕ್ಕಾಗಿ ಜಿಲ್ಲೆಯಲ್ಲಿ ಪ್ರತ್ಯೇಕ ಜಮೀನು ಮಂಜೂರು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಅರ್ಜಿ ಸಲ್ಲಿಸುವಂತೆ ಮುಸ್ಲಿಂ ಸಮುದಾಯದವರಿಗೆ ನ್ಯಾಯಾಲಯವು ಸಲಹೆ ನೀಡಿದೆ.

ಭೋಜಶಾಲಾ ದೇವಸ್ಥಾನ-ಕಮಾಲ್ಮೌಲಾ ಮಸೀದಿ ಸಂಕೀರ್ಣ ವಿವಾದಕ್ಕೆ ಸಂಬಂಧಿಸಿದ ತೀರ್ಪಿನಲ್ಲಿ, ಭೋಜಶಾಲಾದಲ್ಲಿ ಸಂಸ್ಕೃತ ಬೋಧನಾ ಕೇಂದ್ರ ಮತ್ತು ಸರಸ್ವತಿ ದೇವಿಯ ದೇವಾಲಯದ ಕುರುಹುಗಳಿವೆ ಎಂದು ನ್ಯಾಯಾಲಯ ಉಲ್ಲೇಖಿಸಿದೆ. ಮಧ್ಯಪ್ರದೇಶ ಹೈಕೋರ್ಟ್ನ ಇಂದೋರ್ ಪೀಠವು ಈ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ಶುಕ್ರವಾರ ಪ್ರಕಟಿಸಿತು.

ಏನಿದು ವಿವಾದ: ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿರುವ ಭೋಜಶಾಲಾ ಸಂಕೀರ್ಣವನ್ನು ಹಿಂದೂ ಸಮುದಾಯ ದವರು ವಾಗ್ದೇವಿ (ಸರಸ್ವತಿ ದೇವತೆ)ಇರುವ ದೇವಾಲಯ ಎಂದು ವಾದಿಸಿದರೆ, ಮುಸ್ಲಿಂ ಸಮುದಾಯ ದವರು ಈ ಸ್ಮಾರಕವನ್ನು ಕಮಾಲ್ ಮೌಲಾ ಮಸೀದಿ ಎಂದು ವಾದಿಸಿದ್ದರು. ಜೈನ ಸಮುದಾಯದ ಅರ್ಜಿದಾರರೊಬ್ಬರು, ವಿವಾದಿತ ಸಂಕೀರ್ಣವು ಮಧ್ಯಕಾಲೀನ ಜೈನ ದೇವಾಲಯ ಮತ್ತು ಗುರುಕುಲ ಎಂದು ವಾದ ಮುಂದಿಟ್ಟಿದ್ದರು.

ಭೋಜಶಾಲಾ ಸಂಕೀರ್ಣದ ವಿವಾದ ಭುಗಿಲೆದ್ದ ನಂತರ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) 2003ರ ಏಪ್ರಿಲ್ 7ರಂದು ಆದೇಶ ಹೊರಡಿಸಿ, ಪ್ರತಿ ಮಂಗಳವಾರ ಹಿಂದೂಗಳು ಸಂಕೀರ್ಣದಲ್ಲಿ ಪೂಜೆ ಸಲ್ಲಿಸಲು ಮತ್ತು ಪ್ರತಿ ಶುಕ್ರವಾರ ಮುಸ್ಲಿಮರು ನಮಾಜ್ ಮಾಡಲು ಅನುಮತಿ ನೀಡಿತ್ತು.

ಹಿಂದೂ ಸಮುದಾಯದವರು ಈ ಆದೇಶವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿ, ಸಂಕೀರ್ಣದಲ್ಲಿ ಪೂಜೆ ಸಲ್ಲಿಸಲು ವಿಶೇಷ ಹಕ್ಕುಗಳನ್ನು ನೀಡುವಂತೆ ಕೋರಿದ್ದರು.

ಹೈಕೋರ್ಟ್ನ ಇಂದೋರ್ ಪೀಠದ ನ್ಯಾಯಮೂರ್ತಿ ವಿಜಯ್ ಕುಮಾರ್ ಶುಕ್ಲಾ ಮತ್ತು ನ್ಯಾಯಮೂರ್ತಿ ಅಲೋಕ್ ಅವಸ್ಥಿ ಅವರು ಇದೇ ವರ್ಷದ ಏಪ್ರಿಲ್ 6ರಂದು ಪ್ರಕರಣಕ್ಕೆ ಸಂಬಂಧಿಸಿದ ಐದು ಅರ್ಜಿಗಳು ಮತ್ತು ಒಂದು ರಿಟ್ ಮೇಲ್ಮನವಿಯ ವಿಚಾರಣೆ ಪ್ರಾರಂಭಿಸಿದ್ದರು.

ವಿಭಿನ್ನ ಧಾರ್ಮಿಕ ನಂಬಿಕೆಗಳು, ಐತಿಹಾಸಿಕ ಹಕ್ಕು ಮಂಡನೆ, ಕಾನೂನು ಅಂಶಗಳು ಮತ್ತು ವಿವಾದಿತ ಸ್ಮಾರಕಕ್ಕೆ ಸಂಬಂಧಿಸಿದ ಸಾವಿರಾರು ದಾಖಲೆಗಳ ಆಧಾರದಲ್ಲಿ ಎಲ್ಲಾ ಕಡೆಯವರ ವಾದಗಳನ್ನು ಆಲಿಸಿದ ನಂತರ, ನ್ಯಾಯಪೀಠವು ಮೇ 12ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.

ವಿಚಾರಣೆಯ ಸಮಯದಲ್ಲಿ, ಹಿಂದೂ, ಮುಸ್ಲಿಂ ಮತ್ತು ಜೈನ ಸಮುದಾಯಗಳ ಅರ್ಜಿದಾರರು ಸುದೀರ್ಘ ವಾದಗಳನ್ನು ಮಂಡಿಸಿದ್ದರು. ಸ್ಮಾರಕದಲ್ಲಿ ತಮ್ಮ ಸಮುದಾಯಗಳಿಗೆ ವಿಶೇಷ ಪೂಜಾ ಹಕ್ಕುಗಳನ್ನು ನೀಡುವಂತೆ ಕೋರಿದ್ದರು.

‘ಎಎಸ್ಐ ಸಮೀಕ್ಷಾ ವರದಿಯು ‘ಪಕ್ಷಪಾತ’ ದಿಂದ ಕೂಡಿದೆ ಮತ್ತು ಹಿಂದೂ ಅರ್ಜಿದಾರರ ಹಕ್ಕುಗಳನ್ನು ಬೆಂಬಲಿಸುವಂತಿದೆ’ ಎಂದು ಮುಸ್ಲಿಂ ಸಮುದಾಯದವರು ನ್ಯಾಯಾಲಯದಲ್ಲಿ ವಾದಿಸಿದ್ದರು. ಈ ವಾದವನ್ನು ತಳ್ಳಿ ಹಾಕಿದ್ದ ಎಎಸ್ಐ, ‘ಮುಸ್ಲಿಂ ಸಮುದಾಯದ ಮೂವರು ಸೇರಿದಂತೆ ತಜ್ಞರ ಸಹಾಯದಿಂದ ವೈಜ್ಞಾನಿಕವಾಗಿ ಸಮೀಕ್ಷಾ ಪ್ರಕ್ರಿಯೆ ಯನ್ನು ನಡೆಸಲಾಗಿದೆ’ ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು.

ಭೋಜಶಾಲಾ ದೇವಸ್ಥಾನ-ಕಮಾಲ್ ಮೌಲಾ ಮಸೀದಿ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆ ನಡೆಸುವಂತೆ ಹೈಕೋರ್ಟ್ 2024ರ ಮಾರ್ಚ್ 11ರಂದು ಎಎಸ್ಐಗೆ ಆದೇಶಿಸಿತ್ತು. ಆ ವರ್ಷದ ಮಾರ್ಚ್ 22 ರಂದು ಎಎಸ್ಐ ಸಮೀಕ್ಷೆ ಪ್ರಾರಂಭಿಸಿತ್ತು. 98 ದಿನಗಳ ಸಮೀಕ್ಷೆಯ ನಂತರ ಜುಲೈ 15ರಂದು ಹೈಕೋರ್ಟ್ಗೆ ತನ್ನ ವರದಿಯನ್ನು ಸಲ್ಲಿಸಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-51-117959635

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.