ಬೀದರ್: ‘ಕಾಂಗ್ರೆಸ್ ಪಕ್ಷವು ಸಂಸತ್ತಿನಲ್ಲಿ ಮಹಿಳಾ ಮೀಸಲು ವಿಧೇಯಕದ ವಿರುದ್ಧ ಮತ ಚಲಾಯಿಸಿ, ಅದನ್ನು ಸೋಲಿಸುವ ಕೆಲಸ ಮಾಡಿದ್ದು, ಆ ಪಕ್ಷಕ್ಕೆ ಮಹಿಳೆಯರ ಶಾಪ ತಟ್ಟಲಿದೆ’ ಎಂದು ಕೇಂದ್ರದ ಮಾಜಿ ಸಚಿವರೂ ಆದ ಬಿಜೆಪಿ ಮುಖಂಡ ಭಗವಂತ ಖೂಬಾ ಭವಿಷ್ಯ ನುಡಿದರು.

12ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರು ಅಕ್ಕ ಮಹಾದೇವಿ, ಅಕ್ಕ ನಾಗಮ್ಮ, ಆಯ್ದಕ್ಕಿ ಲಕ್ಕಮ್ಮ, ಕಲ್ಯಾಣಮ್ಮ ಸೇರಿದಂತೆ ಇತರೆ ಶಿವಶರಣೆಯರಿಗೆ ಶೇ 50ರಷ್ಟು ಸ್ಥಾನ ಕಲ್ಪಿಸಿ, ಪುರುಷರಿಗೆ ಸರಿಸಮಾನವಾಗಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಿದ್ದರು. ಅನುಭವ ಮಂಟಪ ಜನ್ಮತಳೆದ ಈ ದೇಶದ ಸಂಸತ್ತಿನಲ್ಲಿ ಮಹಿಳೆಯರ ಪರವಾದ ಮಸೂದೆ ಮಂಡಿಸಿದಾಗ ಅದನ್ನು ವಿರೋಧಿಸಿ ಕಾಯ್ದೆಯಾಗದಂತೆ ಕಾಂಗ್ರೆಸ್ ಪಕ್ಷ ಕೆಲಸ ಮಾಡಿದೆ. ಇದರಿಂದ ಇಡೀ ಮಹಿಳಾ ಕುಲಕ್ಕೆ ಅಪಮಾನವಾಗಿದ್ದು, ಬರುವ ದಿನಗಳಲ್ಲಿ ಆ ಪಕ್ಷಕ್ಕೆ ಪಾಠ ಕಲಿಸಲಿದ್ದಾರೆ ಎಂದು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮಹಿಳಾ ಮೀಸಲಾತಿ ವಿಧೇಯಕದಿಂದ ದಕ್ಷಿಣದ ರಾಜ್ಯಗಳಿಗೆ ಯಾವುದೇ ಹಾನಿಯಾಗುವುದಿಲ್ಲ. ಬದಲಿಗೆ ಕ್ಷೇತ್ರ ಪುನರ್ ವಿಂಗಡಣೆಯಿಂದ ಕರ್ನಾಟಕದಲ್ಲಿ ಪರಿಶಿಷ್ಟರಿಗೆ ಈಗಿರುವ ಲೋಕಸಭೆಯ 9 ಸ್ಥಾನಗಳ ಬದಲು 11 ಸ್ಥಾನಗಳಾಗುತ್ತವೆ. ಒಟ್ಟು ಸ್ಥಾನಗಳ ಸಂಖ್ಯೆ 28 ರಿಂದ 42ಕ್ಕೆ ಹೆಚ್ಚಾಗಲಿವೆ. ಮಹಿಳೆಯರು, ಪರಿಶಿಷ್ಟ ಜಾತಿ ಹಾಗೂ ಬುಡಕಟ್ಟು ಜನಾಂಗದವರಿಗೂ ಅವಕಾಶಗಳು ಲಭಿಸುತ್ತಿದ್ದವು ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಸದಸ್ಯ ಶಶಿಧರ ಹೊಸಳ್ಳಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಶಕುಂತಲಾ ಬೆಲ್ದಾಳೆ, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಲಕ್ಷ್ಮೀ ಕೌಟಗೆ, ಕಾರ್ಯದರ್ಶಿ ಲುಂಬಿಣಿ ಗೌತಮ, ಜಿಲ್ಲಾ ಮಾಧ್ಯಮ ವಿಭಾಗದ ಸಂಚಾಲಕ ಶ್ರೀನಿವಾಸ ಚೌಧರಿ, ಎಸ್.ಟಿ ಘಟಕದ ಪ್ರಧಾನ ಕಾರ್ಯದರ್ಶಿ ಅರುಣ ಬಾವಗೆ, ಮುಖಂಡ ಗುರುನಾಥ ಜ್ಯಾಂತಿಕರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-33-1737443173

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.