ಪಟ್ನಾ: ಗಯಾ ಕ್ಷೇತ್ರದ ಬಿಜೆಪಿಯ ಹಿರಿಯ ಶಾಸಕ ಪ್ರೇಮ್ ಕುಮಾರ್ ಅವರು ಬಿಹಾರ ವಿಧಾನಸಭೆಯ ಸ್ಪೀಕರ್ ಆಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಸ್ಪೀಕರ್ ಆಗಿ ಆಯ್ಕೆಯಾದ ಅವರನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ವಿಪಕ್ಷ ತೇಜಸ್ವಿ ಯಾದವ್ ಅವರು ಸಂಪ್ರದಾಯದಂತೆ ಸ್ಪೀಕರ್ ಕುರ್ಚಿಗೆ ಕರೆದುಕೊಂಡು ಬಂದರು.

ಈ ವೇಳೆ ಮಾತನಾಡಿದ ತೇಜಸ್ವಿ, ‘ನೀವು ಬುದ್ಧನ ಭೂಮಿಯಿಂದ ಬಂದಿದ್ದೀರಿ. ವಿರೋಧ ಪಕ್ಷದೊಂದಿಗೆ ನ್ಯಾಯಯುತವಾಗಿ ವರ್ತಿಸುತ್ತೀರಿ ಮತ್ತು ವಿಪಕ್ಷಗಳ ಮಾತನ್ನು ತಾಳ್ಮೆಯಿಂದ ಆಲಿಸುವಿರಿ ಎಂದು ಆಶಿಸುತ್ತೇವೆ’ ಎಂದು ಹೇಳಿದರು.

ಪ್ರೇಮ್ ಕುಮಾರ್ ಅವರು ಬರೋಬ್ಬರಿ ಒಂಬತ್ತು ಬಾರಿ ಗಯಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. 1990ರಲ್ಲಿ ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾಗಿದ್ದ ಅವರು, ಅಂದಿನಿಂದ ಯಾವುದೇ ಚುನಾವಣೆಗಳಲ್ಲಿ ಸೋತಿಲ್ಲ.

‘ಸರ್ವಾನುಮತದ ಆಯ್ಕೆಯಿಂದ ಸಂತೋಷವಾಗಿದೆ. ಸರ್ಕಾರ ಮತ್ತು ವಿಪಕ್ಷಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಲು ಮತ್ತು ನಿಯಮಗಳ ಪ್ರಕಾರ ಕಲಾಪಗಳನ್ನು ನಡೆಸುತ್ತೇನೆ. ಭವಿಷ್ಯದ ಪೀಳಿಗೆಗೆ ಮಾದರಿಯಾಗುವೆ’ ಎಂದು ಪ್ರೇಮ್ ಕುಮಾರ್ ಹೇಳಿದರು.

ಈ ಹಿಂದೆ ನಿತೀಶ್ ಸಂಪುಟದಲ್ಲಿ ನಗರಾಭಿವೃದ್ಧಿ ಮತ್ತು ಕೃಷಿ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಅವರು, ಇತಿಹಾಸದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.