ಪಟ್ನಾ: ಬಿಹಾರದ ಎಲ್ಲ ಸರ್ಕಾರಿ ನೌಕರರು ತಮ್ಮ ಕುಟುಂಬದೊಂದಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ರಾಜ್ಯದಲ್ಲಿರುವ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಬೇಕು ಮತ್ತು ಅವುಗಳನ್ನು ಹೇಗೆ ಪ್ರಚುರಪಡಿಸುವುದು ಎಂಬ ಬಗ್ಗೆ ವರದಿ ನೀಡಬೇಕು ಎಂದು ಬಿಹಾರ ಸರ್ಕಾರ ನಿರ್ದೇಶನ ನೀಡಿದೆ.

ಸರ್ಕಾರಿ ನೌಕರರು ತಮ್ಮ ತವರು ಜಿಲ್ಲೆ ಹೊರತು ಪಡಿಸಿ ರಾಜ್ಯದ ಇತರ ಜಿಲ್ಲೆಗಳಲ್ಲಿರುವ ಪರಿಸರ ಪ್ರವಾಸೋದ್ಯಮ ಅಥವಾ ಗ್ರಾಮೀಣ ಪ್ರವಾಸಿ ತಾಣಗಳಿಗೆ ಎರಡು ರಾತ್ರಿ, ಎರಡು ಹಗಲು ಕಡ್ಡಾಯವಾಗಿ ಪ್ರವಾಸ ಮಾಡಬೇಕು ಎಂದು ಆದೇಶಿಸಲಾಗಿದೆ.

ಪ್ರವಾಸವನ್ನು ಶುಕ್ರವಾರ ಮತ್ತು ಶನಿವಾರ ನಿಗದಿಪಡಿಸಲಾಗಿದ್ದು, ಈ ಸಮಯದಲ್ಲಿ ನೌಕರರು ಕನಿಷ್ಠ ಮೂರು ತಾಣಗಳಿಗೆ ಭೇಟಿ ನೀಡಿ ಅಲ್ಲಿ ರಾತ್ರಿ ತಂಗುವ ನಿರೀಕ್ಷೆಯಿದೆ ಎಂದು ಆದೇಶ ಪತ್ರದಲ್ಲಿ ತಿಳಿಸಲಾಗಿದೆ.

ಈ ಪ್ರವಾಸದ ಸಂದರ್ಭದಲ್ಲಿ ಅಧಿಕಾರಿಗಳು ಪರಿಶೀಲನಾ ಸಭೆ ಮತ್ತು ಅಧಿಕೃತ ತಪಾಸಣೆಯನ್ನು ನಡೆಸುವಂತಿಲ್ಲ. ಪ್ರವಾಸದ ಬಳಿಕ ಅಲ್ಲಿನ ಚಿತ್ರ, ಮಾಹಿತಿ ಮತ್ತು ತಮ್ಮ ಅನುಭವಗಳನ್ನು ಒಳಗೊಂಡ ವರದಿಯನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಥವಾ ಸಂಬಂಧಿಸಿದ ಇಲಾಖೆಗಳಿಗೆ ಸಲ್ಲಿಸಬೇಕು. ಪ್ರವಾಸದ ಅವಧಿಯನ್ನು ಕರ್ತವ್ಯದ ಅವಧಿಯೆಂದು ಪರಿಗಣಿಸಲಾಗುತ್ತದೆ.

ಬಿಹಾರದ ಪ್ರವಾಸಿ ತಾಣಗಳು ಮತ್ತು ಅಲ್ಲಿನ ಮೂಲಸೌಕರ್ಯಗಳ ಅಭಿವೃದ್ಧಿಯ ದೃಷ್ಟಿಯಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.