ಪಟ್ನಾ: ದುಂದುವೆಚ್ಚಕ್ಕೆ ಕಡಿವಾಣ ಹಾಕಿ, ಸರಳತೆ ಪಾಲಿಸುವಂತೆ ಮತ್ತು ವೋಕಲ್ ಫಾರ್ ಲೋಕಲ್ ತತ್ವ ಅಳವಡಿಸಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಕರೆಗೆ ಬಿಹಾರ ಸರ್ಕಾರ ಹೊಸ ರೂಪ ನೀಡಿದೆ.

ಬಿಹಾರ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ರಾಜ್ಯ ಸರ್ಕಾರದ ಅಧಿಕಾರಿಗಳ ವಿದೇಶ ಪ್ರವಾಸವನ್ನು ಮುಂದಿನ ಆರು ತಿಂಗಳ ಕಾಲ ಬ್ಯಾನ್ ಮಾಡಲು ಮತ್ತು ಸ್ಥಳೀಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಗಂಭೀರ ಚಿಂತನೆ ನಡೆಸಿದ್ದಾರೆ.

ಈ ಮಹತ್ವಾಕಾಂಕ್ಷಿ ಯೋಜನೆಯಡಿ, ಬಿಹಾರದ ಉನ್ನತ ಅಧಿಕಾರಿಗಳು ತಮ್ಮ ಕುಟುಂಬದೊಂದಿಗೆ ವಿದೇಶಗಳಿಗೆ ಹೋಗುವ ಬದಲಿಗೆ ರಾಜ್ಯದ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ, ಶುಕ್ರವಾರ ಮತ್ತು ಶನಿವಾರ ರಾತ್ರಿ ಅಲ್ಲಿಯೇ ತಂಗುವುದನ್ನು ಕಡ್ಡಾಯಗೊಳಿಸಲು ಉದ್ದೇಶಿಸಲಾಗಿದೆ.

‘ಅಧಿಕಾರಿಗಳು ಬಿಹಾರದೊಳಗಿನ ಯಾವುದೇ ಪ್ರವಾಸಿ ತಾಣವನ್ನು ಆಯ್ಕೆ ಮಾಡಿಕೊಂಡು ಮೂರು ತಿಂಗಳಿಗೊಮ್ಮೆ ತಮ್ಮ ಕುಟುಂಬದೊಂದಿಗೆ ಭೇಟಿ ನೀಡಬೇಕಾಗುತ್ತದೆ. ಅಧಿಕಾರಿಗೆ ಅನ್ವಯವಾಗುವ ಪ್ರಯಾಣ ಭತ್ಯೆಯನ್ನು ಸರ್ಕಾರವೇ ನೀಡಲಿದೆ. ಆದರೆ ಕುಟುಂಬ ಸದಸ್ಯರ ಹೆಚ್ಚುವರಿ ವೆಚ್ಚವನ್ನು ಸಂಬಂಧಪಟ್ಟ ಅಧಿಕಾರಿಯೇ ಭರಿಸಬೇಕಾಗುತ್ತದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾಮ್ರಾಟ್ ಚೌಧರಿ ಅವರು, ಈ ನಡೆಗೆ ‘ಲೋಕಲ್ ಫಾರ್ ವೋಕಲ್’ ಎಂದು ಹೆಸರಿಟ್ಟಿದ್ದಾರೆ. ದೇಶಿ ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಮತ್ತು ಸರ್ಕಾರದ ಅನಗತ್ಯ ವೆಚ್ಚಗಳನ್ನು ಕಡಿತಗೊಳಿಸುವುದು ಅವರ ಮುಖ್ಯ ಉದ್ದೇಶವಾಗಿದ್ದು, ಸಾಧ್ಯವಿರುವೆಡೆಯಲ್ಲೆಲ್ಲಾ ವೆಚ್ಚ ಕಡಿತಗೊಳಿಸುವುದು ಮುಖ್ಯಮಂತ್ರಿಗಳ ಮೂಲ ಆಶಯವಾಗಿದೆ. ಜೊತೆಗೆ ಈ ಹೊಸ ಕ್ರಮದಿಂದ ಮೂರು ಪ್ರಮುಖ ಪ್ರಯೋಜನಗಳು ಸಿಗಲಿವೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ

ಹಲವು ವರ್ಷಗಳಿಂದ ಅನ್ವೇಷಣೆಗೆ ಒಳಗಾಗದೆ ಉಳಿದಿರುವ ರಾಜ್ಯದ ಪ್ರವಾಸಿ ತಾಣಗಳು ಮುನ್ನೆಲೆಗೆ ಬರುತ್ತವೆ ಮತ್ತು ದೇಶಿ ಪ್ರವಾಸೋದ್ಯಮದ ನಕ್ಷೆಯಲ್ಲಿ ಸ್ಥಾನ ಪಡೆಯುತ್ತವೆ.

ಪ್ರವಾಸ ಕೈಗೊಳ್ಳುವ ಅಧಿಕಾರಿಗಳು ಕಡ್ಡಾಯವಾಗಿ ಅಲ್ಲಿನ ಫೋಟೋಗಳನ್ನು ಹಾಗೂ ತಮ್ಮ ಅನಿಸಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಬೇಕು. ಅಲ್ಲಿ ಯಾವುದಾದರೂ ಮೂಲಸೌಕರ್ಯಗಳ ಕೊರತೆಯಿದ್ದರೆ, ಅದನ್ನು ಸರಿಪಡಿಸಲು ಸರ್ಕಾರಕ್ಕೆ ನೇರ ಮಾಹಿತಿ ಸಿಗುತ್ತದೆ.

ಈ ಅಧಿಕಾರಿಗಳಿಂದ ಪ್ರೇರಿತರಾಗಿ ಬಿಹಾರದ ಸಾಮಾನ್ಯ ಜನರೂ ಸಹ ಹೊರಗಿನ ರಾಜ್ಯ ಅಥವಾ ದೇಶಗಳಿಗೆ ಹೋಗುವ ಬದಲು ತಮ್ಮದೇ ರಾಜ್ಯದಲ್ಲಿ ಪ್ರವಾಸ ಮಾಡಿ ಹಣ ಖರ್ಚು ಮಾಡುತ್ತಾರೆ. ಇದರಿಂದ ಸ್ಥಳೀಯವಾಗಿ ನೂರಾರು ಜನರಿಗೆ ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ.

ಈ ಯೋಜನೆಯನ್ನು ವ್ಯವಸ್ಥಿತವಾಗಿ ಜಾರಿಗೊಳಿಸಲು ರಾಜ್ಯ ಸರ್ಕಾರವು ಶೀಘ್ರದಲ್ಲೇ ನೋಡಲ್ ಅಧಿಕಾರಿಗಳನ್ನು ನೇಮಿಸಲಿದ್ದು, ಅವರು ಹಳ್ಳಿಗಳಲ್ಲಿ ಹೋಮ್ಸ್ಟೇ ಮತ್ತು ಪರಿಸರ ಪ್ರವಾಸೋದ್ಯಮವನ್ನು ಉತ್ತೇಜಿಸಲು ನೆರವಾಗಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.