ನವದೆಹಲಿ: ಅತಿವೇಗದ ಬೈಕ್ ರೇಸಿಂಗ್ ದುರಂತದಲ್ಲಿ ಐವರು ಮೃತಪಟ್ಟಿರುವ ಘಟನೆ ತೆಲಂಗಾಣದ ಮಹಬೂಬ್ನಗರದ ಪಾಲಕೊಂಡ ಬೈಪಾಸ್ ರಸ್ತೆಯಲ್ಲಿ ನಡೆದಿದೆ. ನಿಯಂತ್ರಣ ತಪ್ಪಿದ ಹಯಾಬುಸಾ ಬೈಕ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಭೀಕರ ಅಪಘಾತ ಸಂಭವಿಸಿದೆ. ಅತಿವೇಗವಾಗಿ ಬೈಕ್ ಚಲಾಯಿಸಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಸ್ಪೋರ್ಟ್ಸ್ ಬೈಕ್ನಲ್ಲಿದ್ದ ಇಬ್ಬರು ಯುವಕರು ಸುಮಾರು 140 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದರು ಎನ್ನಲಾಗಿದೆ. ಈ ವೇಳೆ ನಿಯಂತ್ರಣ ತಪ್ಪಿದ ಸ್ಪೋರ್ಟ್ಸ್ ಬೈಕ್ ಎದುರಿಗಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ತೀವ್ರತೆಗೆ ಕಾರಿನಲ್ಲಿದ್ದ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಅರ್ಶಿಯಾ ಬೇಗಂ (30), ಉಜೇಪಾ (7) ಮತ್ತು ಅಮರ್ (2) ಎಂದು ಗುರುತಿಸಲಾಗಿದೆ.

ಇನ್ನು, ಬೈಕ್ನಲ್ಲಿದ್ದ ಇಬ್ಬರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಮೃತ ಸವಾರರಲ್ಲಿ ಒಬ್ಬನನ್ನು ಯಾಕೂಬ್ ಅಫ್ಜಲ್ (25) ಎಂದು ಗುರುತಿಸಲಾಗಿದ್ದು, ಮತ್ತೊಬ್ಬನ ಗುರುತು ಇನ್ನು ಪತ್ತೆಯಾಗಬೇಕಿದೆ.

ಹಯಾಬುಸಾ ಬೈಕ್ಗಳು 300 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದ್ದು, ಒಂದು ಕಾಲದಲ್ಲಿ ವಿಶ್ವದ ಅತಿವೇಗದ ಬೈಕ್ ಎಂಬ ಹೆಗ್ಗಳಿಕೆ ಪಡೆದಿದ್ದವು. ಸ್ಥಳೀಯರ ಪ್ರಕಾರ, ಪಾಲಕೊಂಡ ಬೈಪಾಸ್ ರಸ್ತೆ ಇತ್ತೀಚಿನ ದಿನಗಳಲ್ಲಿ ಯುವಕರ ರೇಸಿಂಗ್ ಮತ್ತು ಸ್ಟಂಟ್ಗಳಿಗೆ ಅಖಾಡವಾಗಿ ಮಾರ್ಪಟ್ಟಿದೆ. ‘ಪ್ರತಿದಿನ ರಾತ್ರಿ ಯುವಕರು ಇಲ್ಲಿ ಕಿರುಚಾಡುತ್ತಾ, ಅತಿಯಾಗಿ ಶಬ್ದ ಮಾಡುವ ಸ್ಪೋರ್ಟ್ಸ್ ಬೈಕ್ಗಳಲ್ಲಿ ರೇಸಿಂಗ್ ಮಾಡುತ್ತಾರೆ. ಈ ಬಗ್ಗೆ ನಾವು ಹಲವು ಬಾರಿ ದೂರು ನೀಡಿದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಇನ್ನು ಮುಂದೆ ಇಂತಹ ಅಕ್ರಮ ರೇಸಿಂಗ್ ತಡೆಯಲು ರಾತ್ರಿ ಗಸ್ತು ಹೆಚ್ಚಿಸಬೇಕು. ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಮತ್ತು ಸ್ಪೀಡ್ ಗನ್ಗಳನ್ನು ಬಳಸಿ ವೇಗಕ್ಕೆ ಬ್ರೇಕ್ ಹಾಕಬೇಕು’ ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.