ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಗೆ ನೇಮಕ

Published 8 ಜುಲೈ 2023, 20:20 IST
Last Updated 8 ಜುಲೈ 2023, 20:20 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಗೆ ಹತ್ತು ಹೊಸ ಸದಸ್ಯರನ್ನು ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಶನಿವಾರ ನೇಮಿಸಿದ್ದಾರೆ. ಇವರಲ್ಲಿ ಎಂಟು ಮಂದಿ ವಿವಿಧ ರಾಜ್ಯ ಘಟಕಗಳ ಚುಕ್ಕಾಣಿ ಹಿಡಿದಿದ್ದವರು.

ಬಂಡಿ ಸಂಜಯ್ ಕುಮಾರ್, ದೀಪಕ್ ಪ್ರಕಾಶ್, ಸತೀಶ್ ಪೂನಿಯಾ, ಸಂಜಯ್ ಜೈಸ್ವಾಲ್‌, ಸೋಮು ವೀರರಾಜು, ಸುರೇಶ್‌ ಕಶ್ಯಪ್, ವಿಷ್ಣುದೇವ್ ಸಾಯಿ, ಅಶ್ವನಿ ಶರ್ಮಾ ಕ್ರಮವಾಗಿ ತೆಲಂಗಾಣ, ಜಾರ್ಖಂಡ್, ರಾಜಸ್ಥಾನ, ಬಿಹಾರ, ಆಂಧ್ರಪ್ರದೇಶ, ಹಿಮಾಚಲ ಪ್ರದೇಶ, ಛತ್ತೀಸಗಡ, ಪಂಜಾಬ್‌ ಘಟಕಗಳ ಮಾಜಿ ಅಧ್ಯಕ್ಷರಾಗಿದ್ದವರು.

ಛತ್ತೀಸಗಡದ ಧರ್ಮಲಾಲ್ ಕೌಶಿಕ್, ರಾಜಸ್ಥಾನದ ಕಿರೋಡಿಲಾಲ್ ಮೀನಾ ಸಹ ರಾಷ್ಟ್ರೀಯ ಕಾರ್ಯಕಾರಿಣಿಗೆ ಹೊಸ ಸದಸ್ಯರಾಗಿ ನೇಮಕಗೊಂಡಿದ್ದಾರೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ. ಛತ್ತೀಸಗಡ, ರಾಜಸ್ಥಾನದಲ್ಲಿ ಈ ವರ್ಷದ ಅಂತ್ಯಕ್ಕೆ ವಿಧಾನಸಭಾ ಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT