ಕೋಲ್ಕತ್ತ: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ನೋಪಾರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರ್ಜುನ್ ಸಿಂಗ್ ಅವರು, ಚುನಾವಣಾ ಅಫಿಡವಿಟ್ನಲ್ಲಿ ತಮ್ಮ ವಿರುದ್ಧ ಬಾಕಿ ಇರುವ 119 ಕ್ರಿಮಿನಲ್ ಪ್ರಕರಣಗಳನ್ನು ಉಲ್ಲೇಖಿಸಿದ್ದಾರೆ.

ಅರ್ಜುನ್ ಸಿಂಗ್ ವಿರುದ್ಧ 2019ರಲ್ಲಿ 24 ಪ್ರಕರಣಗಳು ಇದ್ದವು. ಇದು 7 ವರ್ಷಗಳಲ್ಲಿ ಹಲವು ಪಟ್ಟು ಹೆಚ್ಚಿದೆ ಎನ್ನುವುದು ಗಮನಾರ್ಹ.

ಬ್ಯಾರಕ್ಪೋರ್ನ ಮಾಜಿ ಸಂಸದರೂ ಆಗಿರುವ ಸಿಂಗ್, ನಾಮಪತ್ರದ ಜತೆಗೆ ತಮ್ಮಆದಾಯ, ಆಸ್ತಿ, ಸಾಲ ಮತ್ತಿತರ ಮಾಹಿತಿ ಒಳಗೊಂಡ ಸುದೀರ್ಘ 93 ಪುಟಗಳ ಅಫಿಡವಿಟ್ ಸಲ್ಲಿಸಿದ್ದಾರೆ. ಅಫಿಡವಿಟ್ ಪ್ರಕಾರ ಅವರ ವಾರ್ಷಿಕ ಆದಾಯವು ಕಳೆದ ಐದು ವರ್ಷಗಳಲ್ಲಿ ಭಾರಿ ಏರಿಳಿತ ಕಂಡಿದೆ.

2020–21ರಲ್ಲಿ ಅವರು ₹13.41 ಲಕ್ಷ ಆದಾಯ ಘೋಷಿಸಿಕೊಂಡಿದ್ದರು. 2021–22ರಲ್ಲಿ ಇದು ₹12.26 ಲಕ್ಷಕ್ಕೆ ಕುಸಿದಿದ್ದಾಗಿ ಹೇಳಿದ್ದಾರೆ. 2023–24ರಲ್ಲಿ ₹18.87 ಲಕ್ಷ ಆದಾಯ ಉಲ್ಲೇಖಿಸಿದ್ದ ಸಿಂಗ್ 2024–25ರಲ್ಲಿ ಈ ಆದಾಯ ಮತ್ತೆ ₹13.65 ಲಕ್ಷಕ್ಕೆ ಕುಸಿದಿದ್ದಾಗಿ ಹೇಳಿದ್ದಾರೆ.

ಸದ್ಯ ₹25 ಸಾವಿರ ನಗದು, ₹5 ಲಕ್ಷ ಠೇವಣಿ, ಕಂಪನಿಯೊಂದರಲ್ಲಿ ₹24 ಲಕ್ಷ ಹೂಡಿಕೆ, ಎನ್ಎಸ್ಸಿಯಲ್ಲಿ ₹1.65 ಲಕ್ಷ ಉಳಿತಾಯ, ಟೊಯೊಟಾ ಫಾರ್ಚೂನರ್ ಕಾರು, ₹3.89 ಲಕ್ಷ ಮೌಲ್ಯದ ಚಿನ್ನಾಭರಣ, ಜಗದಲ್ ಮತ್ತು ಚಂದನಗರ್ನಲ್ಲಿ ₹4 ಕೋಟಿ ಮೊತ್ತದ ಸ್ಥಿರಾಸ್ತಿ ಹೊಂದಿರುವುದಾಗಿ ಈ ಬಾರಿಯ ಅಫಿಡವಿಟ್ನಲ್ಲಿ ಉಲ್ಲೇಖಿಸಿದ್ದಾರೆ.

‘ಇಡೀ ಸಂಪುಟ ಬಂದರೂ ಗೆಲ್ಲಲಾಗದು’

‘ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಗೆಲ್ಲುವುದಕ್ಕಾಗಿ ಪ್ರಧಾನಿ ಸೇರಿದಂತೆ ಇಡೀ ಕೇಂದ್ರ ಸಂಪುಟವನ್ನೇ ಬಿಜೆಪಿ ನಿಯೋಜಿಸಿದೆ. ಜತೆಗೆ ಎನ್ಡಿಎ ಆಡಳಿತದ 19 ರಾಜ್ಯಗಳ ಮುಖ್ಯಮಂತ್ರಿಗಳೂ ಇಲ್ಲಿ ಪ್ರಚಾರಕ್ಕೆ ಮುಂದಾಗಿದ್ದಾರೆ. ಈ ಎಲ್ಲಾ ಆರ್ಭಟಗಳು ಮೇ 4ಕ್ಕೆ ನೆಲಕಚ್ಚಲಿವೆ’ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಹೇಳಿದ್ದಾರೆ.

ಹೂಗ್ಲಿ ಜಿಲ್ಲೆಯಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿರುವ ಮಮತಾ,
‘ಸುಮಾರು 50 ಹೆಲಿಕಾಪ್ಟರ್ಗಳು ಪಶ್ಚಿಮ ಬಂಗಾಳಕ್ಕೆ ಬಂದಿಳಿದಿದ್ದು, ಪ್ರಧಾನಿ ಸೇರಿದಂತೆ ಇಡೀ ಕೇಂದ್ರ ಸಂಪುಟವೇ ಬಂದಿದೆ. ಆದರೆ, ಟಿಎಂಸಿ ಮೂರು ಹೆಲಿಕಾಪ್ಟರ್ಗಳಲ್ಲೇ ಇಡೀ ರಾಜ್ಯದಾದ್ಯಂತ ಪ್ರಚಾರ ನಡೆಸುತ್ತಿದೆ’ ಎಂದಿದ್ದಾರೆ.

ಹೋದ ಕಡೆಯಲ್ಲೆಲ್ಲಾ ಕೇಂದ್ರ ಪಡೆಗಳು ಕಾಣುತ್ತಿದ್ದು, ಶಸ್ತ್ರ ಸಜ್ಜಿತ ವಾಹನಗಳನ್ನೂ ಅವರು ರಾಜ್ಯಕ್ಕೆ ತಂದಿದ್ದಾರೆ. ಎಲ್ಲಿ ಅವುಗಳ ಅವಶ್ಯಕತೆ ಇದೆಯೋ ಅಲ್ಲಿ ನಿಯೋಜಿಸಿಲ್ಲ ಎಂದೂ ಮಮತಾ ಟೀಕಿಸಿದ್ದಾರೆ.

‘ಬಿಜೆಪಿ ಅಧಿಕಾರಕ್ಕೆ ಬಂದರೆ ಟಿಎಂಸಿ ಬೆಂಬಲಿತ ಗೂಂಡಾಗಳನ್ನು ತಲೆಕೆಳಗಾಗಿ ನೇತುಹಾಕಲಾಗುವುದು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿರುವ ಬಗ್ಗೆಯೂ ಮಮತಾ ಕಿಡಿಕಾರಿದ್ದಾರೆ.

‘ಒಬ್ಬ ಗೃಹ ಸಚಿವ ಮತ್ತು ಜವಾಬ್ದಾರಿಯುತ ನಾಯಕರಾಗಿ ನೀವು ಅಂಥ ಮಾತುಗಳನ್ನು ಆಡಬಾರದು. ನೀವು ಭಯೋತ್ಪಾದಕರ ಭಾಷೆಯಲ್ಲಿ ಮಾತನಾಡುತ್ತಿದ್ದೀರಿ. ಇದಕ್ಕಾಗಿ ನಿಮ್ಮ ವಿರುದ್ಧ ಯಾವ ಕ್ರಮವನ್ನೂ ತೆಗೆದುಕೊಳ್ಳುವುದಿಲ್ಲ ಎಂಬುದು ನನಗೆ ಗೊತ್ತು. ಆದರೂ. ನಿಮ್ಮ ಭಾಷಣದ ವಿಡಿಯೊಗಳನ್ನು ಮಾಡಿ, ಅದನ್ನೇ ನ್ಯಾಯಾಲಯದ ಮುಂದೆ ಇಡುವಂತೆ ನಾನು ನಮ್ಮವರಿಗೆ ಹೇಳಿದ್ದೇನೆ’ ಎಂದೂ ಮಮತಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.