ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳೆಯರ ಧ್ವನಿ ಅಡಗಿಸುವ ಕಾಂಗ್ರೆಸ್: ರಾಜೀವ್ ಚಂದ್ರಶೇಖರ್‌

Published 2 ಸೆಪ್ಟೆಂಬರ್ 2024, 16:31 IST
Last Updated 2 ಸೆಪ್ಟೆಂಬರ್ 2024, 16:31 IST
ಅಕ್ಷರ ಗಾತ್ರ

ನವದೆಹಲಿ: ‘ಕಾಂಗ್ರೆಸ್‌ ಪಕ್ಷದವರು ತಾವು ಮಹಿಳೆಯರ ಪರ ಇದ್ದೇವೆ ಎಂದು ಹೇಳುತ್ತಾರಾದರೂ, ವಾಸ್ತವದಲ್ಲಿ ಮಹಿಳೆಯರ ಧ್ವನಿ ಅಡಗಿಸುವ ಕೆಲಸ ಮಾಡುತ್ತಾರೆ’ ಎಂದು ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್‌ ಸೋಮವಾರ ಟೀಕಿಸಿದ್ದಾರೆ.

ಕೇರಳದಲ್ಲಿ ಕಾಂಗ್ರೆಸ್‌ ನಾಯಕಿಯನ್ನು ಪಕ್ಷದಿಂದ ಉಚ್ಚಾಟನೆ ಮಾಡಿರುವುದನ್ನು ಪ್ರಸ್ತಾಪಿಸಿದ ಅವರು, ‘ಮಹಿಳೆಯೊಬ್ಬರು ಕೆಲಸದ ಸ್ಥಳದಲ್ಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಆರೋಪ ಮಾಡಿದರೆ ಆ ಬಗ್ಗೆ ತನಿಖೆ ನಡೆಸಿ, ನ್ಯಾಯ ಒದಗಿಸಿಕೊಡುವುದು ಸಂಬಂಧಪಟ್ಟ ಸಂಸ್ಥೆಯ ಕರ್ತವ್ಯ’ ಎಂದು ಹೇಳಿದ್ದಾರೆ.

‘ಆದರೆ ಕಾಂಗ್ರೆಸ್‌ಗೆ ಅದರಲ್ಲಿ ನಂಬಿಕೆಯಿಲ್ಲ. ಪಕ್ಷದಲ್ಲಿ ತಮಗೆ ಲೈಂಗಿಕ ಕಿರುಕುಳ ಎದುರಾಗಿದೆ ಎಂದು ದೂರಿರುವ ನಾಯಕಿಯನ್ನು ಪಕ್ಷದಿಂದಲೇ ಹೊರಹಾಕಿ ಧ್ವನಿ ಅಡಗಿಸುವ ಕೆಲಸ ಮಾಡಿದೆ’ ಎಂದು ಟೀಕಿಸಿದ್ದಾರೆ.

ಕೇರಳ ಕಾಂಗ್ರೆಸ್‌ನ ನಾಯಕಿ ಸಿಮಿ ರೋಸ್‌ಬೆಲ್ ಜಾನ್‌ ಅವರು, ‘ಕೇರಳ ಚಿತ್ರರಂಗದಲ್ಲಿ ನಡೆದಂಥ ಘಟನೆ ಕೇರಳ ಕಾಂಗ್ರೆಸ್‌ನಲ್ಲೂ ನಡೆಯುತ್ತಿದೆ. ಹಿರಿಯ ನಾಯಕರ ಜತೆ ಆತ್ಮೀಯವಾಗಿದ್ದರೆ ಮಾತ್ರ ಪಕ್ಷದಲ್ಲಿ ಒಳ್ಳೆಯ ಅವಕಾಶಗಳು ಸಿಗುತ್ತವೆ. ಮಹಿಳೆಯರು ಉನ್ನತ ಹುದ್ದೆಗೇರಲು ಶೋಷಣೆಯನ್ನು ಸಹಿಸಿಕೊಳ್ಳಬೇಕಾಗುತ್ತದೆ’ ಎಂದು ಅರೋಪಿಸಿದ್ದರು.

ಈ ಆರೋಪವನ್ನು ಅಲ್ಲಗಳೆದಿದ್ದ ಕೇರಳ ಮಹಿಳಾ ಕಾಂಗ್ರೆಸ್‌, ಪಕ್ಷದ ಶಿಸ್ತು ಉಲ್ಲಂಘಿಸಿದ ಕಾರಣ ನೀಡಿ ಸಿಮಿ ಅವರನ್ನು ಉಚ್ಚಾಟಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT