ಕೋಲ್ಕತ್ತ: ಬಿಜೆಪಿಯನ್ನು ಕೇಂದ್ರದಲ್ಲಿ ಅಧಿಕಾರದಿಂದ ಕೆಳಗಿಳಿಸುವುದಾಗಿ ಪ್ರತಿಜ್ಞೆ ಮಾಡಿರುವ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಬುಧವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಮತಾ ಅವರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅನ್ನು ರಾಜ್ಯದಲ್ಲಿ ಯಾರೂ ನಂಬುವುದಿಲ್ಲ ಎಂದು ಟೀಕಿಸಿದ್ದಾರೆ.

ಕಾಲಿಘಾಟ್ನಲ್ಲಿ ಪಕ್ಷದ ಶಾಸಕರೊಂದಿಗೆ ಮಾತನಾಡಿದ್ದ ಮಮತಾ, ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಕೇಂದ್ರದಲ್ಲಿ ಅಧಿಕಾರದಿಂದ ಕಿತ್ತೊಗೆಯಲಾಗುವುದು ಎಂದು ಗುಡುಗಿದ್ದರು.

ಅದಕ್ಕೆ ಪ್ರತಿಕ್ರಿಯಿಸಿರುವ ಭಟ್ಟಾಚಾರ್ಯ, ‘ಇನ್ನೂ ಬೇಕಾದಷ್ಟು ಸಮಯವಿದೆ, ಅವರು ಪ್ರಯತ್ನ ಮಾಡಲಿ. ಬಂಗಾಳದಲ್ಲಿ ಅವರು ಮಾಡುವಂತಹದ್ದು ಏನೂ ಇಲ್ಲ. ವಿಶ್ವಾಸಾರ್ಹತೆ ಕಳೆದುಕೋಂಡಿದೆ. ಅವರ ಟಿಎಂಸಿ ಪಕ್ಷದ ಪರ ಯಾರೊಬ್ಬರೂ ಇಲ್ಲ’ ಎಂದಿದ್ದಾರೆ.

ಮುಂದುವರಿದು, ಟಿಎಂಸಿಗೆ ತಳಮಟ್ಟದಲ್ಲಿ ಸಂಘಟನಾತ್ಮಕ ಶಕ್ತಿಯೇ ಇಲ್ಲ ಎಂದು ಹೇಳಿದ್ದಾರೆ.

‘ಬಿಜೆಪಿ ಧ್ವಜಗಳನ್ನು ತೆರವುಗೊಳಿಸಿ, ಅಲ್ಲಿಗೆ ತಮ್ಮ ಪಕ್ಷದ ಬಾವುಟಗಳನ್ನು ನೆಡುವಂತಹವರು ಆ ಟಿಎಂಸಿಯಲ್ಲಿ ಯಾರೂ ಇಲ್ಲ. ಮಮತಾ ಏನು ಬೇಕಾದರೂ ಮಾಡಿಕೊಳ್ಳಲಿ’ ಎಂದು ಸವಾಲು ಹಾಕಿದ್ದಾರೆ.

294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಟಿಎಂಸಿ ಮುಖಭಂಗ ಅನುಭವಿಸಿದೆ. 2021ರಲ್ಲಿ 215 ಕ್ಷೇತ್ರಗಳಲ್ಲಿ ಗೆದ್ದು ಸತತ ಮೂರನೇ ಅವಧಿಗೆ ಅಧಿಕಾರ ಹಿಡಿದಿದ್ದ ಮಮತಾ ಪಕ್ಷ, ಈ ಬಾರಿ 80 ಸ್ಥಾನಗಳಿಗೆ ಕುಸಿದಿದೆ.

207 ಕ್ಷೇತ್ರಗಳಲ್ಲಿ ಜಯ ಸಾಧಿಸುವ ಮೂಲಕ ಭಾರಿ ಬಹುಮತ ಗಳಿಸಿರುವ ಬಿಜೆಪಿ, ಇದೇ ಮೊದಲ ಬಾರಿಗೆ ಬಂಗಾಳದಲ್ಲಿ ಸರ್ಕಾರ ರಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.