ನವದೆಹಲಿ: ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದ್ದು, ಇತರ ಹಿಂದುಳಿದ ವರ್ಗಗಳ (ಒಬಿಸಿ) ಪ್ರಾತಿನಿಧ್ಯದ ವಿಷಯದಲ್ಲಿ ರಾಹುಲ್ ಬೂಟಾಟಿಕೆ ಬಹಿರಂಗವಾಗಿದೆ ಎಂದು ಆರೋಪಿಸಿದೆ.

ರಾಹುಲ್ ಗಾಂಧಿಯವರು ಜಾತಿ ಜನಗಣತಿ ಮತ್ತು ಒಬಿಸಿಗಳಿಗೆ ಅನುಪಾತದ ಹಕ್ಕುಗಳ ಬಗ್ಗೆ ಆಗಾಗ್ಗೆ ಮಾತನಾಡುತ್ತಾರೆ. ಆದರೆ, ಒಬಿಸಿ ನಾಯಕರನ್ನು ಉನ್ನತ ಹುದ್ದೆಗೆ ಏರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಪಕ್ಷ ಹೇಳಿದೆ.

ಈ ಕುರಿತು ವಿಡಿಯೊ ಸಂದೇಶ ಬಿಡುಗಡೆ ಮಾಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಲಾ, ಕಾಂಗ್ರೆಸ್ನ ರಾಜ್ಯ ಘಟಕಗಳು ಅಥವಾ ಸರ್ಕಾರಗಳ ಚುಕ್ಕಾಣಿ ಹಿಡಿದುರುವ ಬಹುತೇಕ ಕಾಂಗ್ರೆಸ್ ನಾಯಕರು ಒಬಿಸಿ ಸಮುದಾಯಕ್ಕೆ ಸೇರಿದವರಲ್ಲ ಎಂದು ಹೇಳಿದ್ದಾರೆ.

‘ಹಕ್ಕುಗಳು ಜನಸಂಖ್ಯೆಯ ಅನುಪಾತಕ್ಕೆ ಅನುಗುಣವಾಗಿರಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಜಾತಿ ಸಮಸ್ಯೆಗಳ ಬಗ್ಗೆ ಪದೇ ಪದೇ ಚರ್ಚಿಸುತ್ತಾರೆ. ಆದರೂ, ಅವರ ತತ್ವಗಳು ಆನೆಯ ದಂತಗಳಂತೆ ಕಾಣುದಕ್ಕಿಂತ ಅವುಗಳ ಬಳಕೆ ಭಿನ್ನವಾಗಿದೆ. ರಾಹುಲ್ ಒಬ್ಬ ಕಪಟಿ. ಹೇಳುವುದೊಂದಾದರೆ ಮಾಡುವುದು ಇನ್ನೊಂದು’ಎಂದು ಪೂನವಾಲಾ ದೂಷಿಸಿದ್ದಾರೆ.

ಒಬಿಸಿ ಸಮುದಾಯಗಳನ್ನು ಪ್ರತಿನಿಧಿಸದ ಕಾಂಗ್ರೆಸ್ ನಾಯಕರಾದ ವಿ.ಡಿ. ಸತೀಶನ್ (ಕೇರಳ), ಸುಖವಿಂದರ್ ಸಿಂಗ್ ಸುಖು (ಹಿಮಾಚಲ ಪ್ರದೇಶ), ಮತ್ತು ರೇವಂತ್ ರೆಡ್ಡಿ(ತೆಲಂಗಾಣ) ಅವರನ್ನು ಕಾಂಗ್ರೆಸ್ ಮುಖ್ಯಮಂತ್ರಿ ಹುದ್ದೆಗೇರಿಸಿದೆ ಎಂದು ಪೂನಾವಾಲಾ ಹೇಳಿದ್ದಾರೆ.
.ಮಗ ರಾಜನಾಗುತ್ತಾನೆಂದು ಕನಸು ಕಂಡಿದ್ದ ಬೋರಮ್ಮ.. 2 ಬಾರಿ ಸಿಎಂ ಆದ ಸಿದ್ದರಾಮಯ್ಯ.ರಾಜ್ಯಸಭೆಗೆ ಹೋಗಲ್ಲ, ರಾಜ್ಯ ರಾಜಕಾರಣದಲ್ಲೇ ಉಳಿಯುವೆ: ಸಿದ್ದರಾಮಯ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.