ಚೆನ್ನೈ: ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರು ತಮಿಳುನಾಡು ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಣಾಳಿಕೆಯನ್ನು ಮಂಗಳವಾರ ಬಿಡುಗಡೆ ಮಾಡಿದರು.

ಮಾಜಿ ರಾಜ್ಯಪಾಲ ತಮಿಳಿಸೈ ಸೌಂದರ್ರಾಜನ್ ಅವರ ನೇತೃತ್ವದ 13 ಸದಸ್ಯರನ್ನೊಳಗೊಂಡ ಸಮಿತಿ ಸಿದ್ದಪಡಿಸಿರುವ ಈ ಪ್ರಣಾಳಿಕೆಯಲ್ಲಿ ಆಡಳಿತ, ಕಾನೂನು ಮತ್ತು ಸುವ್ಯವಸ್ಥೆ, ಸಾಮಾಜಿಕ ನ್ಯಾಯ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ, ಆರೋಗ್ಯ ಮತ್ತು ರೈತರ ಕಲ್ಯಾಣ ಸೇರಿದಂತೆ 12 ಪ್ರಮುಖ ವಿಷಯಗಳನ್ನು ಒಳಗೊಂಡಿದೆ. ಮತಗಳನ್ನು ಸೆಳೆಯಲು ಮಹಿಳೆಯರು, ರೈತರು ಮತ್ತು ಯುವಜನತೆ ಗುರಿಯಾಗಿಸಿಕೊಂಡು ಮಹತ್ವದ ಭರವಸೆಗಳನ್ನು ಘೋಷಿಸಲಾಗಿದೆ.

ತಮಿಳರ ಹೊಸ ವರ್ಷಾಚರಣೆ ದಿನದಂದೇ ಬಿಡುಗಡೆಯಾದ ಪ್ರಣಾಳಿಕೆಯಲ್ಲಿ, ಸುಬ್ರಹ್ಮಣ್ಯ ಸ್ವಾಮಿ (ಮುರುಗ) ದೇವರನ್ನು ಗೌರವಿಸಲು ’ಥೈಪೂಸಂ’ ಅನ್ನು ರಾಜ್ಯದ ಹಬ್ಬವೆಂದು ಘೋಷಿಸಲಾಗುವುದು. ತಿರುಪ್ಪರನ್ಕುಂಡ್ರಂ ಬೆಟ್ಟದಲ್ಲಿ ಕಾರ್ತಿಕ ದೀಪವನ್ನು ಬೆಳಗಿಸುವ ಸಂಪ್ರದಾಯವನ್ನು ಪುನರಾರಂಭಿಸಿ, ಆಚರಣೆಯನ್ನು ರಕ್ಷಿಸಲಾಗುವುದು ಎಂದು ಭರವಸೆ ನೀಡಲಾಗಿದೆ.

ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ನಡ್ಡಾ, ‘ತಮಿಳುನಾಡಿನ ಜನರು ಡಿಎಂಕೆ ಆಳ್ವಿಯಿಂದ ಬೇಸರಗೊಂಡಿದ್ದಾರೆ. ಕುಟುಂಬ ಆಡಳಿತವನ್ನು ಕೊನೆಗಾಣಿಸಲು ಬಯಸುತ್ತಿದ್ದಾರೆ’ ಎಂದು ಹೇಳಿದರು. ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರದಲ್ಲಿ ರಾಜ್ಯವನ್ನು ‘ಸಾಂಸ್ಕೃತಿಕ ರಾಜಧಾನಿ‘ಯಿಂದ ‘ಅಪರಾಧ ರಾಜಧಾನಿ‘ ಯನ್ನಾಗಿ ಮಾಡಲಾಗಿದೆ ಎಂದು ಅವರು ಆರೋಪಿಸಿದರು.

ಪ್ರಮುಖ ಘೋಷಣೆಗಳು

ಮನೆ ಯಜಮಾನಿಗೆ ಮಾಸಿಕ ₹2,000 ಆರ್ಥಿಕ ನೆರವು ಮತ್ತು ಪ್ರತಿ ಕುಟುಂಬಕ್ಕೆ ₹10,000 ಅನುದಾನ

ಪ್ರತಿ ಮನೆಗೆ ವಾರ್ಷಿಕ 3 ಎಲ್ಪಿಜಿ ಸಿಲಿಂಡರ್ ಉಚಿತ (ಪೊಂಗಲ್ ಸುಗ್ಗಿಯ ಹಬ್ಬ, ತಮಿಳು ಹೊಸ ವರ್ಷ ಮತ್ತು ದೀಪಾವಳಿಯ ಸಮಯದಲ್ಲಿ ತಲಾ ಒಂದೊಂದು)

ಇ-ಸ್ಕೂಟರ್ ಖರೀದಿಗೆ ಮಹಿಳೆಯರಿಗೆ ₹25,000 ಸಬ್ಸಿಡಿ

ಲೈಂಗಿಕ ಅಪರಾಧಗಳು ಸೇರಿದಂತೆ ಘೋರ ಪ್ರಕರಣಗಳಿಗೆ ತ್ವರಿತಗತಿ ನ್ಯಾಯಾಲಯ ಸ್ಥಾಪನೆ

ಮಹಿಳೆ ನೇತೃತ್ವದ ಸಹಕಾರ ಸಂಘಗಳು, ಸ್ವಸಹಾಯ ಸಂಘಗಳು, ಎಂಎಸ್ಎಂಇಗಳಿಗೆ ₹50 ಲಕ್ಷದವರೆಗೆ ಸಾಲ

ಪಶುಸಂಗೋಪನೆ, ಜಾನುವಾರು ಸಾಕಣೆ, ಸೀಗಡಿ ಸಾಕಾಣಿಕೆ, ಜೇನು ಸಾಕಾಣಿಕೆ ಮತ್ತು ಕೋಳಿ ಸಾಕಾಣಿಕೆ ಮತ್ತಿತರ ಚಟುವಟಿಕೆಗಳಿಗೆ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಒಂದು ಬಾರಿ ₹50,000 ಅನುದಾನ

ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ₹10 ಲಕ್ಷ ಬಡ್ಡಿರಹಿತ ಸಾಲ. ನಿರುದ್ಯೋಗದಿಂದಾಗಿ ಇಎಂಐ ಪಾವತಿಸಲು ಸಾಧ್ಯವಾಗದವರಿಗೆ ಶಿಕ್ಷಣ ಸಾಲ ಮನ್ನಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.