ಜೈಪುರ: ರಾಜಸ್ಥಾನದ ಜೈಸಲ್ಮೇರ್, ಬಾಡಮೇರ್ ಮತ್ತಿತರ ಗಡಿ ಪ್ರದೇಶಗಳಲ್ಲಿ ಭಾನುವಾರ ರಾತ್ರಿ ಮುನ್ನೆಚ್ಚರಿಕೆ ಕ್ರಮವಾಗಿ ಬ್ಲ್ಯಾಕ್ಔಟ್ ಮಾಡಲಾಯಿತು.

ಶನಿವಾರ ಭಾರತ–ಪಾಕಿಸ್ತಾನದ ನಡುವೆ ಸೇನಾ ಸಂಘರ್ಷ ಶಮನವಾದ ನಂತರವೂ ಪಾಕ್ ಒಪ್ಪಂದ ಉಲ್ಲಂಘಿಸಿ ದಾಳಿ ನಡೆಸಿತ್ತು. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಭಾನುವಾರ ರಾತ್ರಿ 7.30ರಿಂದ ಜೈಸಲ್ಮೇರ್ನಲ್ಲಿ ಹಾಗೂ ರಾತ್ರಿ 8ರಿಂದ ಬಾಡಮೇರ್ನಲ್ಲಿ ಬ್ಲ್ಯಾಕ್ಔಟ್ ಮಾಡಲಾಯಿತು.

ಬ್ಲ್ಯಾಕ್ಔಟ್ ಮಾಡಿದ ನಂತರ ಬಾಡಮೇರ್ ಪ್ರದೇಶದಲ್ಲಿ ಕೆಂಪು ಬಣ್ಣದ ವಸ್ತುವೊಂದು ಗೋಚರಿಸಿದ್ದು, ಅದು ಡ್ರೋನ್ ಇರಬಹುದು ಎಂದು ಶಂಕಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ಆದರೆ, ಅದನ್ನು ಅಧಿಕೃತವಾಗಿ ಯಾರೂ ದೃಢಪಡಿಸಿಲ್ಲ.

ಸೇನಾ ಸಿಬ್ಬಂದಿ ಕಟ್ಟೆಚ್ಚರದಿಂದ ಇದ್ದಾರೆ. ಭಾನುವಾರ ರಾಜಸ್ಥಾನದ ಬಹುತೇಕ ಸ್ಥಳಗಳಲ್ಲಿ ಮಾರುಕಟ್ಟೆಗಳಲ್ಲಿ ಎಂದಿನಂತೆ ವ್ಯಾಪಾರ ನಡೆಯಿತು.

ಕೇಂದ್ರ ಸಚಿವ ಗಜೇಂದ್ರಸಿಂಗ್ ಶೆಖಾವತ್ ಅವರು ಸ್ಥಳೀಯ ಅಧಿಕಾರಿಗಳ ಜತೆ ಜೋಧಪುರದಲ್ಲಿ ಸಭೆ ನಡೆಸಿ, ಪರಿಸ್ಥಿತಿಯ ಕುರಿತು ಚರ್ಚೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.