ಬೆಂಗಳೂರು: ವಿವಿಧೆಡೆ ಪೆಟ್ರೋಲ್ ಬಂಕ್ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಖಾಲಿ ಆಗಿವೆ ಎಂಬ ವದಂತಿಗಳು ಹರಿದಾಡುತ್ತಿದ್ದು, ಇವು ಸಂಪೂರ್ಣವಾಗಿ ಆಧಾರರಹಿತವಾದವು ಎಂದು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ತಿಳಿಸಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಕಂಪನಿ, ದೇಶದಲ್ಲಿ ಇಂಧನ ಕೊರತೆ ಉಂಟಾಗಿಲ್ಲ. ಭಾರತ, ಪೆಟ್ರೋಲ್ ಮತ್ತು ಡೀಸೆಲ್ನ ನಿವ್ವಳ ರಫ್ತುದಾರ. ಹೀಗಾಗಿ ನಮ್ಮಲ್ಲಿ ಕಚ್ಚಾ ತೈಲ, ಪೆಟ್ರೋಲ್, ಡೀಸೆಲ್ ಮತ್ತು ಎಟಿಎಫ್ನ ಸಾಕಷ್ಟು ದಾಸ್ತಾನುಗಳಿವೆ. ಸರಬರಾಜು ಸರಪಳಿಗಳು ಯಾವುದೇ ಅಡೆತಡೆಯಿಲ್ಲದೆ ಸರಾಗವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದೆ.
.ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆ ಕಡಿತ; ಒಲೆಯ ಹೊಗೆಗೆ ಅಡುಗೆ ತಯಾರಕರು ಹಿಂದೇಟು.West Asia: ಸಂಘರ್ಷ ಶಮನಕ್ಕೆ ಇರಾನ್ ಮುಂದೆ 15 ಪ್ರಸ್ತಾವನೆ ಇಟ್ಟ ಟ್ರಂಪ್.
ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದ್ದು, ನಿರಂತರ ಇಂಧನ ಪೂರೈಸಲು ಬದ್ಧವಾಗಿದೆ ಎಂದಿದೆ.

ಜನರು ಭಯಭೀತರಾಗಬಾರದು ಅಥವಾ ಅನಗತ್ಯ ಖರೀದಿಯಲ್ಲಿ ತೊಡಗಬಾರದು. ಇಂಧನ ಲಭ್ಯತೆ ಸ್ಥಿರವಾಗಿದೆ ಮತ್ತು ಸಾಕಷ್ಟು ಪ್ರಮಾಣದಲ್ಲಿದೆ ಎಂದು ಬಿಪಿಸಿಎಲ್ ತಿಳಿಸಿದೆ.

ಇತ್ತೀಚೆಗೆ ಹಲವೆಡೆ ಪೆಟ್ರೋಲ್ ಬಂಕ್ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಖಾಲಿ ಆಗಿವೆ. ಹೀಗಾಗಿ ಜನರು ಇತರೆ ಬಂಕ್ಗಳಲ್ಲಿ ಹೆಚ್ಚಿನ ಪೆಟ್ರೋಲ್, ಡಿಸೇಲ್ಗಳನ್ನು ಮುಂಚಿತವಾಗಿ ಖರೀದಿಸುತ್ತಿದ್ದಾರೆ ಎಂಬ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು.
.IPL 2026: ನಾಲ್ಕೇ ನಿಮಿಷಗಳಲ್ಲಿ ಆರ್ಸಿಬಿ ಟಿಕೆಟ್ ಮಾರಾಟ.ಕೊನೆಯಾಯ್ತು 13 ವರ್ಷಗಳ ನೋವು; ದಯಾಮರಣ ಪಡೆದಿದ್ದ ರಾಣಾ ಏಮ್ಸ್ನಲ್ಲಿ ನಿಧನ.ಅನುಚಿತವಾಗಿ ಸ್ಪರ್ಶಿಸಿದ್ದ ನಿರ್ದೇಶಕ, ಲವ್ ಜಿಹಾದ್ ಆರೋಪ ಸುಳ್ಳು: ಮೊನಾಲಿಸಾ.ಫ್ಯಾಕ್ಟ್ ಚೆಕ್: ಬ್ರಿಟನ್ ಯುದ್ಧವನ್ನು ಪ್ರವೇಶಿಸಿದೆ ಎಂಬುದು ಸುಳ್ಳು ಸುದ್ದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.