ಹೈದರಾಬಾದ್ (ಪಿಟಿಐ): ‘1948ರಲ್ಲಿ ಅಂದಿನ ಹೈದರಾಬಾದ್ ರಾಜ್ಯವು ನಿಜಾಮರ ಆಳ್ವಿಕೆಯಿಂದ ಮುಕ್ತವಾಗಿ ಭಾರತದ ಒಕ್ಕೂಟಕ್ಕೆ ಸೇರ್ಪಡೆಯಾದ ದಿನವನ್ನು ಸ್ಮರಿಸಲು ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪಕ್ಷವು ಇದೇ 17ರಂದು ಭಾರತ ಏಕೀಕರಣ ದಿನವನ್ನು ಆಚರಿಸುತ್ತಿದೆ’ ಎಂದು ಪಕ್ಷದ ನಾಯಕ ಮತ್ತು ತೆಲಂಗಾಣ ಸಚಿವ ಕೆ.ಟಿ. ರಾಮರಾವ್ ಅವರು ಭಾನುವಾರ ತಿಳಿಸಿದರು.
ಇದೇ ವೇಳೆ, ರಾಷ್ಟ್ರೀಯ ಏಕೀಕರಣ ದಿನಾಚರಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪಕ್ಷದ ಕಾರ್ಯಕರ್ತರಿಗೆ ಅವರು ಕೋರಿದ್ದಾರೆ.
‘ಬಿಆರ್‌ಎಸ್ ಅಧ್ಯಕ್ಷರೂ ಆಗಿರುವ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಹಾಗೂ ಇತರ ಸಚಿವರು ಆಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯ ಸರ್ಕಾರವು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಈ ಆಚರಣೆಯನ್ನು ಅದ್ಧೂರಿಯಾಗಿ ಆಯೋಜಿಸಲಿದೆ’ ಎಂದರು.
1948ರ ಸೆ.17ರ ನಂತರ ಈ ದಿನವನ್ನು ವಿಮೋಚನಾ ದಿನ ಎಂದು ಆಚರಿಸಲಾಗುತ್ತಿತ್ತು. ಈಗ ಬಿಆರ್‌ಎಸ್ ಪಕ್ಷವು ಭಾರತ ಏಕೀಕರಣ ದಿನವಾಗಿ ಆಚರಿಸಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.