ನವದೆಹಲಿ: 2026–27ರ ಖಾರಿಫ್ ಮಾರುಕಟ್ಟೆ ಋತುವಿಗಾಗಿ 14 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಬುಧವಾರ ಅನುಮೋದನೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಭತ್ತದ ಎಂಎಸ್ಪಿಯನ್ನು ಕ್ವಿಂಟಲ್ಗೆ ₹72 ಹೆಚ್ಚಿಸಲಾಗಿದೆ. ದ್ವಿದಳ ಧಾನ್ಯಗಳು, ಎಣ್ಣೆಬೀಜಗಳು ಮತ್ತು ಹತ್ತಿ ಎಂಎಸ್ಪಿ ಗಣನೀಯ ಏರಿಕೆ ಆಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಎಂಎಸ್ಪಿಯಲ್ಲಿ ಅತ್ಯಧಿಕ ಹೆಚ್ಚಳವನ್ನು ಸೂರ್ಯಕಾಂತಿ ಬೀಜಕ್ಕೆ (ಕ್ವಿಂಟಲ್ಗೆ ₹622), ಹತ್ತಿ (ಕ್ವಿಂಟಲ್ಗೆ ₹557), ಹುಚ್ಚೆಳ್ಳು (ಕ್ವಿಂಟಲ್ಗೆ ₹515) ಮತ್ತು ಎಳ್ಳಿಗೆ (ಕ್ವಿಂಟಲ್ಗೆ ₹500) ಶಿಫಾರಸು ಮಾಡಲಾಗಿದೆ. ಬೆಳೆ ವೈವಿಧ್ಯೀಕರಣ ಉತ್ತೇಜಿಸಲು ಮತ್ತು ಆಮದು ಅವಲಂಬನೆ ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರೈತರಿಗೆ ಲಾಭದಾಯಕ ಬೆಲೆಗಳನ್ನು ಖಚಿತಪಡಿಸಿಕೊಳ್ಳಲು ಮತ್ತು ಎಲ್ಲ 14 ಬೆಳೆಗಳಲ್ಲಿ ಉತ್ಪಾದನಾ ವೆಚ್ಚಕ್ಕಿಂತ ಕನಿಷ್ಠ 50 ಪ್ರತಿಶತದಷ್ಟು ಹೆಚ್ಚಿನ ಎಂಎಸ್ಪಿ ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದರು.

ಸಂಪುಟದ ಇತರ ತೀರ್ಮಾನಗಳು

*ಗುಜರಾತ್ನ ಅಹಮದಾಬಾದ್ ಮತ್ತು ಧೋಲೆರಾ ನಡುವೆ ₹20,667 ಕೋಟಿ ಅಂದಾಜು ವೆಚ್ಚದಲ್ಲಿ 134 ಕಿ.ಮೀ. ಉದ್ದದ ಸೆಮಿ ಹೈ-ಸ್ಪೀಡ್ ಡಬಲ್ ರೈಲು ಮಾರ್ಗದ ನಿರ್ಮಾಣಕ್ಕೆ ಒಪ್ಪಿಗೆ. ಈ ಯೋಜನೆಯು ಸ್ವದೇಶಿ ತಂತ್ರಜ್ಞಾನದೊಂದಿಗೆ ಯೋಜಿಸಲಾದ ಭಾರತೀಯ ರೈಲ್ವೆಯ ಮೊದಲ ಸೆಮಿ ಹೈ-ಸ್ಪೀಡ್ ಕಾರಿಡಾರ್ ಆಗಿರಲಿದೆ. ಈ ಮಾರ್ಗವು 2030–31ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

*ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ನಾಗ್ಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಮತ್ತು ಆಧುನೀಕರಿಸಲು ಅನುಮೋದನೆ.

ಕಲ್ಲಿದ್ದಲು ಅನಿಲೀಕರಣಕ್ಕೆ ₹37,500 ಕೋಟಿ

ಮೇಲ್ಮೈ ಕಲ್ಲಿದ್ದಲು ಮತ್ತು ಲಿಗ್ನೈಟ್ ಅನಿಲೀಕರಣ ಯೋಜನೆಗಳನ್ನು ಉತ್ತೇಜಿಸಲು ₹37,500 ಕೋಟಿಯ ಪ್ರೋತ್ಸಾಹಕ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಈ ಉಪಕ್ರಮವು ಆಮದು ಮಾಡಿಕೊಂಡ ಎಲ್ಎನ್ಜಿ, ಯೂರಿಯಾ, ಮೆಥನಾಲ್ ಮತ್ತು ಇತರ ಪ್ರಮುಖ ಉತ್ಪನ್ನಗಳ ಮೇಲಿನ ಭಾರತದ ಭಾರೀ ಅವಲಂಬನೆ ಕಡಿಮೆ ಮಾಡುವ ಮತ್ತು ದೇಶದ ಇಂಧನ ಸುರಕ್ಷತೆ ಬಲಪಡಿಸುವ ಗುರಿ ಹೊಂದಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು. ಈ ಯೋಜನೆಯು 7.5 ಕೋಟಿ ಟನ್ ಕಲ್ಲಿದ್ದಲಿನ ಅನಿಲೀಕರಣಕ್ಕೆ ಉತ್ತೇಜನ ನೀಡುತ್ತದೆ. ಸುಮಾರು ₹3 ಲಕ್ಷ ಕೋಟಿ ಹೂಡಿಕೆಗಳನ್ನು ಆಕರ್ಷಿಸುವ ನಿರೀಕ್ಷೆಯಿದೆ ಎಂದರು.

ಸ್ಥಾವರ (ಪ್ಲಾಂಟ್) ಮತ್ತು ಯಂತ್ರೋಪಕರಣಗಳ ವೆಚ್ಚದ
ಗರಿಷ್ಠ ಶೇ 20 ರಷ್ಟು ಆರ್ಥಿಕ ಪ್ರೋತ್ಸಾಹ ಒದಗಿಸಲಾಗುತ್ತದೆ.
ಯಾವುದೇ ಒಂದು ಯೋಜನೆಗೆ ನೀಡಲಾಗುವ ಹಣಕಾಸಿನ
ಪ್ರೋತ್ಸಾಹಧನವನ್ನು ₹5,000 ಕೋಟಿಗೆ ಸೀಮಿತ ಗೊಳಿಸಲಾಗಿದೆ. ಯಾವುದೇ ಒಂದು ಉತ್ಪನ್ನಕ್ಕೆ (ಸಿಂಥೆಟಿಕ್ ನೈಸರ್ಗಿಕ ಅನಿಲ ಮತ್ತು ಯೂರಿಯಾ ಹೊರತುಪಡಿಸಿ) ಗರಿಷ್ಠ ₹9,000 ಕೋಟಿಗೆ ಮತ್ತು ಯಾವುದೇ ಒಂದು ಘಟಕ ಸಮೂಹಕ್ಕೆ ಗರಿಷ್ಠ ₹12,000 ಕೋಟಿ ಪ್ರೋತ್ಸಾಹಧನ ನೀಡಲಾಗುತ್ತದೆ. ಯೋಜನೆಗೆ ಅನುಗುಣವಾಗಿ ನಾಲ್ಕು ಸಮಾನ ಕಂತುಗಳಲ್ಲಿ ಪ್ರೋತ್ಸಾಹಧನದ ವಿತರಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.