ಕೋಲ್ಕತ್ತ: ಸಿರಿಗುಡಿಯಲ್ಲಿನ ಟಿಎಂಸಿ ಕಚೇರಿಯಲ್ಲಿ ಮೂವರು ಯುವಕರೊಂದಿಗೆ ಕೇರಂ ಆಟ ಆಡಿದ ಮೂವರು ಸಿಎಪಿಎಫ್ ಸಿಬ್ಬಂದಿಯನ್ನು ಚುನಾವಣಾ ಆಯೋಗ ಅಮಾನತು ಮಾಡಿದೆ. ಆಟ ಆಡುತ್ತಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಬಗ್ಗೆ ಇಲಾಖಾ ವಿಚಾರಣೆಯನ್ನೂ ನಡೆಸಲಾಗಿತ್ತು.

‘ಕೇಂದ್ರೀಯ ಪಡೆಗಳ ಸಿಬ್ಬಂದಿಯನ್ನು ಹೇಗೆ ಮತ್ತು ಯಾರು ನೇಮಕ ಮಾಡುತ್ತಿದ್ದಾರೆ ಎನ್ನುವ ಸ್ಪಷ್ಟತೆ ಇಲ್ಲ. ಇದರಲ್ಲಿ ಸ್ಥಳೀಯ ಆಡಳಿತ ಅಥವಾ ಪೊಲೀಸರ ಪಾತ್ರವಿದ್ದರೆ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಸಿರಿಗುಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗನ್ನಾಥ ಚಟರ್ಜಿ ಹೇಳಿದರು.

‘ಕೇರಂ ಆಡುವುದು ಅಪರಾಧವಲ್ಲ. ಆದರೆ ಪಕ್ಷವೊಂದರ ಕಚೇರಿಯಲ್ಲಿ ಆಡುವುದು ತಪ್ಪು’ ಎಂದು ಕಾಂಗ್ರೆಸ್ ಹೇಳಿದೆ. ‘ಟಿಎಂಸಿ ಸದಸ್ಯರೊಂದಿಗೆ ಮಾತನಾಡುವುದು ಅಪರಾಧವಲ್ಲ ಎಂದು ಇಲ್ಲಿ ಕೆಲಸ ಮಾಡುವವರಿಗೆ ತಿಳಿದಿದೆ. ಅದಕ್ಕಾಗಿಯೇ ಅವರು ಮಾತನಾಡುತ್ತಿದ್ದರು ಕೇರಂ ಆಡುತ್ತಿದ್ದರು’ ಎಂದು ಟಿಎಂಸಿ ಪ್ರತಿಕ್ರಿಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.