ಜನರ ವಿಶ್ವಾಸಕ್ಕೆ ಧಕ್ಕೆ ಸಲ್ಲದು
‘ನ್ಯಾಯಾಂಗ ವ್ಯವಸ್ಥೆಯಲ್ಲಿನ ಉನ್ನತಾಧಿಕಾರಿಯ ಬಗ್ಗೆ ಸಾಮಾನ್ಯ ಜನರ ನಿರೀಕ್ಷೆಗಳು ಹೆಚ್ಚಾಗಿರುತ್ತವೆ. ಅಂಥ ವ್ಯಕ್ತಿಗಳು ಪ್ರಾಮಾಣಿಕರಾಗಿರಲೇಬೇಕು. ಅದು ಮೂಲಭೂತ ಮಾನದಂಡವೂ ಹೌದು. ನ್ಯಾಯಾಂಗದ ಎಲ್ಲಾ ಹಂತದ ಅಧಿಕಾರಿಗಳೂ ಪ್ರಾಮಾಣಿಕರಾಗಿರಲೇಬೇಕು. ಜನರ ವಿಶ್ವಾಸದ ಆಧಾರದಲ್ಲೇ ನ್ಯಾಯಾಂಗದ ಅಸ್ತಿತ್ವವಿದ್ದು ನ್ಯಾಯಮೂರ್ತಿಗಳ ವರ್ತನೆಗಳನ್ನೇ ಆ ವಿಶ್ವಾಸ ಆಧರಿಸಿರುತ್ತದೆ. ನ್ಯಾಯಾಲಯದ ಒಳಗೆ ಮಾತ್ರವಲ್ಲದೆ ಹೊರಗೂ ಆ ನಡವಳಿಕೆ ಮುಖ್ಯ. ಪ್ರಾಮಾಣಿಕತೆಯಲ್ಲಿ ಕೊರತೆಯಾದರೆ ಅದು ಜನರ ವಿಶ್ವಾಸಕ್ಕೆ ಕುಂದು ಉಂಟುಮಾಡುತ್ತದೆ. ಅಂಥ ಪ್ರಕರಣಗಳನ್ನು ಕಟ್ಟುನಿಟ್ಟಾಗಿಯೇ ನಿರ್ವಹಿಸಲಾಗುವುದು’ ಎಂದು ವರ್ಮಾ ಅವರನ್ನು ಸೇವೆಯಿಂದ ವಜಾಗೊಳಿಸಲು ಶಿಫಾರಸು ಮಾಡುವಾಗ ಸಮಿತಿ ಅಭಿಪ್ರಾಯಪಟ್ಟಿದೆ.