ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ) ನಡೆಸಿದ ನೀಟ್–ಯುಜಿ 2026 ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಭೌತವಿಜ್ಞಾನದ ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ ತಂಡದಲ್ಲಿದ್ದ ಪುಣೆಯ ಶಿಕ್ಷಕಿಯನ್ನು ಸಿಬಿಐ ಬಂಧಿಸಿದೆ.

ಪುಣೆಯ ಸೇಠ್ ಹೀರಾಲಾಲ್ ಸರಾಫ್ ಪ್ರಶಾಲಾದ ಶಿಕ್ಷಕಿ ಮನೀಷಾ ಸಂಜಯ್ ಹವಾಲ್ದಾರ್ ಅವರನ್ನು ವಿಚಾರಣೆಯ ನಂತರ ಬಂಧಿಸಲಾಗಿದೆ ಎಂದು ಸಿಬಿಐ ಶುಕ್ರವಾರ ತಿಳಿಸಿದೆ.

ನೀಟ್–ಯುಜಿ 2026 ಪರೀಕ್ಷಾ ಪ್ರಕ್ರಿಯೆಯಲ್ಲಿ ಎನ್ಟಿಎ ತಜ್ಞರಾಗಿ ಮನೀಷಾ ಭಾಗಿಯಾಗಿದ್ದು, ಭೌತವಿಜ್ಞಾನದ ಕೆಲವು ಪ್ರಶ್ನೆಗಳನ್ನು ಈಗಾಗಲೇ ಬಂಧಿತಳಾಗಿರುವ ಆರೋಪಿ ಮನೀಷಾ ಮಂಧರೆ ಅವರೊಂದಿಗೆ ಹಂಚಿಕೊಂಡಿದ್ದಾರೆ. ಪ್ರಶ್ನೆಪತ್ರಿಕೆಯಲ್ಲಿ ಬಂದಂತಹ ಪ್ರಶ್ನೆಗಳು ಇವುಗಳೊಂದಿಗೆ ಹೊಂದಿಕೆಯಾಗಿವೆ ಎಂದು ಸಿಬಿಐ ಪ್ರಕಟಣೆಯಲ್ಲಿ ಹೇಳಿದೆ.

ದೆಹಲಿ, ಜೈಪುರ, ಗುರುಗ್ರಾಮ, ನಾಸಿಕ್, ಪುಣೆ, ಲಾತೂರ್, ಅಹ್ಲಿಯಾನಗರದ 11 ಮಂದಿಯನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.
.ಯಾವುದೇ ಲೋಪವಿಲ್ಲದೆ ನೀಟ್-ಯುಜಿ ಮರು ಪರೀಕ್ಷೆ: ಶಿಕ್ಷಣ ಸಚಿವ ಧರ್ಮೇಂದ್ರ ಭರವಸೆ.ನೀಟ್–ಯುಜಿ ಪ್ರಶ್ನೆಪತ್ರಿಕೆ ‘ಸೋರಿಕೆ’ ಒಪ್ಪದ ಎನ್ಟಿಎ ಅಧಿಕಾರಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.