ನವದೆಹಲಿ: ‘ಆನ್–ಸ್ಕ್ರೀನ್ ಮಾರ್ಕಿಂಗ್ (ಒಎಸ್ಎಂ) ವ್ಯವಸ್ಥೆಯು ಸುರಕ್ಷಿತ ಹಾಗೂ ಬಲಿಷ್ಠವಾದ ಮಾಹಿತಿ ತಂತ್ರಜ್ಞಾನದ ವೇದಿಕೆಯಾಗಿದೆ. ಮೌಲ್ಯಮಾಪನ ಪೋರ್ಟಲ್ನಲ್ಲಿ ಯಾವುದೇ ದೋಷ ಕಂಡುಬಂದಿಲ್ಲ’ ಎಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) ತಿಳಿಸಿದೆ.

‘ಉತ್ತರ ಪತ್ರಿಕೆಗಳ ಸುರಕ್ಷಿತ ಸ್ಕ್ಯಾನಿಂಗ್ ಮತ್ತು ಪ್ರಕ್ರಿಯೆಗಾಗಿ ಈ ವೇದಿಕೆಯನ್ನು ತಪಾಸಣೆಗಳ ಮೂಲಕ ಪರೀಕ್ಷಿಸಿ ಪ್ರಮಾಣೀಕರಿಸಲಾಗಿದೆ. ಇದು ಬಹು ಗುಣಮಟ್ಟದ ತಪಾಸಣೆ ಹಾಗೂ ಸುರಕ್ಷತಾ ಕ್ರಮಗಳನ್ನು ಒಳಗೊಂಡ ಬಲವಾದ ಡಿಜಿಟಲ್ ಮೂಲಸೌಕರ್ಯದ ಬೆಂಬಲವನ್ನು ಹೊಂದಿದೆ’ ಎಂದು ಹೇಳಿದೆ.

‘ಕೋಎಂಪ್ಟ್ ಎಜುಟೆಕ್‘ಗೆ ಒಪ್ಪಂದ ನೀಡಿದ ಕುರಿತಾದ ಆರೋಪಗಳನ್ನು ಸಿಬಿಎಸ್ಇ ತಿರಸ್ಕರಿಸಿದೆ. ‘ಇದು ದಾರಿತಪ್ಪಿಸುವ ಮತ್ತು ಸತ್ಯಕ್ಕೆ ದೂರವಾದ ಸಂಗತಿ. ಸಾಮಾನ್ಯ ಹಣಕಾಸು ನಿಯಮಗಳ ಅಡಿಯಲ್ಲಿ ಸೂಕ್ತ ಕಾರ್ಯವಿಧಾನವನ್ನು ಅನುಸರಿಸಿದ ನಂತರ ಒಪ್ಪಂದ ನೀಡಲಾಗಿದೆ’ ಎಂದು ತಿಳಿಸಿದೆ.

‘ಈ ಬಾರಿ 12ನೇ ತರಗತಿಯ ಉತ್ತರ ಪತ್ರಿಕೆಗಳ ‘ಆನ್ ಸ್ಕ್ರೀನ್ ಮಾರ್ಕಿಂಗ್’ (ಒಎಸ್ಎಂ) ಜವಾಬ್ದಾರಿಯನ್ನು ಕಳಪೆ ನಿರ್ವಹಣೆಯ ದಾಖಲೆ ಹೊಂದಿರುವ ಕೋಎಂಪ್ಟ್ ಎಜುಟೆಕ್ ಕಂಪನಿಗೆ ವಹಿಸಲಾಗಿದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಆರೋಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.