ಹೈದರಾಬಾದ್: ‘ಕೋಎಂಪ್ಟ್’ ಕಂಪನಿ ಮೇಲಿನ ಗಂಭೀರ ಆರೋಪಗಳನ್ನು ನಿರ್ಲಕ್ಷಿಸಿ ಸಿಬಿಎಸ್ಇ 12ನೇ ತರಗತಿಯ ಡಿಜಿಟಲ್ ಮೌಲ್ಯಮಾಪನ ಕಾರ್ಯವನ್ನು ಆ ಕಂಪನಿಗೆ ವಹಿಸಿದೆ ಎಂದು ಬಿಆರ್ಎಸ್ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ಆರೋಪಿಸಿದ್ದಾರೆ.

‘ಕೋಎಂಪ್ಟ್’ ಕಂಪನಿಯು ತೆಲಂಗಾಣದಲ್ಲಿ ‘ಗ್ಲೋಬರೆನಾ’ ಹೆಸರಿನಲ್ಲಿ ಕೆಲಸ ಮಾಡಿತ್ತು. 12ನೇ ತರಗತಿ ಫಲಿತಾಂಶಗಳ ಎಡವಟ್ಟಿನ ನಂತರ ಅಂದಿನ ಬಿಆರ್ಎಸ್ ಸರ್ಕಾರವು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿತ್ತು. ಈ ಸಮಸ್ಯೆಯ ತನಿಖೆಗಾಗಿ ರಚಿಸಲಾದ ಮೂವರು ಸದಸ್ಯರ ಸಮಿತಿಯ ವರದಿಗಳ ಆಧಾರದ ಮೇಲೆ, ಸಂಬಂಧಪಟ್ಟ ಅಧಿಕಾರಿಗಳನ್ನು ವಜಾಗೊಳಿಸಲಾಗಿತ್ತು. ‘ಗ್ಲೋಬರೆನಾ’ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿತ್ತು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.