ನೆಲ್ಯಾಡಿ (ಉಪ್ಪಿನಂಗಡಿ): ‘ಕೇಂದ್ರ ಸರ್ಕಾರದ ಅರ್ಥಹೀನ ವಿದೇಶಾಂಗ ನೀತಿಯಿಂದಾಗಿ ದೇಶದ ಜನರ ಪರಿಸ್ಥಿತಿ ಅಧೋಗತಿಗೆ ಇಳಿದಿದೆ. ಟ್ರಂಪ್ ಅವರ ಗುಲಾಮನಂತೆ ನಮ್ಮ ಪ್ರಧಾನಿ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾತ್ರ ಜನರಿಗೆ ನೆಮ್ಮದಿಯ ಬದುಕು ಸಿಗಲಿದೆ’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್ ಹೇಳಿದರು.

ಎಲ್ಪಿಜಿ ಸಿಲಿಂಡರ್ ದರ ಏರಿಕೆ ಖಂಡಿಸಿ ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ (ಗ್ರಾಮೀಣ) ನೇತೃತ್ವದಲ್ಲಿ ಕಡಬ ಬ್ಲಾಕ್ ಕಾಂಗ್ರೆಸ್, ಕಡಬ ಬ್ಲಾಕ್ ಮಹಿಳಾ ಕಾಂಗ್ರೆಸ್ ಹಾಗೂ ನೆಲ್ಯಾಡಿ ವಲಯ ಕಾಂಗ್ರೆಸ್ ಆಶ್ರಯದಲ್ಲಿ ನೆಲ್ಯಾಡಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ (ಗ್ರಾಮೀಣ) ಅಧ್ಯಕ್ಷೆ ಉಷಾ ಅಂಚನ್, ಎಲ್ಪಿಜಿ ದರ ಏರಿಕೆ ಮೂಲಕ ಕೇಂದ್ರ ಸರ್ಕಾರ ಬಡ ಜನರ ಜೀವನಕ್ಕೆ ಕೊಳ್ಳಿ ಇಟ್ಟಿದೆ. ಬೆಲೆ ಏರಿಕೆ ಹಾಗೂ ಗ್ಯಾಸ್ ಕೊರತೆಯಿಂದಾಗಿ ಜನ ಸಾಮಾನ್ಯರ ಜೀವನ ಬೀದಿಗೆ ಬಂದಿದೆ ಕೇಂದ್ರ ಸರ್ಕಾರದ ದುರಾಡಳಿತದ ವಿರುದ್ಧ ಪ್ರತಿ ಬ್ಲಾಕ್ನಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದರು.

ಮುಖಂಡರಾದ ಪಿ.ಪಿ. ವರ್ಗೀಸ್ ಕಡಬ, ಸರ್ವೋತ್ತಮ ಗೌಡ ನೆಲ್ಯಾಡಿ, ಸರಸ್ವತಿ ಕಾಮತ್, ಪ್ರಮುಖರಾದ ನಮಿತಾ, ಭಾನು ಭಾಸ್ಕರ ಉಡುಪಿ, ವಂದನಾ ಬೆಳ್ತಂಗಡಿ, ತಮನ್ನಾ ಜಬೀನ್ ಮಾತನಾಡಿದರು.

ವಿವಿಧ ಘಟಕಗಳ ಪದಾಧಿಕಾರಿಗಳಾದ ಅಭಿಲಾಷ್, ಐಡಾ ಸುರೇಶ್ ಬಂಟ್ವಾಳ, ಗಫೂರ್, ಗೀತಾ ಕೊಲ್ಚಾರ್, ಬಾಲಕೃಷ್ಣ ಬಳ್ಳೇರಿ, ವಿಜಯ ಕುಮಾರ್ ರೈ, ಇಸ್ಮಾಯಿಲ್ ನೆಲ್ಯಾಡಿ, ಆಶಾ ಲಕ್ಷ್ಮಣ್ ಗುಂಡ್ಯ, ಕೆ.ಟಿ. ವಲ್ಸಮ್ಮ, ಯತೀಶ್ ಬಾನಡ್ಕ ರಾಮಕುಂಜ, ಉಷಾಜೋಯಿ ನೆಲ್ಯಾಡಿ, ಸತೀಶ್ ನಾಯಕ್ ಕಡಬ, ಶಾಲಿನಿ ಸತೀಶ್ ನಾಯಕ್ ಕಡಬ, ಸಲಾಂ ಬಿಲಾಲ್ ಪಡುಬೆಟ್ಟು ಭಾಗವಹಿಸಿದ್ದರು. ಅಶ್ರಫ್ ಶೇಡಿಗುಂಡಿ ಸ್ವಾಗತಿಸಿ, ವಂದಿಸಿದರು.

ಪ್ರತಿಭಟನಾಕಾರರು ಸ್ಥಳದಲ್ಲೇ ಸೌದೆ ಬಳಸಿ ಉಪಾಹಾರ ತಯಾರಿಸಿ ಎಲ್ಲರಿಗೂ ಹಂಚಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-29-727395824

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.