ಅಕ್ಟೋಬರ್ 5ರಂದು ನಡೆಯಲಿರುವ ಹರಿಯಾಣ ವಿಧಾನಸಭಾ ಚುನಾವಣೆಗೆ ಮುನ್ನ ಸೋನಿಪತ್‌ನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ಮೋದಿ ಅವರ ನೇತೃತ್ವದ ಸರ್ಕಾರವು ಕೆಲವೇ ಕೆಲವು ದೊಡ್ಡ ಕೈಗಾರಿಕೋದ್ಯಮಿಗಳ ಹಿತಾಸಕ್ತಿ ಕಾಪಾಡಲು ಕೆಲಸ ಮಾಡುತ್ತಿದೆ. ಬಡವರು, ದಲಿತರು, ರೈತರು ಹಾಗೂ ಯುವಕರ ಕಲ್ಯಾಣಕ್ಕಾಗಿ ಏನನ್ನೂ ಮಾಡುತ್ತಿಲ್ಲ’ ಎಂದು ವಾಗ್ದಾಳಿ ನಡೆಸಿದರು.
ಅಗ್ನಿವೀರ್ ಯೋಜನೆಯು ಸೈನಿಕರ ಪಿಂಚಣಿ, ಕ್ಯಾಂಟೀನ್ ಸೌಲಭ್ಯಗಳು ಮತ್ತು ಹುತಾತ್ಮರ ಸ್ಥಾನಮಾನವನ್ನು ಕಸಿದುಕೊಳ್ಳುವ ಒಂದು ಮಾರ್ಗವಾಗಿದೆ. ಈ ಹಿಂದೆ ಸಾರ್ವಜನಿಕ ವಲಯ, ಸರ್ಕಾರಿ ಕಾರ್ಖಾನೆಗಳಿದ್ದವು. ಇವುಗಳನ್ನೆಲ್ಲ ಖಾಸಗೀಕರಣಗೊಳಿಸಲಾಗಿದೆ. ಈಗ ಎಲ್ಲಿ ನೋಡಿದರೂ ಅದಾನಿ, ಅಂಬಾನಿ ಹೆಸರುಗಳೇ ಕಾಣಿಸುತ್ತವೆ ಎಂದು ಟೀಕಿಸಿದರು.