ರಾಷ್ಟ್ರಪತಿ ಭೇಟಿಯ ಮಾಹಿತಿಯನ್ನೇ ನೀಡಿರಲಿಲ್ಲ: ಮಮತಾ
‘ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಜ್ಯಕ್ಕೆ ನೀಡಿದ ಭೇಟಿಯ ವೇಳೆ ಶಿಷ್ಟಾಚಾರ ಪಾಲನೆಯಲ್ಲಿ ಯಾವುದೇ ರೀತಿಯಲ್ಲೂ ಉಲ್ಲಂಘನೆಯಾಗಿಲ್ಲ. ರಾಷ್ಟ್ರಪತಿ ಅವರ ಭೇಟಿಯ ವಿವರಗಳ ಕುರಿತು ರಾಜ್ಯ ಸರ್ಕಾರಕ್ಕೆ ಮಾಹಿತಿಯೇ ಇರಲಿಲ್ಲ. ಸಮ್ಮೇಳನವನ್ನು ಆಯೋಜಿಸಿದವರೂ ಸರ್ಕಾರಕ್ಕೆ ಮಾಹಿತಿ ನೀಡಿರಲಿಲ್ಲ’ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರು. ದೋಣಿ ಮಾರ್ಗದಲ್ಲಿ ಕಸ ತುಂಬಿಕೊಂಡಿತ್ತು ಶೌಚಾಲಯದಲ್ಲಿ ನೀರಿನ ಕೊರತೆ ಸೇರಿ ಗ್ರೀನ್ ರೂಮ್‌ನಲ್ಲಿನ ಅವ್ಯವಸ್ಥೆ ಆರೋಪದ ಕುರಿತು ಪ್ರತಿಕ್ರಿಯಿಸಿದ ಮಮತಾ ‘ಎಲ್ಲ ಅವ್ಯವಸ್ಥೆಗಳಿಗೂ ಸಮ್ಮೇಳನ ಆಯೋಜಕರು ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವೇ ಹೊಣೆ. ಕಾರ್ಯಕ್ರಮದ ಸ್ಥಳವನ್ನು ನಾವಲ್ಲ ನೀವೇ ಗುರುತಿಸಿದ್ದು’ ಎಂದರು.