ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2024ರ ಚುನಾವಣೆಯಲ್ಲಿ ಜಗನ್ ಮನೆ ಸೇರಲಿದ್ದಾರೆ: ಚಂದ್ರಬಾಬು ನಾಯ್ಡು

Last Updated 6 ಏಪ್ರಿಲ್ 2023, 11:15 IST
ಅಕ್ಷರ ಗಾತ್ರ

ವಿಶಾಖಪಟ್ಟಣ: ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರು, ’ಆಂಧ್ರಪ್ರದೇಶದಲ್ಲಿ ತಮ್ಮ ಪಕ್ಷವು ಮುಂದಿನ ಚುನಾವಣೆಯಲ್ಲಿ ಬಹುಮತ ಪಡೆಯುವುದಲ್ಲದೆ, ವೈಎಸ್ಆರ್‌ ಕಾಂಗ್ರೆಸ್ ಪಕ್ಷವನ್ನು ಅದರ ಭದ್ರಕೋಟೆಯಾದ ಪುಲಿವೆಂದುಲದಲ್ಲೇ ಹೀನಾಯವಾಗಿ ಸೋಲಿಸಲಿದೆ’ ಎಂದರು.

ತಮ್ಮ ಪಕ್ಷದ ವಲಯ ಮಟ್ಟದ ಸಭೆಯಲ್ಲಿ ಚಂದ್ರಬಾಬು ನಾಯ್ಡು ಅವರು ಆಂಧ್ರಪ್ರದೇಶದ ಆಡಳಿತರೂಢ ಪಕ್ಷವಾದ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ನಾಯಕ ಹಾಗೂ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು. ’ಟಿಡಿಪಿ ವಿಧಾನ ಸಭೆಯ ಎಲ್ಲಾ 175 ಸ್ಥಾನಗಳಲ್ಲಿ ಜಯಗಳಿಸುವುದಷ್ಟೇ ಅಲ್ಲದೇ ವೈಎಸ್ಆರ್‌ ಕಾಂಗ್ರೆಸ್‌ನ ನೆಚ್ಚಿನ ಕ್ಷೇತ್ರ ಪುಲಿವೆಂದುಲದಲ್ಲೇ ಅದನ್ನು ಸೋಲಿಸಲಿದೆ.

ಪುಲಿವೆಂದುಲವು ಜಗನ್‌ ಅವರ ಕ್ಷೇತ್ರವಾಗಿದ್ದು, ಇಲ್ಲಿ ಅವರ ಪಕ್ಷದ ಬೇರುಗಳು ಆಳವಾಗಿವೆ. ಈ ಕ್ಷೇತ್ರದ ಮತದಾರರು ವೈಎಸ್‌ಆರ್ ಕಾಂಗ್ರೆಸ್‌ನ ಅಭ್ಯರ್ಥಿಗಳನ್ನು ಸತತವಾಗಿ ಗೆಲ್ಲಿಸುತ್ತಾ ಬಂದಿದ್ದಾರೆ.

’ಇತ್ತೀಚೆಗೆ ನಡೆದ ನಿಗಮ ಮಂಡಳಿಗಳ ಚುನಾವಣೆಯಲ್ಲಿ ಟಿಡಿಪಿ ಮುನ್ನಡೆ ಸಾಧಿಸಿರುವುದು ತೃಪ್ತಿಯಿದೆ. ಇದರ ಅರ್ಥ ವಿಪಕ್ಷ ಮುಂಬರುವ ಚುನಾವಣೆಯಲ್ಲಿ ಬಹುಮತ ಸಾಧಿಸಲಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಗೆಲ್ಲುತ್ತಿರುವುದು ಕೇವಲ ಆರಂಭವಷ್ಟೇ ಮುಂದೆ ಸಂಪೂರ್ಣ ಚಿತ್ರಣ ಸಿಗಲಿದೆ’ ಎಂದು ನಾಯ್ಡು ಹೇಳಿದರು.

’ನಮಗೆ ವ್ಯಕ್ತವಾಗುತ್ತಿರುವ ಜನಬೆಂಬಲ ನೋಡಿ ಮುಖ್ಯಮಂತ್ರಿಗಳಿಗೆ ಅಸುರಕ್ಷಿತ ಭಾವದಲ್ಲಿದ್ದಾರೆ. ಟಿಡಿಪಿ ಆಡಳಿತಕ್ಕೆ ಬಂದರೆ ಆಂಧ್ರವನ್ನು ಜಾಗತಿಕಮಟ್ಟಕ್ಕೆ ಬೆಳೆಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT