ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Chandrayaan-3: ಚಂದ್ರನ ಸನಿಹ ಇಸ್ರೊ ಗಗನನೌಕೆ: ವಿಡಿಯೊ ಬಿಡುಗಡೆ

ವಿಡಿಯೊವನ್ನು ಚಂದ್ರಯಾನ–3 ಟ್ವಿಟರ್ ಹ್ಯಾಂಡಲ್ ಹಂಚಿಕೊಂಡಿದೆ.
Published 7 ಆಗಸ್ಟ್ 2023, 2:21 IST
Last Updated 7 ಆಗಸ್ಟ್ 2023, 2:21 IST
ಅಕ್ಷರ ಗಾತ್ರ

ಬೆಂಗಳೂರು: ಬಾಹ್ಯಾಕಾಶದಲ್ಲಿ 3 ಲಕ್ಷಕ್ಕೂ ಅಧಿಕ ದೂರ ಕ್ರಮಿಸಿದ ನಂತರ ‘ಚಂದ್ರಯಾನ–3’ ಗಗನನೌಕೆಯು ಶನಿವಾರ ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ಸೇರಿತು. ಈ ಕುರಿತು ಗಗನನೌಕೆ ಸೆರೆಹಿಡಿದಿರುವ ಚಂದ್ರನ ಹೊರ ಮೇಲ್ಮೈ ವಿಡಿಯೊವನ್ನು ಚಂದ್ರಯಾನ–3 ಟ್ವಿಟರ್ ಹ್ಯಾಂಡಲ್ ಹಂಚಿಕೊಂಡಿದೆ.

ಚಂದ್ರನಲ್ಲಿ ಇಳಿಯುವ ಮೊದಲು ಚಂದ್ರನ ಕಕ್ಷೆಯ ಮೂಲಕ ಈ ವಿಡಿಯೊಗಳನ್ನು ಸೆರೆ ಹಿಡಿಯಲಾಗಿದೆ ಎಂದು ಚಂದ್ರಯಾನ–3 ಟ್ವಿಟರ್ ಹ್ಯಾಂಡಲ್ ಹೇಳಿದೆ. ಈ ಫೋಟೊ ಮತ್ತು ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹರಿದಾಡಿವೆ. ಚಂದ್ರನ ಮೇಲೆ ಈ ನೌಕೆ ಇಳಿಯಲು ಇನ್ನೇನು 4,000 ಕಿಮೀ ಇದೆ ಎಂದು ತಿಳಿದು ಬಂದಿದೆ.

ಮುಂದಿನ 18 ದಿನಗಳ ಅವಧಿಯಲ್ಲಿ ‘ಚಂದ್ರಯಾನ–3’ ನೌಕೆಯ ವೇಗವನ್ನು ನಿಧಾನವಾಗಿ ಕಡಿಮೆ ಮಾಡಿ, ಅದನ್ನು ಚಂದ್ರನಿಂದ 100 ಕಿ.ಮೀ. ಅಂತರದ ಕೆಳ ಕಕ್ಷೆಗೆ ತರಲಾಗುತ್ತದೆ. ನಂತರ, ಆಗಸ್ಟ್‌ 23ರ ಸಂಜೆ 5.47ಕ್ಕೆ ಚಂದಿರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಇಳಿಸುವ ಪ್ರಯತ್ನ ನಡೆಯುತ್ತಿದೆ.

‘ಚಂದ್ರಯಾನ–3 ನೌಕೆಯನ್ನು ಚಂದ್ರನ ಕಕ್ಷೆಗೆ ಸೇರಿಸುವ ಕಾರ್ಯವನ್ನು ಬೆಂಗಳೂರಿನಲ್ಲಿರುವ ಇಸ್ರೊ ಟೆಲೆಮೆಟ್ರಿ ಟ್ರ್ಯಾಕಿಂಗ್ ಅಂಡ್‌ ಕಮಾಂಡ್ ನೆಟ್‌ವರ್ಕ್‌ (ಐಎಸ್‌ಟಿಆರ್‌ಎಸಿ) ಕೇಂದ್ರದಿಂದ ಯಶಸ್ವಿಯಾಗಿ ನಿರ್ವಹಿಸಲಾಗಿದೆ’ ಎಂದು ಇಸ್ರೊ ತಿಳಿಸಿದೆ.

ರೋವರ್‌ (ಪ್ರಜ್ಞಾನ್‌) ಹೊತ್ತ ಲ್ಯಾಂಡರ್‌ (ವಿಕ್ರಮ್) ಚಂದ್ರಯಾನ–3 ನೌಕೆಯಿಂದ ಬೇರ್ಪಟ್ಟು, ಚಂದ್ರನತ್ತ ಪಯಣ ಬೆಳೆಸಲಿದೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT