ತಿರುವನಂತಪುರಂ: ಕೇರಳದ ಮುಂದಿನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರ ಹೆಸರನ್ನು ಘೋಷಿಸಿದ ಬೆನ್ನಲ್ಲೇ ಹಿರಿಯ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಅವರು ತಮ್ಮ ನಿವಾಸದಿಂದ ಹೊರನಡೆದಿದ್ದಾರೆ.

ಮುಖ್ಯಮಂತ್ರಿ ಸ್ಥಾನದ ರೇಸ್ನಲ್ಲಿ ವಿ.ಡಿ. ಸತೀಶನ್, ಕೆ.ವೇಣುಗೋಪಾಲ್ ಜೊತೆಗೆ ಚೆನ್ನಿತ್ತಲ ಅವರ ಹೆಸರು ಕೇಳಿಬಂದಿತ್ತು.

ಕೇರಳದ ಎಐಸಿಸಿ ಉಸ್ತುವಾರಿ ದೀಪಾ ದಾಸ್ ಮುನ್ಷಿ ಅವರು ಮುಖ್ಯಮಂತ್ರಿ ಹೆಸರು ಪ್ರಕಟಿಸಿದ ಬೆನ್ನಲ್ಲೇ ಚೆನ್ನಿತ್ತಲ ಅವರ ಅಭಿಪ್ರಾಯ ಕೇಳಲು ಸುದ್ದಿಗಾರರು ಇಲ್ಲಿನ ವಳುತಕಾಡ್ನಲ್ಲಿರುವ ಅವರ ನಿವಾಸಕ್ಕೆ ಧಾವಿಸಿದರು. ಆದರೆ, ಪ್ರತಿಕ್ರಿಯೆ ನೀಡಲು ಅವರು ನಿವಾಸದಲ್ಲಿ ಇರಲಿಲ್ಲ.

‘ಚೆನ್ನಿತ್ತಲ ಅವರು ಹೊರಗೆ ಹೋಗಿದ್ದು, ಮನೆಯಲ್ಲಿ ಇಲ್ಲ’ ಎಂದು ಕಾಂಗ್ರೆಸ್ ನಾಯಕ ಜ್ಯೋತಿ ಕುಮಾರ್ ಚಮಕ್ಕಲ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಆದರೆ, ಚೆನ್ನಿತ್ತಲ ಅವರು ಎಲ್ಲಿಗೆ ಹೋಗಿದ್ದಾರೆ ಎಂಬ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿಲ್ಲ.

ಎಐಸಿಸಿ ನಿರ್ಧಾರಕ್ಕೆ ಚೆನ್ನಿತ್ತಲ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಮತ್ತು ಗುರುವಾರ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ಸಭೆಗೆ ಅವರು ಗೈರಾಗುವ ಸಾಧ್ಯತೆಯಿದೆ ಎಂಬ ವರದಿಗಳು ಕೇಳಿಬಂದಿದ್ದವು.

ಆದರೆ, ಈ ವರದಿಗಳನ್ನು ಚೆನ್ನಿತ್ತಲ ಅವರ ಆಪ್ತರು ನಿರಾಕರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.