ಚಿಕ್ಕಮಗಳೂರು: ರಾಷ್ಟ್ರ ಮೊದಲು ಎಂಬ ಧ್ಯೇಯದೊಂದಿಗೆ ಸ್ಥಾಪಿತಗೊಂಡಿರುವ ಏಕೈಕ ರಾಜಕೀಯ ಪಕ್ಷ ಬಿಜೆಪಿ. ರಾಷ್ಟ್ರೀಯ ಹಿತಚಿಂತನೆ ಹಾಗೂ ದೇಶ ಸೇವೆಯೇ ಜನಾರ್ದನ ಸೇವೆ ಎಂಬ ನಂಬಿಕೆ ಮತ್ತು ವಿಶ್ವಾಸದಡಿ ಸಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ತಾಲ್ಲೂಕಿನ ಹುಕ್ಕುಂದ ಗ್ರಾಮದಲ್ಲಿ ಪಂ.ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದ ಗ್ರಾಮಾಂತರ ಮಂಡಳ ಮಟ್ಟದ ಪ್ರಶಿಕ್ಷಣ ವರ್ಗ ಕಾರ್ಯಕ್ರಮದಲ್ಲಿ ಶನಿವಾರ ಅವರು ಮಾತನಾಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ದೇಶ ಕಾಂಗ್ರೆಸ್ ಸರ್ಕಾರದಿಂದ ಮುನ್ನಡೆದಿಲ್ಲ. ಸರ್ವರ ಹೊಂದಾಣಿಕೆ ಮೇರೆಗೆ ರಾಷ್ಟ್ರೀಯ ಸರ್ಕಾರವಾಗಿತ್ತು. ಅಲ್ಲದೆ, ರಾಷ್ಟ್ರದ ಸಂಸ್ಕೃತಿ, ಪರಂಪರೆಯನ್ನು ಬೆಂಬಲಿಸುತ್ತಿರಲಿಲ್ಲ. ಬ್ರಿಟಿಷರ ಆಳ್ವಿಕೆಯಂತೆ ವರ್ತಿಸುತ್ತಿತ್ತು. ಇದನ್ನು ವಿರೋಧಿಸಿ ಸರ್ಕಾರದಲ್ಲಿ ಸಚಿವರಾಗಿದ್ದ ಶ್ಯಾಮ್ಪ್ರಕಾಶ್ ಮುಖರ್ಜಿ ಹಾಗೂ ಅಂಬೇಡ್ಕರ್ ಅವರು ಸ್ಥಾನ ತ್ಯಜಿಸಿ ಹೊರಬಂದಿದ್ದರು ಎಂದರು.

ದೇಶದ ಅವಿಭಾಜ್ಯ ಅಂಗವಾದ ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ, ಕಾನೂನು ಹಾಗೂ ಧ್ವಜವನ್ನು ಕಾಂಗ್ರೆಸ್ ಆಡಳಿತದಲ್ಲಿ ನೀಡಿತ್ತು. ಇದನ್ನು ವಿರೋಧಿಸಿಕೊಂಡೇ ಬಂದಿದ್ದ ಮುಖರ್ಜಿ ಅವರು ಒಂದೇ ದೇಶದಲ್ಲಿ ಎರಡು ಕಾನೂನು, ಧ್ವಜ ಖಂಡಿಸಿ ಜನಸಂಘ ಸ್ಥಾಪಿಸುವ ಮೂಲಕ ಪ್ರತಿಭಟನಾ ಹೋರಾಟ ರೂಪಿಸುತ್ತಿದ್ದರು ಎಂದು ತಿಳಿಸಿದರು.

ಅಂದಿನ ಕಾಲಘಟ್ಟದಲ್ಲಿ ದೇಶದ ಹಿತಕ್ಕಾಗಿ ಜನಸಂಘ ವಿಸರ್ಜಿಸಿ, ಜನತಾ ಪಕ್ಷ ಎಂಬ ರಾಜಕೀಯ ರಚನೆಯಾಯಿತು. ಈ ಪಕ್ಷವು ಜಿಲ್ಲೆಯಲ್ಲೂ ಶಕ್ತಿ ತುಂಬಿಸಿದೆ. ಆರಂಭದಲ್ಲಿ ಜನಸಂಘವು ಜಿಲ್ಲೆಯ ನಗರಸಭೆ, ಪುರಸಭೆಗಳಲ್ಲಿ ನಾಲ್ಕೈದು ಸ್ಥಾನಗಳನ್ನು ಪಡೆದುಕೊಂಡಿತು. ಲಾಲ್ಕೃಷ್ಣ ಅಡ್ವಾಣಿ ಅವರು ಜಿಲ್ಲೆಗೆ ಭೇಟಿ ನೀಡಿ ಸಭೆ ನಡೆಸಿದ ಪರಿಣಾಮ ಈ ಗೆಲುವಿನ ಹಿಂದೆ ಇದೆ ಎಂದು ಅವರು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಶಿಕ್ಷಣ ಮಹಾಭಿಯಾನ ರಾಜ್ಯ ಸಂಚಾಲಕ ವಿಕಾಸ್ ಪುತ್ತೂರು, ಬಿಜೆಪಿಯು ಇತರ ಪಕ್ಷಗಳಿಗಿಂತ ಭಿನ್ನವಾಗಿದೆ. ಈ ಸಿದ್ಧಾಂತವನ್ನು ಜನರೇ ಒಪ್ಪಿಕೊಂಡು ಚುನಾವಣೆಗಳಲ್ಲಿ ವಿಶ್ವಾಸದ ಬಲ ಮತ್ತು ಆಶೀರ್ವದಿಸಿ ದ್ವಿಗುಣಗೊಳಿಸಿದೆ. ಅಲ್ಲದೆ, ಪಕ್ಷದ ಮೇಲಿರುವ ಅಚಲವಾದ ನಂಬಿಕೆಯೂ ಒಂದು ಕಾರಣ ಎಂದರು.

ಪ್ರಪಂಚದಲ್ಲೇ ಬಿಜೆಪಿಯು ಅತಿದೊಡ್ಡ ಹಾಗೂ 15 ಕೋಟಿಗೂ ಹೆಚ್ಚು ಸದಸ್ಯತ್ವ ಹೊಂದಿರುವ ಏಕೈಕ ಪಕ್ಷ. ಪ್ರಜಾಪ್ರಭುತ್ವದ ಆಧಾರದಲ್ಲಿ ನೆಲೆಕಂಡಿರುವ ಬಿಜೆಪಿ ಕೇವಲ ಅಧಿಕಾರವನ್ನೇ ಗುರಿಯಾಗಿಸದೆ ಜನ ಸೇವೆ ಹಾಗೂ ಕಾರ್ಯಕರ್ತರಿಗೆ ಪ್ರಶಿಕ್ಷಣ ಅಭಿಯಾನ ಹಮ್ಮಿಕೊಂಡು ರಾಷ್ಟ್ರದ ಸದ್ವಿಚಾರವನ್ನು ಕಾರ್ಯಾಗಾರದ ಮೂಲಕ ಪರಿಚಯಿಸುತ್ತಿದೆ ಎಂದು ತಿಳಿಸಿದರು.

ರಾಷ್ಟ್ರದಲ್ಲಿ ಅನೇಕ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳಿವೆ. ಆದರೆ, ಕಾರ್ಯಕರ್ತರು, ಮುಖಂಡರಿಗೆ ರಾಷ್ಟ್ರ ಚಿಂತನೆ ಬೋಧಿಸುವುದು ಬಿಜೆಪಿ ಮಾತ್ರ. ಇತರ ಪಕ್ಷಗಳು ಕುಟುಂಬ ರಾಜಕಾರಣಕ್ಕೆ ಸೀಮಿತವಾದರೆ ಬಿಜೆಪಿಯು ರಾಷ್ಟ್ರದ ಉಜ್ವಲ ಭವಿಷ್ಯದ ಉಳಿವಿಗಾಗಿ ಶ್ರಮಿಸುತ್ತಿದೆ ಎಂದರು.

ಶ್ರೀರಾಮನ ಮಂದಿರ ಹೋರಾಟ, ದೇಶದ ಭಾಗ ಕಾಶ್ಮೀರಕ್ಕೆ ಇತರ ಸ್ಥಾನಮಾನ ವಿರೋಧಿಸಿ ಚಳವಳಿ ನಡೆಸಿತ್ತು. ಈ ಚಳವಳಿಯ ಪ್ರತಿಫಲವಾಗಿ ಪ್ರಧಾನಿ ನರೇಂದ್ರ ಮೋದಿ ಕಾಲಘಟ್ಟದಲ್ಲಿ ಈಡೇರಿಸಿದ್ದು, ಇನ್ನೂ ಅನೇಕ ಕಾರ್ಯಗಳು ಬಾಕಿ ಇವೆ. ಪ್ರಶಿಕ್ಷಣ ಅಭಿಯಾನವು ಮೂರು ವರ್ಗಗಳಾಗಿ ವಿಂಗಡಿಸಿದ್ದು ಇಲ್ಲಿ ಕಾರ್ಯಕರ್ತರಿಗೆ ಪಕ್ಷದ ಸಿದ್ಧಾಂತ, ಕೇಂದ್ರ ಸರ್ಕಾರ ಹಾಗೂ ರಾಜ್ಯದ ಹಿಂದಿನ ಬಿಜೆಪಿ ಸರ್ಕಾರದ ಸಾಧನೆಗಳನ್ನು ಮನದಟ್ಟಾಗಿಸಿ ಬೂತ್ ಮಟ್ಟದಲ್ಲಿ ಜನಸಾಮಾನ್ಯರಿಗೆ ಅರಿವು ಮೂಡಿಸಲು ನಡೆಸಲಾಗುತ್ತಿದೆ. ಜವಾಬ್ದಾರಿಯಿಂದ ಪಾಲ್ಗೊಂಡು ದೇಶದ ಉತ್ತಮ ಭವಿಷ್ಯಕ್ಕೆ ಸಹಕರಿಸಬೇಕು ಎಂದು ಅವರು ತಿಳಿಸಿದರು.

ಪ್ರಶಿಕ್ಷಣ ಮಹಾಭಿಯಾನ ವರ್ಗದ ಪ್ರಮುಖ್ ಈಶ್ವರಹಳ್ಳಿ ಮಹೇಶ್, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಕನಕರಾಜ್ಅರಸ್, ಪ್ರಧಾನ ಕಾರ್ಯದರ್ಶಿ ರವೀಂದ್ರ ಬೆಳವಾಡಿ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಜಸಂತಾ ಅನಿಲ್ಕುಮಾರ್, ಎಸ್ಸಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಪಿ. ವೆಂಕಟೇಶ್, ಜಿ.ಪಂ. ಮಾಜಿ ಉಪಾಧ್ಯಕ್ಷ ಬಿ.ಜಿ. ಸೋಮಶೇಖರ್, ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-126-1782087893

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.