ಚಿಕ್ಕಮಗಳೂರು: ‘ಯೇಸುಕ್ರಿಸ್ತರ ಸಾವು ಕ್ಷಣಿಕ. ಆದರೆ ಅವರ ಪುನರುತ್ಥಾನ ನಿಶ್ಚಿತ, ಶಾಶ್ವತ ಎಂಬ ಸತ್ಯವನ್ನು ಗುಡ್ ಫ್ರೈಡೆ ನಮ್ಮ ಮುಂದೆ ಇಡುತ್ತಿದೆ’ ಎಂದು ಚಿಕ್ಕಮಗಳೂರು ಧರ್ಮಕ್ಷೇತ್ರದ ಧರ್ಮಾ ಧ್ಯಕ್ಷ ಟಿ. ಅಂತೋಣಿಸ್ವಾಮಿ ಹೇಳಿದ್ದಾರೆ.

‘ಈ ಲೋಕವನ್ನು ಉಳಿಸಲು ಶತ್ರುವಶವಾದ ಯೇಸುಕ್ತಿಸ್ತರು ಕ್ರೂರ ಶಿಲುಬೆ ಮರಣಕ್ಕೆ ಒಳಗಾದರು. ಕ್ರಿಸ್ತರಿಗೆ ಅದೊಂದು ಕರಾಳ ದಿನ. ಆದರೆ ಇದೇ ದಿನ ಕ್ರಿಸ್ತರು ಲೋಕವನ್ನು ಕಾಪಾಡಿದರು. ಈ ಕಾರಣ ಕ್ರಿಸ್ತರು ಮೃತರಾದ ದಿನವನ್ನು ಗುಡ್ ಫ್ರೈಡೆ ಎನ್ನುತ್ತೇವೆ’ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಲೋಕದಲ್ಲಿ ಪಾಪಮಾಡಿದ ಪ್ರತಿ ಮನುಷ್ಯನಿಗಾಗಿ ಅವರು ಸತ್ತರು. ಪಾಪದ ಕೂಪದಿಂದ ಹೊರಬರಲಾಗದೆ ಪಾಪದ ಕೆಸರಿನಲ್ಲಿ ಒದ್ದಾಡುತ್ತಿದ್ದ ಮನುಷ್ಯನಿಗಾಗಿ ಅವರು ಮೃತರಾದರು. ಮನುಷ್ಯನನ್ನು ನರಕ ದಂಡನೆಯಿಂದ ಕಾಪಾಡಲು ಅವರು ತಮ್ಮ ಪ್ರಾಣವನ್ನೇ ಅರ್ಪಿಸಿದರು. ಯೇಸು ಕ್ರಿಸ್ತರು, ತನ್ನ ಗೆಳೆಯನಿಗಾಗಿ ಪ್ರಾಣಕೊಡುವ ಪ್ರೀತಿಗಿಂತ ಮಿಗಿಲಾದ ಪ್ರೀತಿ ಮತ್ತೊಂದಿಲ್ಲ ಎಂದು ಬೋಧಿಸಿ ದ್ದರು ಎಂದು ವಿವರಿಸಿದ್ದಾರೆ.

ಈ ಶುಭ ಶುಕ್ರವಾರ ಕ್ರೈಸ್ತರಿಗೆ ಒಂದು ಮಹತ್ವದ ದಿನ. ಈ ದಿನದಂದು ಎಲ್ಲಾ ಕ್ರೈಸ್ತ ಭಕ್ತರು ಯೇಸುವನ್ನು ಯಾವ ರೀತಿ ಹಿಂಸಿಸಿದರೋ, ಯಾವ ರೀತಿ ಅವರನ್ನು ಶಿಲುಬೆ ಏರಿಸಿದರೋ, ಆ ದಾರುಣಘಟನೆಯನ್ನು ಧ್ಯಾನಿಸುತ್ತಾರೆ. ಉಪವಾಸವಿದ್ದು ಯೇಸು ಕ್ರಿಸ್ತರ ಸಾವಿನ ಘಟನೆ ಯನ್ನು ಸ್ಮರಿಸುತ್ತಾರೆ. ಯೇಸು ಕ್ರಿಸ್ತರು ಸತ್ತು ಸಮಾಧಿ ಸೇರಿದರು. ಆದರೆ, ಅವರು ಮತ್ತೆ ಜೀವಂತರಾಗಿ ಸಮಾಧಿಯಿಂದ ಹೊರಬಂದರು. ಹಾಗಾಗಿ ಕ್ರೈಸ್ತರು ತಮ್ಮ ಧರ್ಮದಲ್ಲಿ ಭರವಸೆಗೆ ಕೇಂದ್ರ ಸ್ಥಾನ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260403-126-852677934

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.