ಚಿಕ್ಕಮಗಳೂರು: ಮಂಗಳೂರು ಸೇನಾ ನೇಮಕಾತಿ ಕಚೇರಿ ವತಿಯಿಂದ ನೇಮಕಾತಿ ರ್ಯಾಲಿಗೆ ಸಂಬಂಧಿಸಿದಂತೆ ಆನ್ಲೈನ್ ನೋಂದಣಿ ಪ್ರಕ್ರಿಯೆ ಫೆ.13 ರಿಂದ ಆರಂಭವಾಗಿದ್ದು, ಏ.1 ರವರೆಗೆ ನಡೆಯಲಿದೆ.

ಅಗ್ನಿವೀರ್ ಜನರಲ್ ಡ್ಯೂಟಿ, ಅಗ್ನಿವೀರ್ ಕ್ಲರ್ಕ್, ಎಸ್.ಕೆ.ಟಿ, ಅಗ್ನಿವೀರ್ ತಾಂತ್ರಿಕ, ಅಗ್ನಿವೀರ್ ಟಿಡಿಎನ್10, ಟಿಡಿಎನ್–8 ಅಪ್ಲಿಕೇಶನ್ ವರ್ಗಗಳಿದ್ದು, ನೋಂದಣಿ ಮಾಡುವ ವೇಳೆ ಆಧಾರ್ ಕಾರ್ಡ್, ಮೊಬೈಲ್ ದೂರವಾಣಿ ಸಂಖ್ಯೆ, 10ನೇ ತರಗತಿ ಅಂಕಪಟ್ಟಿ, ಕ್ಲರ್ಕ್-ಎಸ್.ಕೆ.ಟಿ ವರ್ಗಕ್ಕೆ 12ನೇ ತರಗತಿ ಅಂಕಪಟ್ಟಿ, ಪಾಸ್ಪೋರ್ಟ್ ಅಳತೆಯ ಭಾವಚಿತ್ರ, ಸಹಿ ಮಾಡಿದ ಭಾವಚಿತ್ರ, ಎಡಗೈ ಹೆಬ್ಬೆರಳಿನ ಗುರುತು, ಎನ್ಸಿಸಿ ಅಥವಾ ಎನ್ಸಿಸಿ ಪ್ರಮಾಣ ಪತ್ರ(ಲಭ್ಯವಿದ್ದರೆ), ನಿವಾಸ ಪ್ರಮಾಣ ಪತ್ರದೊಂದಿಗೆ ನೋಂದಣಿ ಮಾಡಬಹುದು. ನೋಂದಣಿ ಸಮಯದಲ್ಲಿ ಮೂಲ ದಾಖಲೆ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು. ಅರ್ಜಿ ಸಲ್ಲಿಕೆ ವೇಳೆ ತಪ್ಪು ಮಾಹಿತಿ ನೀಡಿದರೆ ಅರ್ಜಿಯನ್ನು ತಿರಸ್ಕರಿಸಲಾಗುವುದು.

ಅಭ್ಯರ್ಥಿಗಳು ಆನ್ಲೈನ್ನಲ್ಲಿ ಸಲ್ಲಿಸುವ ಮೊದಲು ಎಚ್ಚರಿಕೆಯಿಂದ ಅಧಿಸೂಚನೆ ಓದಿಕೊಳ್ಳಬೇಕು. ಆನ್ಲೈನ್ ಫಾರ್ಮ್ನಲ್ಲಿ ಹೆಸರು, ತಂದೆ, ತಾಯಿಯ ಹೆಸರು ಮತ್ತು ಜನ್ಮ ದಿನಾಂಕ ಸಮರ್ಪಕವಾಗಿ ಭರ್ತಿ ಮಾಡಿರಬೇಕು. ಆಧಾರ್ ಮತ್ತು ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ನಮೂದಿಸಬೇಕು. ₹250 ನೋಂದಣಿ ಶುಲ್ಕ ಪಾವತಿಸಬೇಕು. https://www.joinindianarmy.nic.in/writereaddata/Portal/Images/Kannada/English ವೆಬ್ಸೈಟ್ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-126-1660869629

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.