ನವದೆಹಲಿ: ಮೂರು ವರ್ಷ ಒಳಗಿನ ಮಕ್ಕಳ ಪೈಕಿ, ಜನಿಸಿದ ಒಂದು ಗಂಟೆ ಒಳಗಾಗಿ ಎದೆಹಾಲು ಉಣಿಸಲಾದ ಶಿಶುಗಳ ಪ್ರಮಾಣದಲ್ಲಿ ಶೇ10 ಅಂಶಗಳಷ್ಟು ಏರಿಕೆಯಾಗಿದೆ ಎಂದು ಸಮೀಕ್ಷೆಯೊಂದು ಹೇಳಿದೆ.

ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಳವಾಗಿರುವುದು ಈ ಸಮೀಕ್ಷೆಯಿಂದ ತಿಳಿದು ಬರುತ್ತದೆ. ಇದು ಸುಸ್ಥಿರ ಅಭಿವೃದ್ಧಿ ಗುರಿಗಳ(ಎಸ್ಡಿಜಿ) ಸಾಧನೆ ನಿಟ್ಟಿನಲ್ಲಿ ಸಕಾರಾತ್ಮಕ ಹೆಜ್ಜೆಯಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಶುಕ್ರವಾರ ಬಿಡುಗಡೆ ಮಾಡಲಾಗಿರುವ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ–6 (ಎನ್ಎಫ್ಎಚ್ಎಸ್–6)ರಲ್ಲಿ ಈ ಮಾಹಿತಿ ಇದೆ.

ಸಚಿವಾಲಯ ಕೈಗೊಂಡಿದ್ದ ಈ ಸಮೀಕ್ಷೆಗೆ (ಎನ್ಎಫ್ಎಚ್ಎಸ್–6) ಮುಂಬೈನ ಅಂತರರಾಷ್ಟ್ರೀಯ ಜನಸಂಖ್ಯೆ ವಿಜ್ಞಾನಗಳ ಸಂಸ್ಥೆಯು(ಐಐಪಿಎಸ್) ನೋಡಲ್ ಏಜೆನ್ಸಿಯಾಗಿ ಕಾರ್ಯ ನಿರ್ವಹಿಸಿತ್ತು.

2019–2021ರ ಅವಧಿಯಲ್ಲಿ (ಎನ್ಎಫ್ಎಚ್ಎಸ್–5), ಜನಿಸಿದ ಒಂದು ಗಂಟೆ ಒಳಗಾಗಿ ಎದೆ ಹಾಲು ಉಣಿಸಲಾದ ಮಕ್ಕಳ ಸಂಖ್ಯೆ ಶೇ41.8ರಷ್ಟಿತ್ತು. ಈ ಪ್ರಮಾಣ 2023–24ರಲ್ಲಿ ಶೇ50.1ಕ್ಕೆ ಏರಿಕೆಯಾಗಿತ್ತು ಎಂದು ಸಚಿವಾಲಯ ಹೇಳಿದೆ.

ಘನ ಆಹಾರ ಇಲ್ಲವೇ ಅರೆ ಘನ ಆಹಾರ ನೀಡಲಾಗುವ 6ರಿಂದ8 ತಿಂಗಳ ಒಳಗಿನ ಮಕ್ಕಳ ಸಂಖ್ಯೆ ಶೇ45.9ರಿಂದ ಶೇ59.5ಕ್ಕೆ ಏರಿಕೆಯಾಗಿದೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.

ಪ್ರಮುಖ ಅಂಶಗಳು

* ಸಮೀಕ್ಷೆ ನಡೆದ ಸಂದರ್ಭದಲ್ಲಿ 6 ತಿಂಗಳ ಒಳಗಿನ ಶೇ95.6ರಷ್ಟು ಮಕ್ಕಳಿಗೆ ತಾಯಂದಿರು ಎದೆಹಾಲು ಉಣಿಸಿದ್ದು ಕಂಡುಬಂದಿದೆ

* ಮೊದಲ ಆರು ತಿಂಗಳು ಸಂಪೂರ್ಣವಾಗಿ ಎದೆ ಹಾಲು ಉಣಿಸಿದ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. ಎನ್ಎಫ್ಎಚ್ಎಸ್–5ರ ವೇಳೆ ಶೇ63.7ರಷ್ಟಿದ್ದ ಈ ಪ್ರಮಾಣ ಎನ್ಎಫ್ಎಚ್ಎಸ್–6ರ ವೇಳೆಗೆ ಶೇ55.8ಕ್ಕೆ ಕುಸಿದಿದೆ

* 5 ವರ್ಷ ಒಳಗಿನವರ ಪೈಕಿ ವಯಸ್ಸಿಗೆ ತಕ್ಕಂತೆ ಎತ್ತರ ಇಲ್ಲದೇ ಇರುವ(ಕುಂಠಿತ ಬೆಳವಣಿಗೆ) ಮಕ್ಕಳ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ಈ ಮೊದಲು ಶೇ35.5ರಷ್ಟಿದ್ದ ಈ ಪ್ರಮಾಣ ಸಮೀಕ್ಷೆ ವೇಳೆ ಶೇ29.3ರಷ್ಟಿತ್ತು. ಇದು ದೀರ್ಘ ಅವಧಿಗೆ ಪೌಷ್ಟಿಕ ಆಹಾರದ ಒದಗಿಸಿದ್ದರ ಫಲಿತಾಂಶ ಎಂಬುದನ್ನು ತೋರಿಸುತ್ತದೆ

* ತೀವ್ರ ಅಪೌಷ್ಟಿಕತೆ ಪ್ರಮಾಣವು ಶೇ7.7ರಿಂದ ಶೇ5.2ಕ್ಕೆ ಇಳಿಕೆಯಾಗಿದೆ

ಸುಧಾರಣೆಗೆ ಕಾರಣಗಳು

* ಪೋಷಣ್ ಅಭಿಯಾನ ಸಕ್ಷಮ ಅಂಗನಾಡಿ ಹಾಗೂ ಪೋಷಣ್–2.0 ನಂತಹ ಉಪಕ್ರಮಗಳ ಅನುಷ್ಠಾನ

* ಸಮಗ್ರ ಶಿಶು ಅಭಿವೃದ್ಧಿ ಯೋಜನೆ(ಐಸಿಡಿಎಸ್) ಬಲಪಡಿಸಿರುವುದು

* ರಾಷ್ಟ್ರೀಯ ಆರೋಗ್ಯ ಮಿಷನ್ ಪೌಷ್ಟಿಕಾಂಶ ಪುನರ್ವಸತಿ ಕೇಂದ್ರಗಳ (ಎನ್ಆರ್ಸಿ) ಸ್ಥಾಪನೆ ಕಬ್ಬಿಣ ಮತ್ತು ಫೋಲಿಕ್ ಆ್ಯಸಿಡ್ ಮಾತ್ರೆಗಳ ಪೂರೈಕೆಯಂತಹ ಪೂರಕ ಕಾರ್ಯಕ್ರಮಗಳು

* ಮಿಷನ್ ವಾತ್ಸಲ್ಯ ಶಿಶು ಮತ್ತು ಮಕ್ಕಳಿಗೆ ಎದೆಹಾಲು ಉಣಿಸುವುದನ್ನು ಉತ್ತೇಜಿಸುವ ಕಾರ್ಯಕ್ರಮಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.