ಚಿತ್ರದುರ್ಗ: ‘ಶ್ರೀಮಂತರು, ಜಮೀನ್ದಾರರು, ಉದ್ಯಮಿಗಳಿಗೆ ಮಾತ್ರ ಇದ್ದ ಮತದಾನದ ಹಕ್ಕನ್ನು ಶೋಷಿತ ವರ್ಗಗಳಿಗೂ ಕಲ್ಪಿಸಿಕೊಟ್ಟ ಕೀರ್ತಿ ಬಿ.ಆರ್.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಆದರೆ, ನಾವಿಂದು ಮತ ಮಾರಾಟ ಮಾಡಿಕೊಳ್ಳುತ್ತಿದ್ದು, ಅಧಿಕಾರದಿಂದ ದೂರವೇ ಉಳಿಯುತ್ತಿದ್ದೇವೆ. ಮತ ಮೌಲ್ಯ ಅರಿತರೆ ಮಾತ್ರ ಶೋಷಿತರ ಕೈಗೆ ಅಧಿಕಾರ ದೊರೆಯುತ್ತದೆ’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜೆ.ಜೆ.ಹಟ್ಟಿ ಬಿ.ತಿಪ್ಪೇಸ್ವಾಮಿ ಹೇಳಿದರು.

ಬಿ.ಆರ್.ಅಂಬೇಡ್ಕರ್ ಹಾಗೂ ಜಗಜೀವನರಾಂ ಜಯಂತ್ಯುತ್ಸವದ ಅಂಗವಾಗಿ ಶನಿವಾರ ಪತ್ರಿಕಾ ಭವನದಲ್ಲಿ ನಡೆದ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

‘ಪ್ರಕೃತಿ ಸಕಲ ಜೀವಸಂಕುಲಗಳಿಗೆ ಕುಡಿಯುವ ನೀರು, ಗಾಳಿ ನೀಡಿದೆ. ನಾಯಿ– ನರಿಗಳು ಕೆರೆ ನೀರು ಕುಡಿಯಬಹುದು. ಆದರೆ, ದಲಿತರು ಬಾವಿ, ಕೆರೆ, ಕಟ್ಟೆಗಳ ನೀರು ಬಳಸುವಂತಿರಲಿಲ್ಲ. ಈ ಅಮಾನವೀಯ ಪದ್ಧತಿ ನಿರ್ಮೂಲನೆಗೆ ಅಂಬೇಡ್ಕರ್ ಹೋರಾಟ ನಡೆಸಿದರು. ಶೋಷಿತರಿಗೆ ಶಿಕ್ಷಣ, ಅಧಿಕಾರ, ಆರ್ಥಿಕ ಸಮಾನತೆ ಸಿಗಬೇಕು. ಇಲ್ಲದಿದ್ದರೆ ನಾವು ಮುಖ್ಯವಾಹಿನಿಗೆ ಬರಲು ಸಾಧ್ಯವಾಗುವುದಿಲ್ಲ. ದಲಿತರ ವಿಮೋಚನೆ ಧರ್ಮದಿಂದ ಸಾಧ್ಯವಿಲ್ಲ ಎಂಬ ಸತ್ಯವನ್ನು ಅರಿಯಬೇಕು’ ಎಂದರು.

‘ಅಸ್ಪೃಶ್ಯರ ಪ್ರಗತಿಯನ್ನು ಪ್ರಬಲ ವರ್ಗದ ಜನ ಸಹಿಸುವುದಿಲ್ಲ. ಆದ್ದರಿಂದಲೇ ರಾಜಕೀಯಕ್ಕಿಂತಲೂ ಸಾಮಾಜಿಕ ತಾರತಮ್ಯ ನಿವಾರಣೆ ಆಗಬೇಕೆಂದು ಬಿ.ಆರ್.ಅಂಬೇಡ್ಕರ್ ಅವರು ಛಲ ಹೊಂದಿದ್ದರು. ಬಹುಸಂಖ್ಯಾತರ ಮುಕ್ತಿಗಾಗಿ ಬದುಕನ್ನೇ ಮೀಸಲಿಟ್ಟ ಅಂಬೇಡ್ಕರ್ ಅವರನ್ನು ದಲಿತ ವರ್ಗಕ್ಕೆ ಸೀಮಿತಗೊಳಿಸಲಾಗುತ್ತಿರುವುದು ನೋವಿನ ವಿಷಯ’ ಎಂದು ಚಿಂತಕ ವೇದಾಂತ ಏಳಂಜಿ ತಿಳಿಸಿದರು.

ನಗರಸಭೆ ಮಾಜಿ ಅಧ್ಯಕ್ಷ ಎಚ್.ಮಂಜಪ್ಪ, ಕಾಂಗ್ರೆಸ್ ಮುಖಂಡ ಒ.ಶಂಕರ್ ಮಾತನಾಡಿದರು.

ಮಾದಿಗ ಮಹಾಸಭಾ ಅಧ್ಯಕ್ಷ ಹನುಮಂತಪ್ಪ ದುರ್ಗ, ಸಂಘಟಕ ಬಿ.ರಾಜಪ್ಪ, ನೀರಾವರಿ ಹೋರಾಟ ಸಮಿತಿ ಸಂಚಾಲಕ ಜೋಗಿಮಟ್ಟಿ ಈ.ಮಹೇಶಬಾಬು, ವಿವಿಧ ಸಂಘಟನೆಗಳ ಮುಖಂಡರಾದ ಕೆ.ರಾಜಣ್ಣ, ಪ್ರಸನ್ನ, ಎನ್.ಹರೀಶ್, ಬಿ.ಒ.ಗಂಗಾಧರಯ್ಯ, ಟಿ.ಆರ್.ತಿಪ್ಪೇಸ್ವಾಮಿ, ಎಂ.ಮಲ್ಲಿಕಾರ್ಜುನ್, ಬಿ.ಹನುಮಂತಪ್ಪ, ಮಲ್ಲಪ್ಪ, ಕೆಂಚಪ್ಪ, ಮಲ್ಲಿಕಾರ್ಜುನ್, ಕೆ.ರುದ್ರಮುನಿ, ತಮಟಕಲ್ಲು ಹನುಮಂತಪ್ಪ, ನಾಗರಾಜ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-44-1080805039

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.