ಮುಂಬೈ: ನಿರುದ್ಯೋಗಿ ಯುವಕರನ್ನು ಪರಾವಲಂಬಿಗಳು ಹಾಗೂ ಜಿರಳೆಗಳು ಎನ್ನುವ ಭಾರತದ ಮುಖ್ಯನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಹೇಳಿಕೆಯನ್ನು ಎನ್ಸಿಪಿ (ಎಸ್ಪಿ) ನಾಯಕ ರೋಹಿತ್ ಪವಾರ್ ಟೀಕಿಸಿದ್ದಾರೆ. ಅವರ ಈ ಹೇಳಿಕೆ ಸ್ವೀಕಾರಾರ್ಹವಲ್ಲ, ಇದು ಟೀಕೆ ಹಾಗೂ ಪ್ರಶ್ನೆ ಮಾಡುವುದರ ವಿರುದ್ಧ ಇರುವ ಅಸಹಿಷ್ಣುತೆಯ ಪ್ರತಿಬಿಂಬ ಎಂದು ಹೇಳಿದ್ದಾರೆ.
.ಬೆಳಗಾವಿ| ಧಾರಾಕಾರ ಮಳೆ ಹಾಗೂ ಬಿರುಗಾಳಿ: 6 ಮರ, 3 ವಿದ್ಯುತ್ ಕಂಬ ಧರೆಗೆ.
‘ನನಗೆ ಭಾರತದ ನ್ಯಾಯಾಂಗದ ಬಗ್ಗೆ ಅತ್ಯಂತ ಗೌರವವಿದೆ. ಸಾಂವಿಧಾನಿಕ ಹುದ್ದೆಯಲ್ಲಿರುವವರು ನೀಡಿರುವ ಈ ಹೇಳಿಕೆಯು ಅವಕಾಶಗಳ ಕೊರತೆ ಹಾಗೂ ನಿರುದ್ಯೋಗ ಸಮಸ್ಯೆ ಅನುಭವಿಸುತ್ತಿರುವ ಇಡೀ ಪೀಳಿಗೆಯನ್ನು ಅಣಕಿಸುವಂತಿದೆ’ ಎಂದು ಹೇಳಿದ್ದಾರೆ.

ಕೆಲವು ಯುವಕರು ಜಿರಳೆಗಳಿದ್ದಂತೆ. ಅವರಿಗೆ ಯಾವುದೇ ಉದ್ಯೋಗ ಸಿಗುವುದಿಲ್ಲ ಅಥವಾ ವೃತ್ತಿಯಲ್ಲಿ ಯಾವುದೇ ಸ್ಥಾನ ಲಭಿಸುವುದಿಲ್ಲ. ಅಂಥವರು ತಾವೇ ಮಾಧ್ಯಮ, ಸಾಮಾಜಿಕ ಮಾಧ್ಯಮ ಮತ್ತು ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ) ಅಥವಾ ಇತರೆ ಕಾರ್ಯಕರ್ತರಾಗಿ ಸಮಾಜದ ಎಲ್ಲರ ಮೇಲೆ ದಾಳಿ ಮಾಡಲು ಆರಂಭಿಸುತ್ತಾರೆ ಎಂದು ಸಿಜೆಐ ಹೇಳಿದ್ದರು.

‘ಪದಾಂಕಿತ ಹಿರಿಯ ವಕೀಲ’ ಸ್ಥಾನ ಪಡೆಯಲು ವಕೀಲರೊಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ಹೀಗೆ ಹೇಳಿದ್ದರು.
.ಜಿರಳೆ ಕಾಟಕ್ಕೆ ಬೇಸತ್ತಿದ್ದೀರಾ? ಚಿಂತೆಬಿಡಿ, ಮನೆಮದ್ದುಗಳಿಂದಲೆ ಹೀಗೆ ಓಡಿಸಿ.
‘ನಕಲಿ ಪದವಿ ಪಡೆದವರು ಮತ್ತು ಹಿರಿಯ ವಕೀಲರ ಹುದ್ದೆಗೆ ಸಂಬಂಧಿಸಿದ ಅರ್ಜಿಗಳ ಸಂದರ್ಭದಲ್ಲಿ ಈ ಹೇಳಿಕೆಗಳನ್ನು ನೀಡಿರಬಹುದು. ಆದರೆ ನಿರುದ್ಯೋಗಿ ಯುವಕರು ಮತ್ತು ಆರ್ಟಿಐ ಕಾರ್ಯಕರ್ತರನ್ನು ಒಂದೇ ಎಂದು ಹೇಳುವುದು ಸೂಕ್ತವಲ್ಲ’ ಎಂದು ಪವಾರ್ ಹೇಳಿದ್ದಾರೆ.

ಭ್ರಷ್ಟಾಚಾರವನ್ನು ಬಯಲಿಗೆಳೆಯುವ ಆರ್ಟಿಐ ಕಾರ್ಯಕರ್ತ, ಪಾರದರ್ಶಕತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತುವ ಕಾನೂನು ಪತ್ರಕರ್ತ ಮತ್ತು ಅಧಿಕಾರಕ್ಕೆ ಸತ್ಯವನ್ನು ಮಾತನಾಡುವ ವಿದ್ಯಾರ್ಥಿ ಪ್ರಜಾಪ್ರಭುತ್ವದ ನಿಜವಾದ ಆಧಾರಸ್ತಂಭಗಳು ಎಂದು ಪವಾರ್ ಹೇಳಿದ್ದಾರೆ.

ಇಂದಿನ ಯುವಕರು ಸ್ವಂತ ಇಚ್ಛೆಯಿಂದ ನಿರುದ್ಯೋಗಿಗಳಲ್ಲ, ಆದರೆ ಆರ್ಥಿಕ ವೈಫಲ್ಯ ಮತ್ತು ರಾಜಕೀಯ ಅದಕ್ಷತೆಯ ಬಲಿಪಶುಗಳಾಗಿದ್ದಾರೆ. ಯುವಜನರ ಬಗ್ಗೆ ಮಾತನಾಡುವಾಗ ಸೂಕ್ಷ್ಮತೆ, ಸಂಯಮ ಮತ್ತು ಸಾಂವಿಧಾನಿಕ ಬುದ್ಧಿವಂತಿಕೆಯನ್ನು ಪ್ರದರ್ಶಿಸಬೇಕು ಎಂದು ಅವರು ಹೇಳಿದ್ದಾರೆ.
.ನಿರುದ್ಯೋಗಿ ಯುವಕರು ವ್ಯವಸ್ಥೆ ಮೇಲೆ ದಾಳಿ ಮಾಡುವ ಜಿರಳೆಗಳಿದ್ದಂತೆ: ಸಿಜೆಐ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.