ಇನ್‌ಸ್ಟಾ: ಬಿಜೆಪಿ ಕಾಂಗ್ರೆಸ್ ಹಿಂದಿಕ್ಕಿದ ಸಿಜೆಪಿ
ಸಿಜೆಪಿ ಮೂಲ ‘ಎಕ್ಸ್’ ಖಾತೆಯು ನಿರ್ಬಂಧಕ್ಕೂ ಮುನ್ನ 2 ಲಕ್ಷಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿತ್ತು. ಸಿಜೆಪಿಯ ನೂತನ ‘ಎಕ್ಸ್’ ಖಾತೆಯು ಶುಕ್ರವಾರ ಮಧ್ಯಾಹ್ನದ ವೇಳೆಗೆ 1.65 ಲಕ್ಷ ಫಾಲೋವರ್‌ಗಳನ್ನು ಹೊಂದಿದೆ. ಇನ್‌ಸ್ಟಾಗ್ರಾಂನಲ್ಲಿ 2.05 ಕೋಟಿ ಫಾಲೋವರ್‌ಗಳನ್ನು ಹೊಂದುವ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳನ್ನು ಹಿಂದಿಕ್ಕಿದೆ. ಬಿಜೆಪಿಯು 91 ಲಕ್ಷ ಮತ್ತು ಕಾಂಗ್ರೆಸ್ 1.34 ಕೋಟಿ ಫಾಲೋವರ್‌ಗಳನ್ನು ಹೊಂದಿವೆ. ‘ಎಕ್ಸ್’ನಲ್ಲಿ ಬಿಜೆಪಿ 2.3 ಕೋಟಿ ಮತ್ತು ಕಾಂಗ್ರೆಸ್ 1.15 ಕೋಟಿ ಫಾಲೋವರ್‌ಗಳನ್ನು ಹೊಂದಿವೆ.