ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನವದೆಹಲಿ: ಯೋಜನೆಗಳಿಗೆ ₹7 ಕೋಟಿ ಮಂಜೂರು ಮಾಡಿದ ಕೇಜ್ರಿವಾಲ್

Published 23 ಆಗಸ್ಟ್ 2024, 16:04 IST
Last Updated 23 ಆಗಸ್ಟ್ 2024, 16:04 IST
ಅಕ್ಷರ ಗಾತ್ರ

ನವದೆಹಲಿ: ನ್ಯಾಯಾಂಗ ಬಂಧನದಲ್ಲಿ ಇರುವ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ತಮ್ಮ ನವದೆಹಲಿ ವಿಧಾನಸಭಾ ಕ್ಷೇತ್ರದ ಯೋಜನೆಗಳಿಗೆ ₹7 ಕೋಟಿ ಮಂಜೂರು ಮಾಡಿದ್ದಾರೆ.

‘ಜೈಲಿನಲ್ಲಿ ಇದ್ದರೂ ದೆಹಲಿ ನಾಗರಿಕರ ಬಗೆಗೆ ಅವರಿಗೆ ಕಾಳಜಿ ಇದೆ ಎನ್ನುವುದನ್ನು ಅವರ ಈ ನಡೆ ಸ್ಪಷ್ಟಪಡಿಸುತ್ತದೆ’ ಎಂದು ಮುಖ್ಯಮಂತ್ರಿ ಕಚೇರಿಯ ಪ್ರಕಟಣೆಯು ತಿಳಿಸಿದೆ. ಹಣ ಮಂಜೂರು ಮಾಡಿರುವ ಸಂಗತಿಯನ್ನೂ ಈ ಪ್ರಕಟಣೆ ಸ್ಪಷ್ಟಪಡಿಸಿದೆ. 

ಗ್ರಂಥಾಲಯ ಸ್ಥಾಪನೆ, ಸಿ.ಸಿ.ಟಿ.ವಿ. ಕ್ಯಾಮೆರಾಗಳ ಅಳವಡಿಕೆ, ಒಳಾಂಗಣ–ಹೊರಾಂಗಣ ಜಿಮ್‌ಗಳಿಗೆ ಬೇಕಾದ ಪರಿಕರಗಳನ್ನು ಒದಗಿಸುವುದು, ಬೀದಿದೀಪಗಳ ಅಳವಡಿಕೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ₹7 ಕೋಟಿ ವಿನಿಯೋಗಿಸಲಾಗುವುದು ಎಂದೂ ಪ್ರಕಟಣೆ ಹೇಳಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT