TN CM Vijay visits Periyar Thidal, meets DK chief Veeramani

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ಸಿ ವಿಜಯ್ ಭಾನುವಾರ ಪೆರಿಯಾರ್ ತಿಡಲ್ಗೆ ಭೇಟಿ ನೀಡಿ ದ್ರಾವಿಡ ಕಳಗಂ ಅಧ್ಯಕ್ಷ ಕೆ. ವೀರಮಣಿ ಅವರನ್ನು ಭೇಟಿ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನು ಸೌಜನ್ಯಯುತ ಭೇಟಿ ಎಂದು ವಿವರಿಸಲಾಗಿದೆ.

‘ಪೆರಿಯಾರ್’ ಎಂದೇ ಜನಪ್ರಿಯರಾಗಿರುವ ಇ. ವಿ. ರಾಮಸಾಮಿ ಅವರ ಸ್ಮಾರಕಕ್ಕೆ ವಿಜಯಗ ಪುಷ್ಪ ನಮನ ಸಲ್ಲಿಸಿದರು.

ನಂತರ, ವೀರಮಣಿ ಅವರೊಂದಿಗೆ ರಾಜ್ಯದ ಪ್ರಸ್ತುತ ಸಾಮಾಜಿಕ ರಾಜಕೀಯ ಪರಿಸ್ಥಿತಿಯ ಕುರಿತು ಸಂಕ್ಷಿಪ್ತ ಚರ್ಚೆ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೆರಿಯಾರ್ ತಿಡಲ್, ತಮಿಳುನಾಡಿನಲ್ಲಿ ಬೇರೂರಿರುವ ದ್ರಾವಿಡ ಸೈದ್ಧಾಂತಿಕ ಚಳವಳಿಯ ‘ದ್ರಾವಿಡ ಕಳಗಂ’ಸಂಘಟನೆಯ ಪ್ರಧಾನ ಕಚೇರಿಯಾಗಿ ಕಾರ್ಯನಿರ್ವಹಿಸುತ್ತದೆ.

ಈ ಸಂಕೀರ್ಣವು ಪೆರಿಯಾರ್ ವಸ್ತುಸಂಗ್ರಹಾಲಯ ಮತ್ತು ಅವರ ಸ್ಮಾರಕವನ್ನು ಸಹ ಹೊಂದಿದೆ. ತಮ್ಮ ದ್ರಾವಿಡ ಸೈದ್ಧಾಂತಿಕ ನಿಲುವನ್ನು ಪುನರುಚ್ಚರಿಸಲು ಬಯಸುವ ರಾಜಕೀಯ ನಾಯಕರಿಗೆ ಸಾಂಕೇತಿಕ ತೀರ್ಥ ಕ್ಷೇತ್ರದಂತಿದೆ ಎಂದು ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.