ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗೋವಾ: ಮಾಲಿನ್ಯ ನಿಯಂತ್ರಣ ನೌಕೆಗೆ ಚಾಲನೆ

Published 29 ಆಗಸ್ಟ್ 2024, 14:31 IST
Last Updated 29 ಆಗಸ್ಟ್ 2024, 14:31 IST
ಅಕ್ಷರ ಗಾತ್ರ

ಪಣಜಿ: ಭಾರತೀಯ ಕೋಸ್ಟ್‌ ಗಾರ್ಡ್‌ಗಾಗಿ ಗೋವಾ ಶಿಪ್‌ಯಾರ್ಡ್ ಸುಮಾರು ₹2,500 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಮಾಲಿನ್ಯ ನಿಯಂತ್ರಣ ನೌಕೆಯನ್ನು ಗುರುವಾರ ಸೇವೆಗೆ ನಿಯೋಜಿಸಲಾಯಿತು.

‘ಈ ನೌಕೆಯು ದೇಶದ ಕಡಲ ಭದ್ರತಾ ಏಜೆನ್ಸಿಗೆ ಪ್ರಮುಖ ಆಸ್ತಿಯಾಗಲಿದೆ’ ಎಂದು ರಕ್ಷಣಾ ಖಾತೆಯ ರಾಜ್ಯ ಸಚಿವ ಸಂಜಯ್‌ ಸೇಠ್‌ ಹೇಳಿದರು.

ಇದು ಶೇ 72ರಷ್ಟು ‘ಆತ್ಮನಿರ್ಭರ’ವಾಗಿದ್ದು, ಕರಾವಳಿಯ ಮಾಲಿನ್ಯದ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿದೆ ಎಂದು ಸಚಿವ ಸೇಠ್‌ ಸುದ್ದಿಗಾರರಿಗೆ ತಿಳಿಸಿದರು.

ದೇಶದ ತೀರಗಳನ್ನು ಅನಗತ್ಯ ಅಂಶಗಳಿಂದ ಸುರಕ್ಷಿತವಾಗಿರಿಸಲು ಭಾರತೀಯ ಕೋಸ್ಟ್‌ ಗಾರ್ಡ್‌ಗೆ ಈ ನೌಕೆ ನೆರವಾಗಲಿದೆ ಎಂದು ಅವರು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT