ಛತ್ರಪತಿ ಸಂಭಾಜಿನಗರ: ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಸಾಮಾಜಿಕ ಮಾಧ್ಯಮ ಖಾತೆಯ ಖ್ಯಾತಿಯು ಅದರ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ.

‘ಸಾಮಾಜಿಕ ಮಾಧ್ಯಮದಲ್ಲಿ ಸಿಜೆಪಿ ಖ್ಯಾತಿ ಗಳಿಸುತ್ತಿದ್ದಂತೆಯೇ ಎರಡು ದಿನಗಳಿಂದ ನಮಗೆ ನಿದ್ದೆಯೇ ಇಲ್ಲವಾಗಿದೆ’ ಎಂದು ಅಭಿಜಿತ್ ಅವರ ತಂದೆ ಭಗವಾನ್ ದೀಪ್ಕೆ, ತಾಯಿ ಅನಿತಾ ದೀಪ್ಕೆ ಮರಾಠಿ ಚಾನೆಲ್ವೊಂದಕ್ಕೆ ತಿಳಿಸಿದ್ದಾರೆ.

‘ಈಚೆಗಿನ ದಿನಗಳಲ್ಲಿನ ರಾಜಕೀಯ ನೋಡಿದರೆ, ಆತ ಎಷ್ಟೇ ಬೆಂಬಲಿಗರನ್ನು ಹೊಂದಿದ್ದರೂ ಸಹ ಭಯ ಸಹಜ. ಭಾರತಕ್ಕೆ ಮರಳಿದಾಗ ಬಂಧನಕ್ಕೆ ಒಳಗಾಗುವ ಭೀತಿಯನ್ನು ಆತನೇ ವ್ಯಕ್ತಪಡಿಸಿದ್ದಾನೆ. ಅಂತಹ ಘಟನೆಗಳನ್ನು ನಾವು ಪತ್ರಿಕೆಗಳಲ್ಲಿ ಓದುತ್ತೇವೆ’ ಎಂದು ಭಗವಾನ್ ದೀಪ್ಕೆ ಹೇಳಿದ್ದಾರೆ.

‘ಸಿಜೆಪಿಯ ಬೆಳವಣಿಗೆ ಆತಂಕಕ್ಕೆ ಕಾರಣವಾಗಿದೆ. ಇದೇ ನನಗೆ ಚಿಂತೆ ಆಗಿದೆ. ಅಭಿಜಿತ್ ಈಗ ಪ್ರಸಿದ್ಧ ಆಗಿರಬಹುದು. ಆದರೆ, ಅಂತಹವರನ್ನು ಬಂಧಿಸಲಾಗಿದೆ. ಏನಾಗಬಹುದು ಎಂಬ ಆತಂಕ ಕಾಡುತ್ತಿದೆ. ನಾನು ರಾಜಕೀಯವನ್ನು ದ್ವೇಷಿಸುತ್ತೇನೆ. ಆಸಕ್ತಿಯನ್ನೇ ಹೊಂದಿಲ್ಲ’ ಎಂದಿದ್ದಾರೆ.

‘ತಮ್ಮ ಮಗ ಅಭಿಜಿತ್ ರಾಜಕೀಯದಿಂದ ದೂರ ಉಳಿದು, ಉದ್ಯೋಗ ಪಡೆಯುವತ್ತ ಗಮನ ಹರಿಸಬೇಕು. ರಾಜಕೀಯ ಅವನ ನಿರ್ಧಾರ. ಆದರೆ ಅದರಲ್ಲಿ ಅವನು ಮುಂದುವರಿಯುವುದನ್ನು ನಾನು ಬಯಸಲ್ಲ. ನನ್ನ ಮಾತು ಕೇಳುತ್ತಾನೋ, ಇಲ್ಲವೋ ಗೊತ್ತಿಲ್ಲ. ಆದರೆ, ಈ ವಿಷಯದಲ್ಲಿ ನಾನು ಅವನಿಗೆ ಬೆಂಬಲ ನೀಡುವುದಿಲ್ಲ’ ಎಂದು ಅನಿತಾ ದೀಪ್ಕೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.