ಬೆಂಗಳೂರು: ‘ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಹೆಸರಲ್ಲಿ ಪ್ರಕಟವಾಗುವ ಯಾವುದೇ ಪೋಸ್ಟ್ ಅನ್ನು ಅಧಿಕೃತ ಎಂದು ಪರಿಗಣಿಸಬೇಡಿ’ ಎಂದು ಅಭಿಜಿತ್ ದಿಪ್ಕೆ ಮನವಿ ಮಾಡಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಸಂಚಲನ ಸೃಷ್ಟಿಸಿರುವ ‘ಸಿಜೆಪಿ’ ಪೇಜ್ ಅಡ್ಮಿನ್ ಆಗಿರುವ ಅಭಿಜಿತ್, ‘ಎಕ್ಸ್’ ವೇದಿಕೆಯಲ್ಲಿ ಪೋಸ್ಟ್ ಮಾಡಿದ್ದಾರೆ. ತಮ್ಮ ಪಕ್ಷಕ್ಕೆ ಡಿಜಿಟಲ್ ವೇದಿಕೆಗಳಲ್ಲಿ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

‘ದಯವಿಟ್ಟು ಗಮನಿಸಿ. ಸದ್ಯ ನಮಗೆ ಎಲ್ಲ ವೇದಿಕೆಗಳಲ್ಲಿ ಪ್ರವೇಶ ನಿರ್ಬಂಧಿಸಲಾಗಿದೆ. ಹೀಗಾಗಿ, ಇನ್ನುಮುಂದೆ ಪ್ರಕಟವಾಗುವ ಯಾವುದೇ ಪೋಸ್ಟ್ ಕಾಕ್ರೋಚ್ ಜನತಾ ಪಕ್ಷದ ಅಧಿಕೃತ ಹೇಳಿಕೆ ಎಂದು ಪರಿಗಣಿಸಬೇಡಿ’ ಎಂದು ಬರೆದುಕೊಂಡಿದ್ದಾರೆ.

ಮುಂದುವರಿದು, ಕಾಕ್ರೋಚ್ ಜನತಾ ಪಕ್ಷದ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಇನ್ಸ್ಟಾಗ್ರಾಮ್ನಲ್ಲಿ ಪೇಜ್ ಹ್ಯಾಕ್ ಆಗಿದೆ. ನನ್ನ ವೈಯಕ್ತಿಕ ಇನ್ಸ್ಟಾಗ್ರಾಮ್ ಪುಟವೂ ಹ್ಯಾಕ್ ಆಗಿದೆ. ಟ್ವಿಟರ್ ಖಾತೆಯನ್ನು ನಿರ್ಬಂಧಿಸಲಾಗಿದೆ. ಹೆಚ್ಚುವರಿಯಾಗಿ ಇಟ್ಟುಕೊಂಡಿದ್ದ ಖಾತೆಯನ್ನೂ ಸ್ಥಗಿತಗೊಳಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
.ಕಾಕ್ರೋಚ್ ಜನತಾ ಪಾರ್ಟಿ ಡಿಜಿಟಲ್ ಸಂಚಲನ.ಕಾಕ್ರೋಚ್ ಪಾರ್ಟಿ ಮೂಲಕ ಜೆನ್ ಝೀ ಸಂಚಲನ ಸೃಷ್ಟಿಸಿದ ಅಭಿಜಿತ್ ದಿಪ್ಕೆ ಯಾರು?.
ಮತ್ತೊಂದು ಪೋಸ್ಟ್ನಲ್ಲಿ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರವಾಗಿ ಶಿಕ್ಷಣ ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು. ಸರ್ಕಾರದ ವೈಫಲ್ಯದಿಂದಾಗಿ ವಿದ್ಯಾರ್ಥಿಯೊಬ್ಬನ ಜೀವ ಹೋಗಿದೆ. ಆದರೆ, ನವ ಭಾರತದ ಹೊಣೆಗಾರಿಕೆಯ ಬಗ್ಗೆ ಆಗ್ರಹಿಸಿದ್ದಕ್ಕಾಗಿ ಕಾಕ್ರೋಚ್ ಜನತಾ ಪಕ್ಷದ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ಸ್ಟಾಗ್ರಾಮ್ನಲ್ಲಿ ಸಿಜೆಪಿ ಹೆಸರಲ್ಲಿ ಪೇಜ್ ತೆರೆದ ಐದು ದಿನಗಳಲ್ಲೇ 1.5 ಕೋಟಿಗೂ ಹೆಚ್ಚು ಫಾಲೋವರ್ಸ್ ಹುಟ್ಟಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.