ಜೈಪುರ: ಡಿಸೆಂಬರ್ ಮಧ್ಯಭಾಗದಲ್ಲೇ ರಾಜಸ್ಥಾನದಲ್ಲಿ ಶೀತಗಾಳಿಯು ಉತ್ತುಂಗಕ್ಕೆ ತಲುಪಿದೆ. ಮೈಕೊರೆಯುವ ಚಳಿಗೆ ಮರಳುಗಾಡಿನ ರಾಜ್ಯ ತತ್ತರಿಸುತ್ತಿದೆ.
ಈ ಋತುಮಾನದ ಅತ್ಯಂತ ಕಡಿಮೆ ತಾಪಮಾನ ಪಿಲಾನಿಯಲ್ಲಿ 1.1 ಡಿಗ್ರಿ, ಫತೇಪುರದಲ್ಲಿ 1.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಚುರುವಿನಲ್ಲಿ 2 ಡಿಗ್ರಿ, ನಾಗೌರ್‌ನಲ್ಲಿ 3.3 ಡಿಗ್ರಿ, ಸಿಕರ್‌ನಲ್ಲಿ 5 ಡಿಗ್ರಿ, ಸೆಲ್ಸಿಯಸ್ ದಾಖಲಾಗಿದೆ. ಇನ್ನು,ಬಿಕನೇರ್ 5.6 ಡಿಗ್ರಿ, ಹನುಮಾನ್‌ಗಡ 6 ಡಿಗ್ರಿ, ಗಂಗಾನಗರ 6.6, ಫಲೋಡಿಯಲ್ಲಿ 8.7, ಜೈಸಲ್ಮೇರ್ 7.3, ಜಲೋರ್ 8.1 ಮತ್ತು ಅಲ್ವಾರ್‌ನಲ್ಲಿ8.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಇಂದಿನಿಂದ ಡಿಸೆಂಬರ್ 20ರವರೆಗೆ ರಾಜ್ಯದಲ್ಲಿ ಶೀತ ಗಾಳಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ತಾಪಮಾನವು ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ವಾರ್, ಸಿಕರ್, ಝುಂಝುನು, ಬಿಕನೇರ್, ಚುರು, ಹನುಮಾನ್‌ಗಡ, ಜೈಸಲ್ಮೇರ್, ಶ್ರೀ ಗಂಗಾನಗರ್ ಮತ್ತು ನಾಗೌರ್ ಜಿಲ್ಲೆಗಳಲ್ಲಿ ಶೀತಗಾಳಿಯ ಪರಿಣಾಮ ಹೆಚ್ಚಾಗಿ ಇರಲಿದೆ ಎಂದು ಅದು ಹೇಳಿದೆ.
ಬಿಕನೇರ್, ಹನುಮಾನ್‌ಗಡ, ಸಿಕರ್ ಮತ್ತು ಚುರು ಜಿಲ್ಲೆಗಳಲ್ಲಿ ಶನಿವಾರ ಮತ್ತು ಭಾನುವಾರ ತೀವ್ರ ಶೀತಗಾಳಿಯನ್ನು ನಿರೀಕ್ಷಿಸಲಾಗಿದ್ದು, ಸಿಕರ್, ಚುರು, ಶ್ರೀ ಗಂಗಾನಗರ ಮತ್ತು ಹನುಮಾನ್‌ಗಡದಲ್ಲಿ ದಟ್ಟ ಮಂಜು ಬೀಳುವ ಸಾಧ್ಯತೆ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.