ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಜನಪ್ರಿಯತೆಯನ್ನು ಕಾಂಗ್ರೆಸ್‌ಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ: ಠಾಕೂರ್‌

Published 1 ಜೂನ್ 2023, 13:32 IST
Last Updated 1 ಜೂನ್ 2023, 13:32 IST
ಅಕ್ಷರ ಗಾತ್ರ

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯನ್ನು ಕಾಂಗ್ರೆಸ್‌ಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್‌ ಠಾಕೂರ್ ಗುರುವಾರ ಹೇಳಿದ್ದಾರೆ. ರಾಹುಲ್‌ ಗಾಂಧಿ ಅವರು ತಮ್ಮ ವಿದೇಶಿ ಪ್ರವಾಸದಲ್ಲಿ ಪ್ರಧಾನಿಯನ್ನು ಮಾತ್ರವಲ್ಲದೇ ಇಡೀ ದೇಶವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಠಾಕೂರ್‌, ಭಾರತವು ವಿಶ್ವಕ್ಕೆ ಭರವಸೆ ಮತ್ತು ಬೆಳವಣಿಗೆಯನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.

‘ಆಸ್ಟ್ರೇಲಿಯಾ ಪ್ರಧಾನಿ, ನರೇಂದ್ರ ಮೋದಿಯವರನ್ನು ‘ಬಾಸ್‌’ ಎಂದು ಹೇಳಿದರೆ, ಇಟಲಿ ಪ್ರಧಾನಿ, ಮೋದಿಯವರನ್ನು ವಿಶ್ವದ ಅತ್ಯಂತ ಪ್ರೀತಿಯ ನಾಯಕ ಎಂದು ಹೇಳಿದ್ದಾರೆ. ವಿಶ್ವದ ಇತರ ನಾಯಕರು ಮೋದಿ ನಾಯಕತ್ವವನ್ನು ಗೌರವಿಸುತ್ತಾರೆ. ಇವನ್ನೆಲ್ಲಾ ಕಾಂಗ್ರೆಸ್‌ ಅರಗಿಸಿಕೊಳ್ಳಲು ಸಾಧ್ಯವಾಗದೆ ಮೊದಲು ಬ್ರಿಟನ್‌, ಈಗ ಅಮೆರಿಕಲ್ಲಿ ನಡೆಯುತ್ತಿರುವ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ಮೋದಿ ವಿರುದ್ಧ ಮಾತನಾಡುತ್ತಿದೆ ಎಂದು ಠಾಕೂರ್‌ ಆರೋಪಿಸಿದ್ದಾರೆ.

‘ಭಾರತ ವಿರೋಧಿ ಘೋಷಣೆಗಳು ಉದ್ಭವವಾಗುತ್ತಿದ್ದು, ಅಂತಹ ಕಾರ್ಯಕ್ರಮಗಳಲ್ಲಿ ರಾಹುಲ್‌ ಗಾಂಧಿ ಮುಖ್ಯ ಅತಿಥಿಯಾಗಿರುತ್ತಾರೆ’ ಎಂದು ಠಾಕೂರ್ ಮೋದಿ ವಿರುದ್ಧದ ಟೀಕೆಗಳನ್ನು ಉಲ್ಲೇಖಿಸಿ ಹೇಳಿದರು. ಕಳೆದ ತಿಂಗಳು ಇಟಾಲಿಯನ್‌ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಪ್ರಧಾನಿ ಮೋದಿಯವರನ್ನು ‘ವಿಶ್ವದಾದ್ಯಂತ ಅತ್ಯಂತ ಪ್ರೀತಿಯ ನಾಯಕ’ ಎಂದು ಉಲ್ಲೇಖಿಸಿ ಹೊಗಳಿದ್ದಾರೆ ಎಂದು ಠಾಕೂರ್ ಹೇಳಿದರು.

ಬುಧವಾರ ಕ್ಯಾಲಿಫೋರ್ನಿಯಾದ ಸಾಂತಾ ಕ್ಲಾರಾದಲ್ಲಿ ಭಾರತೀಯ ಓವರ್‌ಸೀಸ್‌ ಕಾಂಗ್ರೆಸ್‌ ಯುಎಸ್‌ಎ ಆಯೋಜಿಸಿದ್ದ ‘ಮೊಹಬ್ಬತ್‌ ಕಿ ದುಕಾನ್’ ಕಾರ್ಯಕ್ರಮದಲ್ಲಿ ರಾಹುಲ್‌ ಗಾಂಧಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್‌, ‘ಭಾರತದಲ್ಲಿ ದೇವರಿಗಿಂತ ಹೆಚ್ಚು ತಿಳಿದುಕೊಂಡಿದ್ದೇವೆ ಎಂಬ ಜನರಿದ್ದಾರೆ. ಅಂತಹವರಿಗೆ ಪ್ರಧಾನಿ ಮೋದಿಯವರು ಮಾದರಿಯಾಗಿದ್ದಾರೆ. ಈ ಜನರು ಇತಿಹಾಸಕಾರರಿಗೆ ಇತಿಹಾಸ, ವಿಜ್ಞಾನಿಗಳಿಗೆ ವಿಜ್ಞಾನ ಮತ್ತು ಸೈನ್ಯಕ್ಕೆ ಯುದ್ಧವನ್ನು ಹೇಳಿಕೊಡುತ್ತಾರೆ’ ಎಂದು ಟೀಕಿಸಿದ್ದರು.

ವಿದೇಶಿ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ಭಾರತ ವಿರೋಧಿ ಪ್ರಚಾರಕ್ಕಾಗಿ ರಾಹುಲ್‌ ಹೋಗುತ್ತಾರೆ. ಈ ಮೂಲಕ ವಿದೇಶಿ ನೆಲದಲ್ಲಿ ದೇಶಕ್ಕೆ ಅವಮಾನಿಸುತ್ತಿದ್ದಾರೆ ಎಂದು ಠಾಕೂರ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT