ನವದೆಹಲಿ: ಇಂಧನ(Fuel), ರಸಗೊಬ್ಬರ(Fertiliesr) ಮತ್ತು ವಿದೇಶಿ ವಿನಿಮಯದ(Forex) ಸೇರಿ ಮೂರು ಎಫ್ಗಳ ಮೇಲೆ ಹೆಚ್ಚಿನ ಗಮನ ಹರಿಸಬೇಕೆಂದು ಕರೆ ನೀಡಿರುವ ಕೇಂದ್ರದ .ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಪ್ರಮುಖ ನಾಲ್ಕನೇ ಎಫ್ ಖಾಸಗಿ ಹೂಡಿಕೆಯ ಕುಸಿತದ ದರ(Falling rates of private investment)ಅನ್ನು ಮರೆತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಮತದಾರರ ಪಟ್ಟಿಗಳಲ್ಲಿ ದೊಡ್ಡ ಪ್ರಮಾಣದ ಅಕ್ರಮ ನಡೆಸುವ ಮೂಲಕ ಚುನಾವಣೆಗಳನ್ನು ಗೆಲ್ಲುವುದು ಒಂದು ವಿಷಯವಾದರೆ, ಆರ್ಥಿಕತೆಯನ್ನು ನಿಜವಾಗಿಯೂ ಏನು ಬಾಧಿಸುತ್ತಿದೆ ಎಂಬುದನ್ನು ಗುರುತಿಸುವುದು ಮತ್ತು ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವುದು ಸಂಪೂರ್ಣ ವಿಭಿನ್ನ ವಿಷಯ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಕುಟುಕಿದ್ದಾರೆ.

‘ಇಂಧನ, ರಸಗೊಬ್ಬರ ಮತ್ತು ವಿದೇಶಿ ವಿನಿಮಯ ಹೆಚ್ಚಿನ ಕಳವಳಕಾರಿ ವಿಷಯಗಳು ಎಂದು ಹಣಕಾಸು ಸಚಿವೆ ಹೇಳಿದ್ದಾರೆ. ಆದರೆ, ಕಳೆದ ಕೆಲವು ವರ್ಷಗಳಿಂದ ಕಂಡುಬರುತ್ತಿರುವ ಖಾಸಗಿ ಹೂಡಿಕೆಯ ಕುಸಿತದ ದರದ ಪ್ರಮುಖ ಅಂಶವನ್ನು ಅವರು ಮರೆತಿದ್ದಾರೆ’ಎಂದು ರಮೇಶ್ ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ.

ನಿವ್ವಳ ಎಫ್ಡಿಐ ಒಳಹರಿವು ಕಡಿಮೆಯಾಗಿದೆ. ಜಿಡಿಪಿಯ ಶೇಕಡಾವಾರು ಪ್ರಮಾಣದಲ್ಲಿ ಖಾಸಗಿ ಕಾರ್ಪೊರೇಟ್ ಹೂಡಿಕೆ 2014ರ ಪೂರ್ವದ ಗರಿಷ್ಠ ಮಟ್ಟಕ್ಕಿಂತ ಅರ್ಧಕ್ಕೆ ಇಳಿದಿದೆ ಎಂದು ಅವರು ಗಮನ ಸೆಳೆದಿದ್ದಾರೆ.

ಭಾರತೀಯ ಉದ್ಯಮಿಗಳು ವಿದೇಶದಲ್ಲಿ ಹೆಚ್ಚು ಲಾಭದಾಯಕ ಉದ್ಯಮಗಳನ್ನು ಹುಡುಕುತ್ತಿದ್ದಾರೆ. ಭಾರತೀಯ ಕಾರ್ಪೊರೇಟ್ ದಿಗ್ಗಜರು ವಿದೇಶದಲ್ಲಿ ನೆಲೆಸುತ್ತಿದ್ದಾರೆ ಎಂದು ರಮೇಶ್ ವಾಗ್ದಾಳಿ ನಡೆಸಿದ್ದಾರೆ.

ವಿಶಾಲ ಆಧಾರಿತ ಗ್ರಾಹಕ ಬೇಡಿಕೆಯ ಬೆಳವಣಿಗೆಯ ಕೊರತೆಯು ಕಂಪನಿಗಳು ಹೂಡಿಕೆ ಮಾಡುವುದನ್ನು ತಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ಅದೇ ರೀತಿ, ನರೇಂದ್ರ ಮೋದಿ ಸರ್ಕಾರವು ಸೃಷ್ಟಿಸಿರುವ ಬೆದರಿಕೆ, ಮೂಗು ತೂರಿಸುವಿಕೆಯ ವಾತಾವರಣವು ಕಂಪನಿಗಳ ಬೆಳವಣಿಗೆಗೆ ಅಡ್ಡಿಯಾಗಿದೆ ಎಂದೂ ಅವರು ಹೇಳಿದ್ದಾರೆ.

ಇಂಧನ(Fuel), ರಸಗೊಬ್ಬರ(Fertiliesr) ಮತ್ತು ವಿದೇಶಿ ವಿನಿಮಯದ(Forex)ಸೇರಿ ಮೂರು ಎಫ್ಗಳ ಬಗ್ಗೆ ದೇಶ ಹೆಚ್ಚಿನ ಗಮನ ಹರಿಸಬೇಕೆಂದು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿಕೆ ನೀಡಿದ ಒಂದು ದಿನದ ನಂತರ ಕಾಂಗ್ರೆಸ್ ಈ ರೀತಿ ವ್ಯಂಗ್ಯ ಮಾಡಿದೆ.

ಇಂಧನ, ಚಿನ್ನದ ಬೆಲೆ ಗಗನಕ್ಕೇರಿವೆ. ಇವು ಬಾಹ್ಯ ಕಳವಳವನ್ನು ಸೃಷ್ಟಿಸಿವೆ. ರಸಗೊಬ್ಬರ ಬೆಲೆಯೂ ಊಹಿಸಲಾಗದಷ್ಟು ಏರಿಕೆ ಕಂಡುಬಂದಿದೆ ಎಂದು ಅವರು ಮೋದಿ ಮಾತಿಗೆ ಸಂದರ್ಭೋಚಿತವಾಗಿ ವಿವರಿಸಿದ್ದರು.

ಆದ್ದರಿಂದ, ವಿದೇಶಿ ವಿನಿಮಯವನ್ನು ಸಂರಕ್ಷಿಸುವ ಅಗತ್ಯವಿದೆ ಎಂದಿದ್ದ ಅವರು, ಪ್ರಸ್ತುತ ಸಂದರ್ಭದಲ್ಲಿ ಇಂಧನ, ರಸಗೊಬ್ಬರ ಮತ್ತು ವಿದೇಶಿ ವಿನಿಮಯ ಸೇರಿ ‘3F’ಗಳ ಮೇಲೆ ಗಮನಹರಿಸುವ ಅವಶ್ಯಕತೆ ಇದೆ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.