ನವದೆಹಲಿ: ಮುಂದಿನ ವಾರ ಆರಂಭವಾಗಲಿರುವ ಎರಡನೇ ಹಂತದ ಬಜೆಟ್ ಅಧಿವೇಶನದಲ್ಲಿ ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆ ಮತ್ತು ಪರಿಸ್ಥಿತಿಯ ಕುರಿತು ಪೂರ್ಣ ಪ್ರಮಾಣದ ತುರ್ತು ಚರ್ಚೆಗೆ ಅವಕಾಶ ನೀಡಬೇಕು. ಸರ್ಕಾರವು ಚರ್ಚೆಗೆ ಅವಕಾಶ ನೀಡದೆ ಕೇವಲ ತನ್ನ ಹೇಳಿಕೆಯನ್ನಷ್ಟೇ ನೀಡಿದರೆ ಸಾಲದು’ ಎಂದು ಕಾಂಗ್ರೆಸ್ ಶುಕ್ರವಾರ ಆಗ್ರಹಿಸಿದೆ.

‘ಪಿಟಿಐ’ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ‘ಸುಮ್ಮನೆ ಸಚಿವರು ಬರುತ್ತಾರೆ. ಹೇಳಿಕೆ ನೀಡಿ ಹೋಗುತ್ತಾರೆ ಎನ್ನುವಂತಾಗಬಾರದು. ಹೀಗೆ ಮಾಡಿ, ನಮಗೆ ಪ್ರಶ್ನೆ ಕೇಳದಂತೆ ಮಾಡಲಾಗುತ್ತದೆ’ ಎಂದರು.

‘ಅಮೆರಿಕ, ಇಸ್ರೇಲ್ ಮತ್ತು ಇರಾನ್ನ ಯುದ್ಧ, ಗಲ್ಫ ದೇಶಗಳ ಮೇಲೆ ಇರಾನ್ ನಡೆಸುತ್ತಿರುವ ದಾಳಿ, ಹಿಂದೂಮಹಾಸಾಗರದಲ್ಲಿ ಅಮೆರಿಕದ ಚಟುವಟಿಕೆ ಕುರಿತು ಚರ್ಚೆ ನಡೆಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.