ನವದೆಹಲಿ: ‘ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕು’ ಎಂದು ಕಾಂಗ್ರೆಸ್ ಸೋಮವಾರ ಆಗ್ರಹಿಸಿದೆ.

‘ಶಿಕ್ಷಣ ಸಚಿವಾಲಯದಿಂದ ಹಲವು ಪ್ರಮಾದಗಳಾಗಿದ್ದರೂ ಪ್ರಧಾನ್ ಅವರನ್ನೇ ಮುಂದುವರಿಸುತ್ತಿರುವುದರ ಕುರಿತಂತೆ ಪ್ರಧಾನಿಯು ಜನರಿಗೆ ಉತ್ತರ ಕೊಡಬೇಕು’ ಎಂದು ಒತ್ತಾಯಿಸಿದೆ.

ಸಿಬಿಎಸ್ಇಯ 12ನೇ ತರಗತಿ ಫಲಿತಾಂಶ ಪ್ರಕಟಗೊಂಡ ಬಳಿಕ ಮರು ಮೌಲ್ಯಮಾಪನ ಮತ್ತು ಅಂಕಗಳ ಪರಿಶೀಲನೆ ಪೋರ್ಟಲ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

ತಾಂತ್ರಿಕ ದೋಷ ಪರಿಹಾರ ಕ್ಕಾಗಿ ಸಿಬಿಎಸ್ಇಯು ಐಐಟಿ– ಮದ್ರಾಸ್ ಹಾಗೂ ಐಐಟಿ ಕಾನ್ಪುರದ ತಜ್ಞರನ್ನು ನೇಮಿಸಿಕೊಂಡ ಬೆನ್ನಿಗೆ ಕಿಡಿಕಾರಿದೆ.

ಸಿಬಿಎಸ್ಇಯು 12ನೇ ತರಗತಿ ಪರೀಕ್ಷೆಗಳಿಗೆ ಆನ್ ಸ್ಕ್ರೀನ್ ಮಾರ್ಕಿಂಗ್ (ಒಎಸ್ಎಂ, ಡಿಜಿಟಲ್ ಮೌಲ್ಯಮಾಪನ) ವ್ಯವಸ್ಥೆ ಪರಿಚಯಿಸಿದ್ದು, ಇದು ದೇಶ ದಾದ್ಯಂತ ಲಕ್ಷಾಂತರ ಮಕ್ಕಳ ಶೈಕ್ಷಣಿಕ ಭವಿಷ್ಯವನ್ನು ಅಸ್ತವ್ಯಸ್ತಗೊಳಿಸಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಂ ರಮೇಶ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ನೂತನ ಡಿಜಿಟಲ್ ಪದ್ಧತಿಯಿಂದ 12ನೇ ತರಗತಿಯ ಒಟ್ಟಾರೆ ಉತ್ತೀರ್ಣ ಪ್ರಮಾಣವು ಹಿಂದೆಂದೂ ಇಲ್ಲದ ರೀತಿಯಲ್ಲಿ ಶೇ 88ರಿಂದ ಶೇ 85ಕ್ಕೆ (ಶೇ 3ರಷ್ಟು) ಕುಸಿದಿದೆ. ವಿದ್ಯಾರ್ಥಿಗಳಿಗೆ ದೊರೆತಿರುವ ಸ್ಕ್ಯಾನ್ ಮಾಡಿದ ಉತ್ತರ ಪತ್ರಿಕೆಗಳು ಅಸ್ಪಷ್ಟವಾಗಿವೆ. ಅಂಕಗಳ ಎಣಿಕೆಯಲ್ಲೂ ತಪ್ಪಾಗಿದೆ. ಒಬ್ಬರ ಉತ್ತರ ಪತ್ರಿಕೆಯನ್ನು ಮತ್ತೊಬ್ಬರ ಹೆಸರಿಗೆ ಲಿಂಕ್ ಮಾಡಲಾಗಿದೆ. ಮರುಮೌಲ್ಯಮಾಪನಕ್ಕೆ ದುಬಾರಿ ಶುಲ್ಕ ವಿಧಿಸಲಾಗಿದೆ’ ಎಂದು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಉಲ್ಲೇಖಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-51-1444382282

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.