ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕರ್ನಾಟಕದಲ್ಲಿ ಗಣೇಶನನ್ನೂ ಕಾಂಗ್ರೆಸ್ ಕಂಬಿಗಳ ಹಿಂದೆ ಇಟ್ಟಿದೆ: ಮೋದಿ

Published : 17 ಸೆಪ್ಟೆಂಬರ್ 2024, 13:48 IST
Last Updated : 17 ಸೆಪ್ಟೆಂಬರ್ 2024, 13:48 IST
ಫಾಲೋ ಮಾಡಿ
Comments

ಭುವನೇಶ್ವರ: ಗಣೇಶ ಪೂಜೆಯಲ್ಲಿ ನಾನು ಪಾಲ್ಗೊಂಡಿದ್ದಕ್ಕೆ ಕಾಂಗ್ರೆಸ್‌ ಮತ್ತು ಅದರ ‘ರಚನಾ ವ್ಯವಸ್ಥೆ’ಯು ಅಸಮಾಧಾನಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದರು.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ನಿವಾಸದಲ್ಲಿ ಏರ್ಪಡಿಸಿದ್ದ ಗಣೇಶ ಪೂಜೆಯಲ್ಲಿ ಪಾಲ್ಗೊಂಡಿದ್ದಕ್ಕೆ ಟೀಕಿಸಿದ ವಿರೋಧ ಪಕ್ಷಗಳನ್ನು ಪರೋಕ್ಷವಾಗಿ ಉಲ್ಲೇಖಿಸಿ ಈ ಹೇಳಿಕೆ ನೀಡಿದರು.

ಭುವನೇಶ್ವರದಲ್ಲಿ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ಗಣೇಶ ಉತ್ಸವವು ನಮ್ಮ ದೇಶದ ಹಬ್ಬ ಮಾತ್ರ ಅಲ್ಲ, ಇದು ನಮ್ಮ ಸ್ವಾತಂತ್ರ್ಯ ಚಳವಳಿಯಲ್ಲಿಯೂ ಬಹುಮುಖ್ಯ ಪಾತ್ರ ವಹಿಸಿತ್ತು’ ಎಂದು ಹೇಳಿದರು.

‘ಒಡೆದು ಆಳುವ ನೀತಿ’ಯಡಿ ಭಾರತವನ್ನು ಆಳ್ವಿಕೆ ಮಾಡುತ್ತಿದ್ದ ಬ್ರಿಟಿಷರು ಗಣೇಶ ಉತ್ಸವವನ್ನು ದ್ವೇಷಿಸುತ್ತಿದ್ದರು. ಆದರೆ ಇಂದು ಅಧಿಕಾರದ ಲಾಲಸೆ ಇರುವ, ಸಮಾಜವನ್ನು ಒಡೆಯುವಲ್ಲಿ ನಿರತರಾಗಿರುವ ಜನರಿಗೂ ಗಣೇಶ ಪೂಜೆ ಸಮಸ್ಯೆಯಾಗಿದೆ. ಕಾಂಗ್ರೆಸ್‌ ಮತ್ತು ಅದರ ಪರಿಸರ ವ್ಯವಸ್ಥೆಯ ಒಳಗಿರುವ ಜನರು ಗಣೇಶ ಪೂಜೆಯಲ್ಲಿ ನಾನು ಪಾಲ್ಗೊಂಡಿದ್ದಕ್ಕೆ ಕೋಪಗೊಂಡಿದ್ದಾರೆ ಎಂದು ಹೇಳಿದರು.

ಕರ್ನಾಟಕದಲ್ಲಿ ಇವರು ಗಣೇಶನನ್ನೂ ಕಂಬಿಗಳ ಹಿಂದೆ ಇಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT