ನವದೆಹಲಿ: ಪಾಕಿಸ್ತಾನದ ಜತೆಗಿನ ಸಂಘರ್ಷದ ಬಗ್ಗೆ ಮೋದಿ ಆಡಳಿತವನ್ನು ಪ್ರಶ್ನಿಸುವ ಕಾಂಗ್ರೆಸ್ ಮತ್ತು ಅದರ ನಾಯಕರ ವಿರುದ್ಧ ಹರಿಹಾಯ್ದಿರುವ ಬಿಜೆಪಿಯು, ವಿಪಕ್ಷದ ‘ಜೈ ಹಿಂದ್ ಯಾತ್ರೆಯು ಜೈ ಪಾಕಿಸ್ತಾನ ಯಾತ್ರೆಯಂತೆ ತೋರುತ್ತಿದೆ’ ಎಂದು ಟೀಕಾಪ್ರಹಾರ ಮಾಡಿದೆ.

ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಅವರು ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡುತ್ತಾ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಸೇರಿ ಕಾಂಗ್ರೆಸ್ನ ಉನ್ನತ ನಾಯಕರು ‘ಆಪರೇಷನ್ ಸಿಂಧೂರ’ದಲ್ಲಿ ಭಾರತವು ಕಳೆದುಕೊಂಡ ವಿಮಾನಗಳ ಲೆಕ್ಕ ಕೇಳಿದ್ದಾರೆ. ಜೈರಾಮ್ ರಮೇಶ್ ಅವರು ವಿದೇಶಕ್ಕೆ ಸರ್ವಪಕ್ಷ ನಿಯೋಗ ಹೋಗಿರುವ ಸಂಸದರು ಮತ್ತು ಸದಸ್ಯರನ್ನು ಭಯೋತ್ಪಾದಕರಿಗೆ ಹೋಲಿಸಿದ್ದಾರೆ ಎಂದು ಆರೋಪಿಸಿದರು.

ಭಯೋತ್ಪಾದಕ ನೆಲೆಗಳು ಮತ್ತು ಪಾಕಿಸ್ತಾನದಲ್ಲಿ ನಾಶವಾದ ವಾಯುನೆಲೆಗಳ ವಿವರಗಳನ್ನು ರಾಹುಲ್ ಗಾಂಧಿ ಕೇಳುತ್ತಿಲ್ಲ. ಅವರ ಪಕ್ಷವು ಭಾರತೀಯ ಸೇನೆ ಶತ್ರು ದೇಶಕ್ಕೆ ಮಾಡಿರುವ ಹಾನಿಗಿಂತ ಭಾರತೀಯ ಯುದ್ಧ ವಿಮಾನಗಳ ನಷ್ಟದ ಬಗ್ಗೆ ಮಾತ್ರ ಪ್ರಶ್ನಿಸುತ್ತಿದೆ. ಕಾಂಗ್ರೆಸ್ನ ನಾಯಕರು ಪಾಕಿಸ್ತಾನಕ್ಕೆ ‘ಬಬ್ಬರ್’ (ಕದನವೀರ) ಮತ್ತು ಭಾರತಕ್ಕೆ ‘ಗಬ್ಬರ್’ (ಶೋಲೆ ಚಿತ್ರದಲ್ಲಿನ ಖಳನಾಯಕ) ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಅವರು ಟೀಕಿಸಿದರು.

‘ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ನಡೆಸುವ ಮೊದಲೇ ಭಾರತದ ಬ್ರಹ್ಮೋಸ್ ಕ್ಷಿಪಣಿಗಳು ತಮ್ಮ ದೇಶದ ಪ್ರಮುಖ ಮಿಲಿಟರಿ ನೆಲೆಗಳಿಗೆ ಅಪ್ಪಳಿಸಿದವು’ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ನೀಡಿರುವ ಹೇಳಿಕೆಗಳನ್ನು ಉಲ್ಲೇಖಿಸಿದ ಪಾತ್ರಾ, ‘ರಾಹುಲ್ ಗಾಂಧಿಯವರು ತಮ್ಮ ಸ್ನೇಹಿತ ಷರೀಫ್ ಅವರ ಈ ಮಾತನ್ನು ಕೇಳಬೇಕು’ ಎಂದು ಮೂದಲಿಸಿದರು.

ವಿಶ್ವದ ಪ್ರಮುಖ ರಾಷ್ಟ್ರಗಳಿಗೆ ಹೋಗಿರುವ ಸರ್ವ ಪಕ್ಷಗಳ ನಿಯೋಗದಲ್ಲಿರುವ ಕಾಂಗ್ರೆಸ್ನ ಸದಸ್ಯರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರೂ ಭಾರತದ ನಿಲುವನ್ನು ದೃಢವಾಗಿ ಪ್ರದರ್ಶಿಸುತ್ತಿದ್ದಾರೆ. ಆದರೆ, ಜೈರಾಮ್ ರಮೇಶ್ ಅವರು ಒಂದೇ ಪದದಲ್ಲಿ ಅವರನ್ನೆಲ್ಲ ಭಯೋತ್ಪಾದಕರಿಗೆ ಹೋಲಿಸಿದರು ಎಂದು ಹರಿಹಾಯ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.