‘ಈ ಅಪರಾಧ ಕೃತ್ಯ ಎಸಗುವಲ್ಲಿ ರಾಯ್ ಪಾತ್ರ ಇತ್ತು ಎಂಬುದು ಈಗಾಗಲೇ ಕಂಡುಬಂದಿದೆ. ಆದರೆ, ಆತನಿಗೆ ಸೇರಿದ ವಸ್ತುಗಳು ಹಾಗೂ ಆತನ ಬಟ್ಟೆಗಳನ್ನು ಜಪ್ತಿ ಮಾಡಲು ತಾಲಾ ಪೊಲೀಸ್ ಠಾಣೆ ಅಧಿಕಾರಿಗಳು ಅನಗತ್ಯವಾಗಿ ಎರಡು ದಿನ ತಡ ಮಾಡಿದ್ದಾರೆ. ವಿಳಂಬ ಮಾಡಿರದಿದ್ದಲ್ಲಿ, ರಾಯ್ ವಿರುದ್ಧ ಪ್ರಬಲ ಸಾಕ್ಷ್ಯ ಲಭಿಸಿದಂತಾಗುತ್ತಿತ್ತು’ ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.