ಚೆನ್ನೈ: ತಮಿಳಗ ವೆಟ್ರಿ ಕಳಗಂ(ಟಿವಿಕೆ) ಪಕ್ಷದ ಅಧ್ಯಕ್ಷ, ನಟ ಸಿ. ಜೋಸೆಫ್ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವುದು ಮೂರು ಸಣ್ಣ ಪಕ್ಷಗಳ ಬೆಂಬಲವನ್ನು ಅವಲಂಬಿಸಿದೆ.

ಹೌದು, ಸಿಪಿಎಂ, ಸಿಪಿಐ ಮತ್ತು ವಿಸಿಕೆ ಪಕ್ಷಗಳು ಶುಕ್ರವಾರ(ಮೇ 8) ಉನ್ನತ ಮಟ್ಟದ ಸಮಿತಿ ಸಭೆಗಳನ್ನು ನಡೆಸಲಿದ್ದು, ಟಿವಿಕೆಯನ್ನು ಬೆಂಬಲಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿವೆ. ಗುರುವಾರ ಅಧಿಕೃತವಾಗಿ ಆ ಪಕ್ಷಗಳನ್ನು ಟಿವಿಕೆ ಸಂಪರ್ಕಿಸಿದೆ.

ಸರ್ಕಾರ ರಚಿಸಲು ಅಗತ್ಯವಿರುವಷ್ಟು ಸಂಖ್ಯೆಯ ಬಲ ಟಿವಿಕೆ ಬಳಿ ಇಲ್ಲ. ಹಾಗಾಗಿ, ಪ್ರಮಾಣವಚನಕ್ಕೆ ಅನುಮತಿ ನೀಡಲಾಗದು ಎಂದು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಗುರುವಾರ ಮತ್ತೊಮ್ಮೆ ವಿಜಯ್ಗೆ ಸ್ಪಷ್ಟಪಡಿಸಿದ ಬಳಿಕ ಈ ಬೆಳವಣಿಗೆ ಆಗಿದೆ.

ಪಕ್ಷವು 118 ಶಾಸಕರ ಅಗತ್ಯ ಬಲವನ್ನು ಹೊಂದಿದ್ದರೆ ಮಾತ್ರ ವಿಜಯ್ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸಲಾಗುವುದು ಎಂದು ರಾಜ್ಯಪಾಲರು ಸ್ಪಷ್ಟಪಡಿಸಿದ್ದಾರೆ.

ಟಿವಿಕೆಯ 108 ಶಾಸಕರು, ಕಾಂಗ್ರೆಸ್ನ 5 ಶಾಸಕರು ಸೇರಿ ವಿಜಯ್ ಬಳಿ ಈಗ 113 ಶಾಸಕರ ಬೆಂಬಲವಿದೆ. ಸಿಪಿಎಂ, ಸಿಪಿಐ ಮತ್ತು ವಿಸಿಕೆ ಪಕ್ಷಗಳ ಬಳಿ ತಲಾ ಇಬ್ಬರು ಶಾಸಕರು ಸೇರಿ 6 ಮಂದಿ ಟಿವಿಕೆ ಬೆಂಬಲಿಸಿದರೆ ವಿಜಯ್ ಹಾದಿ ಸುಗಮವಾಗಲಿದೆ.

ಈ ಮಧ್ಯೆ, ಟಿವಿಕೆಯನ್ನು ಸರ್ಕಾರ ರಚಿಸಲು ಆಹ್ವಾನಿಸದಿರುವ ರಾಜ್ಯಪಾಲರ ನಡೆಯನ್ನು ಸಿಪಿಎಂ, ಸಿಪಿಐ ಮತ್ತು ವಿಸಿಕೆ ಪಕ್ಷಗಳು ಖಂಡಿಸಿದ್ದು, ಬೆಂಬಲ ನೀಡುವ ಅಶಾವಾದ ವ್ಯಕ್ತವಾಗಿದೆ.

234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ವಿಜಯ್ ಅವರ ಟಿವಿಕೆ ಪಕ್ಷ 108 ಸ್ಥಾನಗಳನ್ನು ಗೆದ್ದಿದೆ ಸರಳ ಬಹುಮತದೊಂದಿಗೆ ಸರ್ಕಾರ ರಚಿಸಲು ಅವರಿಗೆ 10 ಶಾಸಕರ ಬೆಂಬಲ ಬೇಕು. ಐದು ಶಾಸಕರಿರುವ ಕಾಂಗ್ರೆಸ್ ಬೆಂಬಲ ಘೋಷಿಸಿದೆ. ಪಟ್ಟಾಳಿ ಮಕ್ಕಳ್ ಕಚ್ಚಿ (ಪಿಎಂಕೆ) ನಾಲ್ಕು ಸ್ಥಾನಗಳನ್ನು. ಸಿಪಿಐ ಮತ್ತು ಸಿಪಿಐ-ಎಂ ತಲಾ ಎರಡು ಸ್ಥಾನಗಳನ್ನು ಹೊಂದಿವೆ. ನಿರ್ಗಮಿತ ಆಡಳಿತ ಪಕ್ಷವ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) 59 ಸ್ಥಾನಗಳನ್ನು ಗೆದ್ದಿದ್ದರೆ, ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) 47 ಸ್ಥಾನಗಳನ್ನು ಗೆದ್ದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.